ಡಬ್ಲ್ಯುಪಿಎಲ್ ಹರಾಜಿಗೆ ಕರ್ನಾಟಕದ 10 ಆಟಗಾರ್ತಿಯರು
ಬೆಂಗಳೂರು: ಮುಂದಿನ ವರ್ಷದ 4ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ಗೆ (WPL) ಪೂರ್ವಭಾವಿಯಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನವೆಂಬರ್ 27ರಂದು ನವದೆಹಲಿಯಲ್ಲಿ ನಡೆಯಲಿದ್ದು, ಇದರಲ್ಲಿ ಕರ್ನಾಟಕದ 10 ಆಟಗಾರ್ತಿಯರೂ ಭಾಗವಹಿಸಲಿದ್ದಾರೆ.
ಈ ಪೈಕಿ ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಗರಿಷ್ಠ 40 ಲಕ್ಷ ರೂ. ಮೂಲಬೆಲೆ ಹೊಂದಿದ್ದರೆ, ಶುಭಾ ಸತೀಶ್ ಮತ್ತು ಮೋನಿಕಾ ಪಟೇಲ್ ತಲಾ 30 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಉಳಿದಂತೆ ವೃಂದಾ ದಿನೇಶ್, ಪ್ರತ್ಯುಷಾ ಕುಮಾರ್, ಸಹನಾ ಪವಾರ್, ಪ್ರಿಯಾ ಚವನ್, ಬಿ.ಜಿ. ತೇಜಸ್ವಿನಿ, ಮಿಥಿಲಾ ವಿನೋದ್, ಕಾಶ್ವಿ ಕಂಡಿಕುಪ್ಪ ತಲಾ 10 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.
ಇಬ್ಬರು ಕನ್ನಡತಿಯರಾದ ಶ್ರೇಯಾಂಕಾ ಪಾಟೀಲ್ (ಆರ್ಸಿಬಿ) ಮತ್ತು ನಿಕಿ ಪ್ರಸಾದ್ (ಡೆಲ್ಲಿ) ಈಗಾಗಲೆ ರಿಟೇನ್ ಆಗಿದ್ದಾರೆ. ಹರಾಜಿನಲ್ಲಿ 194 ಭಾರತೀಯರ ಒಟ್ಟು 277 ಆಟಗಾರ್ತಿಯರು ಭಾಗವಹಿಸಲಿದ್ದು, 5 ತಂಡಗಳು ಗರಿಷ್ಠ 73 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ. cricket.