- ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ
- 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದ ರಜತ್ ಪಡೆ
- ತಂಡದ ಪರ ಆಕರ್ಷಕ ಇನ್ನಿಂಗ್ಸ್ ನೀಡಲು ವಿಫಲವಾದ ವಿರಾಟ್ ಕೊಹ್ಲಿ
RCB vs DC: ಇಂದು (ಏ.18) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.
ಟಾಸ್ ಗೆದ್ದ ಅಕ್ಷರ್ ಪಟೇಲ್, ಆರ್ಸಿಬಿಗೆ ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡ ರಜತ್ ಪಾಟಿದಾರ್ ಪಡೆ 175 ರನ್‌ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಫಿಲ್ ಸಾಲ್ಟ್ (63 ರನ್, 38 ಎಸೆತ) ಉತ್ತಮ ಓಪನಿಂಗ್ ಪ್ರದರ್ಶನ ನೀಡಿದರು. ಆದರೆ, ವಿರಾಟ್ ಕೊಹ್ಲಿ ಮಾತ್ರ ಕಿಕ್ಕಿರಿದ್ದು ಸೇರಿದ್ದ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದರು. ಪವರ್ಪ್ಲೇನಲ್ಲೇ ವಿಕೆಟ್ ಒಪ್ಪಿಸುವ ಮೂಲಕ ಅತ್ಯಧಿಕ ರನ್ ಗಳಿಸಿರುವ ವೈಭವ್ ಸೂರ್ಯವಂಶಿಯನ್ನು ಹಿಂದಿಕ್ಕುವಲ್ಲಿ ಎಡವಿದರು.
ಐಪಿಎಲ್ 2026ರ ಪವರ್‌ಪ್ಲೇನಲ್ಲಿ 160 ರನ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿರುವ ವಿರಾಟ್ ಕೊಹ್ಲಿ, ಇನ್ನೂ 19 ರನ್‌ಗಳನ್ನು ಗಳಿಸಿದಿದ್ದರೆ, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಓಪನರ್ ವೈಭವ್ ಸೂರ್ಯವಂಶಿ ಅವರನ್ನು ಹಿಂದಿಕ್ಕಿ, ಮೊದಲ ಸ್ಥಾನಕ್ಕೇರುತ್ತಿದ್ದರು. ಇದುವರೆಗೆ ಸೂರ್ಯವಂಶಿ ಪವರ್‌ಪ್ಲೇನಲ್ಲಿ 179 ರನ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.
ಆರ್ಸಿಬಿ ಬ್ಯಾಟಿಂಗ್ ವಿವರ
ಫಿಲ್ ಸಾಲ್ಟ್ (63 ರನ್, 38 ಎಸೆತ)
ವಿರಾಟ್ ಕೊಹ್ಲಿ (19 ರನ್, 13 ಎಸೆತ)
ದೇವದತ್ತ ಪಡಿಕ್ಕಲ್ (18 ರನ್, 13 ಎಸೆತ)
ರಜತ್ ಪಟಿದಾರ್ (8 ರನ್, 4 ಎಸೆತ)
ಟಿಮ್ ಡೇವಿಡ್ ( 26 ರನ್, 17 ಎಸೆತ)
ರೋಮಾರಿಯೋ ಶೆಫರ್ಡ್ ( 1 ರನ್, 4 ಎಸೆತ)
ಕೃನಾಲ್ ಪಾಂಡ್ಯ (12 ರನ್, 10 ಎಸೆತ)
ಜಿತೇಶ್ ಶರ್ಮ (14 ರನ್, 20 ಎಸೆತ)
ಬೌಲಿಂಗ್ ವಿವರ
ಮುಖೇಶ್ ಕುಮಾರ್ - 1 ವಿಕೆಟ್
ಲುಂಗಿ ಎನ್ಗಿಡಿ - 2 ವಿಕೆಟ್
ಕುಲ್ದೀಪ್ ಯಾದವ್ - 2 ವಿಕೆಟ್
ಅಕ್ಷರ್ ಪಟೇಲ್ - 2 ವಿಕೆಟ್