MI vs PBKS: ಇಂದು (ಏ.16) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ 7 ವಿಕೆಟ್ಗಳಿಂದ ಜಯ ಗಳಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ಗೆ ರೋಹಿತ್ ಶರ್ಮ ಅವರ ಅನುಪಸ್ಥಿತಿ ಕಾಡಿತು. ಕ್ವಿಂಟನ್ ಡಿಕಾಕ್ (ಅಜೇಯ 59 ಎಸೆತ, 112 ರನ್) ಮತ್ತು ನಮನ್ ಧಿರ್ (31 ಎಸೆತ, 50 ರನ್) ಅವರ ಭರ್ಜರಿ ಇನ್ನಿಂಗ್ಸ್ ಬಿಟ್ಟರೆ ಇನ್ಯಾರಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ. 20 ಓವರ್ ಅಂತ್ಯಕ್ಕೆ ಎಂಐ 195 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಶ್ರೇಯಸ್ ಪಡೆ 3 ವಿಕೆಟ್ ನಷ್ಟಕ್ಕೆ ಸುಲಭ ಗೆಲುವು ಸಾಧಿಸಿತು.
ಆರಂಭದಲ್ಲೇ ಸುಲಭ ಕ್ಯಾಚ್ ಬಿಟ್ಟ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಬೌಲಿಂಗ್ ಈ ಎಡವಟ್ಟು ಮಾಡಿದರು. ಇದೇನಾದರೂ ಮಿಸ್ ಮಾಡದೆ ಹಿಡಿದಿದ್ದರೆ, ಖಂಡಿತವಾಗಿ ಮುಂಬೈಗೆ ಇಂತಹ ಸೋಲಾಗುತ್ತಿರಲಿಲ್ಲ. ಪಂಜಾಬ್ ಪರ ಪ್ರಭ್ಸಿಮ್ರನ್ ಸಿಂಗ್ (80 ರನ್, 39 ಎಸೆತ) ಮತ್ತು ಶ್ರೇಯಸ್ ಅಯ್ಯರ್ (66 ರನ್, 36 ಎಸೆತ) ಆಡಿದ ಅದ್ಭುತ ಇನ್ನಿಂಗ್ಸ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.