RCB  
ಐಪಿಎಲ್

IPL 2026 Auction; RCB ಬಳಗಕ್ಕೆ ಅಯ್ಯರ್, ಮಂಗೇಶ್ ಎಂಟ್ರಿ: ಮತ್ತಷ್ಟು ಬಲಿಷ್ಠಗೊಂಡ ಹಾಲಿ ಚಾಂಪಿಯನ್​​ ತಂಡ!

ಪ್ರಮುಖ ಮುಖ್ಯಾಂಶಗಳು

  • 2026ರ ಹರಾಜಿನಲ್ಲಿ 10 ತಂಡಗಳು 77 ಆಟಗಾರರಿಗಾಗಿ ಒಟ್ಟು 215.45 ಕೋಟಿ ರೂ.ಗಳನ್ನು ಖರ್ಚು
  • ಆರ್​ಸಿಬಿ ಮಾಜಿ ಆಟಗಾರ ಕ್ಯಾಮರೋನ್​ ಗ್ರೀನ್ (Cameron Green)​ ಅವರು ಬರೋಬ್ಬರಿ 25.20 ಕೋಟಿ ರೂ.ಗೆ ಕೋಲ್ಕತ ನೈಟ್​ ರೈಡರ್ಸ್​ ತಂಡದ ಪಾಲು
  • 16.40 ಕೋಟಿ ರೂ ಪರ್ಸ್ ಹೊಂದಿದ RCB ಹರಾಜಿನಲ್ಲಿ ಸ್ಮಾರ್ಟ್ ಖರೀದಿಗಳನ್ನು ಮಾಡಿ ತಂಡವನ್ನು ಬಲಪಡಿಸಿದ್ದಾರೆ.
IPL 2026 Auction : ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಐಪಿಎಲ್​ ಮಿನಿ ಹರಾಜಿನಲ್ಲಿ ಆಟಗಾರರ ಖರೀದಿ ಭರಾಟೆ ಜೋರಾಗಿತ್ತು. ಐಪಿಎಲ್ 2026ರ ಹರಾಜಿನಲ್ಲಿ 10 ತಂಡಗಳು 77 ಆಟಗಾರರಿಗಾಗಿ ಒಟ್ಟು 215.45 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು, ಅವರಲ್ಲಿ 29 ಮಂದಿ ವಿದೇಶಿ ಆಟಗಾರರನ್ನು ಖರೀದಿಸಿವೆ.
ಇನ್ನು ಆರ್​ಸಿಬಿ ಮಾಜಿ ಆಟಗಾರ ಕ್ಯಾಮರೋನ್​ ಗ್ರೀನ್ (Cameron Green)​ ಅವರು ಬರೋಬ್ಬರಿ 25.20 ಕೋಟಿ ರೂ.ಗೆ ಕೋಲ್ಕತ ನೈಟ್​ ರೈಡರ್ಸ್​ ತಂಡದ ಪಾಲಾದರು. ಇದು ಐಪಿಎಲ್​ ಇತಿಹಾಸದಲ್ಲೇ ದಾಖಲೆ ಬೆಲೆಗೆ ಮಾರಾಟವಾದ ವಿದೇಶಿ ಆಟಗಾರನೆಂಬ ಹೆಗ್ಗಳಿಕೆಗೆ ಗ್ರೀನ್​ ಪಾತ್ರರಾಗಿದ್ದಾರೆ. ಕಳೆದ ಬಾರಿ ಚಾಂಪಿಯನ್​​ ಪಟ್ಟಕ್ಕೇರಿದ ರಾಯಲ್​​ ಚಾಲೆಂಜೆರ್ಸ್​​ ಬೆಂಗಳೂರು ತಂಡ ಕೂಡ ಸ್ಮಾರ್ಟ್ ಖರೀದಿಗಳನ್ನು ಮಾಡಿ ತಂಡವನ್ನು ಬಲಪಡಿಸಿದ್ದಾರೆ.
ಹೌದು, RCB ಡಿಫೆಂಡಿಂಗ್ ಚಾಂಪಿಯನ್ ಆಗಿ ಹರಾಜಿಗೆ ಬಂದಿತು. ಅವರು 17 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದರು ಮತ್ತು 8 ಸ್ಲಾಟ್‌ಗಳನ್ನು ತುಂಬಲು 16.40 ಕೋಟಿ ರೂ ಪರ್ಸ್ ಹೊಂದಿದ್ದರು. ಹರಾಜಿನಲ್ಲಿ ಸ್ಮಾರ್ಟ್ ಖರೀದಿಗಳನ್ನು ಮಾಡಿ ತಂಡವನ್ನು ಬಲಪಡಿಸಿದ್ದಾರೆ.
ರಿಟೈನ್ ಮಾಡಿಕೊಂಡ ಆಟಗಾರರು
ರಜತ್ ಪಾಟೀದಾರ್ (ಕ್ಯಾಪ್ಟನ್), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್ (WK), ಜಿತೇಶ್ ಶರ್ಮಾ, (WK), ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಜಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವನ್ ತುಷಾರ, ರಸಿಖ್ ಸಲಾಂ, ಅಭಿನಂದನ್ ಸಿಂಗ್, ಸುಯಶ್ ಶರ್ಮಾ.

ಹರಾಜಿನಲ್ಲಿ ಖರೀದಿಸಿದ ಆಟಗಾರರು

ವೆಂಕಟೇಶ್ ಅಯ್ಯರ್ (7 ಕೋಟಿ ರೂ.) – ಆಲ್‌ರೌಂಡರ್, ಟಾಪ್ ಆರ್ಡರ್ ಬ್ಯಾಟರ್
ಮಂಗೇಶ್ ಯಾದವ್ (5.20 ಕೋಟಿ ರೂ.) – ಫಾಸ್ಟ್ ಬೌಲಿಂಗ್ ಆಲ್‌ರೌಂಡರ್
ಜೇಕಬ್ ಡಫಿ (2 ಕೋಟಿ ರೂ.) – ನ್ಯೂಜಿಲೆಂಡ್ ಫಾಸ್ಟ್ ಬೌಲರ್
ಜೋರ್ಡನ್ ಕಾಕ್ಸ್ (75 ಲಕ್ಷ ರೂ.) – ಇಂಗ್ಲೆಂಡ್ WK-ಬ್ಯಾಟರ್
ಸತ್ವಿಕ್ ದೇಶ್ವಾಲ್ (30 ಲಕ್ಷ ರೂ.)
ವಿಕ್ಕಿ ಓಸ್ತ್ವಾಲ್ (30 ಲಕ್ಷ ರೂ.)
ವಿಹಾನ್ ಮಲ್ಹೋತ್ರಾ (30 ಲಕ್ಷ ರೂ.)
ಕನಿಷ್ಕ್ ಚೌಹಾನ್ (30 ಲಕ್ಷ ರೂ.)

ಸಂಪೂರ್ಣ ತಂಡ (Full Squad for IPL 2026)

ರಜತ್ ಪಾಟೀದಾರ್ (c), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಜಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವನ್ ತುಷಾರ, ರಸಿಖ್ ಸಲಾಂ, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್, ಜೇಕಬ್ ಡಫಿ, ಜೋರ್ಡನ್ ಕಾಕ್ಸ್, ಮಂಗೇಶ್ ಯಾದವ್, ಸತ್ವಿಕ್ ದೇಶ್ವಾಲ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾನ್,(ಏಜೆನ್ಸೀಸ್​).