ಅನುಷ್ಕಾ-ಮಕ್ಕಳಿಗಾಗಿ ವಿಶೇಷ ಹಚ್ಚೆ? ಪ್ರ್ಯಾಕ್ಟಿಸ್ ಸೆಷನ್ ವೇಳೆ ವೈರಲ್ ಆಯ್ತು ಕೊಹ್ಲಿಯ ಹೊಸ 'ಇನ್ಫಿನಿಟಿ' ಟ್ಯಾಟೂ! Virat Kohli
- ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಮಾತ್ರವಲ್ಲ ವಿಭಿನ್ನ ಸ್ಟೈಲ್ ಮೂಲಕವೂ ಗಮನ ಸೆಳೆಯುತ್ತಾರೆ
- ಕೊಹ್ಲಿಯ ಹೊಸ ‘ಟ್ಯಾಟೂ’ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ
- ಟ್ಯಾಟೂ ಹಿಂದಿನ ಅಸಲಿ ಅರ್ಥ ಏನಿರಬಹುದು ಎಂಬ ಕುತೂಹಲ ಹೆಚ್ಚಾಗುವಂತೆ ಮಾಡಿದೆ
- ಇನ್ಫಿನಿಟಿ ಗುರುತು ಇರುವುದರಿಂದ ಕುಟುಂಬದ ಮೇಲಿರುವ ಕೊನೆಯಿಲ್ಲದ ಪ್ರೀತಿಯ ಸಂಕೇತ ಎನ್ನುತ್ತಿದ್ದಾರೆ ಫ್ಯಾನ್ಸ್
Virat Kohli : ರನ್ ಮಷಿನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಮಾತ್ರವಲ್ಲ, ತಮ್ಮ ವಿಭಿನ್ನ ಸ್ಟೈಲ್ ಮೂಲಕವೂ ಕೋಟ್ಯಂತರ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ. ಈಗ ಅವರು ತಮ್ಮ ಹೊಸ ‘ಟ್ಯಾಟೂ’ (Tattoo) ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ಆರ್‌ಸಿಬಿ ತಂಡದ ಪ್ರ್ಯಾಕ್ಟಿಸ್ ಸೆಷನ್ ವೇಳೆ ಕೊಹ್ಲಿ ಅವರ ನಡುವಿನ ಮೇಲಿರುವ ಈ ಹೊಸ ವಿನ್ಯಾಸದ ಟ್ಯಾಟೂ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದು, ಇದರ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಕೊಹ್ಲಿ ಅವರ ಈ ಹೊಸ ಲುಕ್ ಈಗ ಕ್ರಿಕೆಟ್ ಪ್ರೇಮಿಗಳ ಮನ ಕರಗಿಸುತ್ತಿದ್ದು, ಟ್ಯಾಟೂ ಹಿಂದಿನ ಅಸಲಿ ಅರ್ಥ ಏನಿರಬಹುದು ಎಂಬ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಸದ್ಯ ತಮ್ಮ ಕ್ರೀಡಾ ಬದ್ಧತೆಗಳಲ್ಲಿ ಬಿಜಿಯಾಗಿರುವ ರನ್ ಮಷಿನ್ ವಿರಾಟ್ ಕೊಹ್ಲಿ, ಮುಂಬರುವ ಪಂದ್ಯಗಳಿಗಾಗಿ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಪ್ರ್ಯಾಕ್ಟಿಸ್ ಸೆಷನ್ ವೇಳೆ ಅವರು ತಮ್ಮ ಜರ್ಸಿಯಿಂದ ಮುಖದ ಬೆವಸೊರೆಸಿಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಹದಂತೆ ಹರಿದಾಡುತ್ತಿವೆ. ಈ ಫೋಟೋಗಳಲ್ಲಿ ಕೊಹ್ಲಿ ಅವರ ಫಿಟ್‌ನೆಸ್ ಹಾಗೂ ಎಂಟು ಪ್ಯಾಕ್ ಆಬ್ಸ್ (8-pack abs) ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದರೆ, ಅವರ ಸೊಂಟದ ಭಾಗದಲ್ಲಿ ಮೂಡಿಬಂದಿರುವ ಹೊಸ ಹಚ್ಚೆ (Tattoo) ಎಲ್ಲರ ಗಮನ ಸೆಳೆಯುತ್ತಿದೆ.
ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ಈ ಹೊಸ ಟ್ಯಾಟೂ, ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳಾದ ವಮಿಕಾ ಮತ್ತು ಅಕಾಯ್ ಅವರಿಗಾಗಿ ಅರ್ಪಿಸಿರುವ ವಿಶೇಷ ಕಾಣಿಕೆ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. ಕೊಹ್ಲಿ ಅವರ ದೇಹದ ಮೇಲಿರುವ ಈ ಹೊಸ ಇಂಕ್ ವಿನ್ಯಾಸದಲ್ಲಿ ಮುಖ್ಯವಾಗಿ ‘ಇನ್ಫಿನಿಟಿ’ (ಅನಂತತೆ) ಸಂಕೇತ ಹಾಗೂ ಅದರ ಮೇಲ್ಭಾಗದಲ್ಲಿ ವಿಭಿನ್ನ ಶೈಲಿಯ ಅಕ್ಷರಗಳು ಮೂಡಿಬಂದಿವೆ. ಸದ್ಯಕ್ಕೆ ಟ್ಯಾಟೂನ ಪೂರ್ಣ ಚಿತ್ರ ಲಭ್ಯವಿಲ್ಲದಿದ್ದರೂ, ಇನ್ಫಿನಿಟಿ ಗುರುತು ಇರುವುದರಿಂದ ಇದು ಅವರ ಕುಟುಂಬದ ಮೇಲಿರುವ ಕೊನೆಯಿಲ್ಲದ ಪ್ರೀತಿಯ ಸಂಕೇತ ಇರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ಕೆಲವೇ ವಾರಗಳ ಹಿಂದಷ್ಟೇ ವಿರಾಟ್ ಕೊಹ್ಲಿ ತಮ್ಮ ಕೈಗಳ ಮೇಲೆ ಹೊಸ ಟ್ಯಾಟೂಗಳನ್ನು ಬಿಡಿಸಿಕೊಂಡಿದ್ದರು. ಇತ್ತೀಚಿನ ಸಂವಾದವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಕೊಹ್ಲಿ, ನನಗೆ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು ಎಂದರೆ ತುಂಬಾ ಇಷ್ಟ, ಏಕೆಂದರೆ ಅದು ನನಗೆ ಒಂದು ರೀತಿಯ ಧನಾತ್ಮಕ ಭಾವನೆಯನ್ನು ನೀಡುತ್ತದೆ ಎಂದು ತಮ್ಮ ಟ್ಯಾಟೂ ಪ್ರೇಮವನ್ನು ಬಿಚ್ಚಿಟ್ಟಿದ್ದರು. ಸದ್ಯ ಅವರ ಫಿಟ್‌ನೆಸ್ ಲುಕ್ ಜೊತೆಗೆ ಈ ಹೊಸ ಇಂಕ್ ವಿನ್ಯಾಸ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಸೃಷ್ಟಿಸುತ್ತಿದೆ.
ಸ್ಟಾರ್ ದಂಪತಿಗಳಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ 2021ರಲ್ಲಿ ಮಗಳು ವಮಿಕಾ ಹಾಗೂ 2024ರ ಆರಂಭದಲ್ಲಿ ಮಗ ಅಕಾಯ್ ಜನಿಸಿದರು. ಮೊದಲಿನಿಂದಲೂ ತಮ್ಮ ಮಕ್ಕಳನ್ನು ಗ್ಲಾಮರ್ ಪ್ರಪಂಚ ಹಾಗೂ ಸಾರ್ವಜನಿಕ ಲೈಮ್‌ಲೈಟ್‌ನಿಂದ ದೂರ ಇಡಲು ಬಯಸಿರುವ ಈ ದಂಪತಿ, ಫೋಟೋಗ್ರಾಫರ್‌ಗಳು ಹಾಗೂ ಅಭಿಮಾನಿಗಳಲ್ಲಿ ತಮ್ಮ ಪ್ರೈವೆಸಿಯನ್ನು ಗೌರವಿಸುವಂತೆ ಹಲವು ಬಾರಿ ವಿನಂತಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಮಕ್ಕಳು ಯಾವುದೇ ಸೆಲೆಬ್ರಿಟಿ ಒತ್ತಡವಿಲ್ಲದೆ ಸಾಮಾನ್ಯ ಬಾಲ್ಯವನ್ನು ಆನಂದಿಸಲಿ ಎಂಬ ಕಾರಣಕ್ಕಾಗಿ ಇತ್ತೀಚೆಗೆ ಇವರು ಯುಕೆಗೆ (ಲಂಡನ್) ಶಿಫ್ಟ್ ಆಗಿದ್ದಾರೆ ಎಂಬ ವರದಿಗಳೂ ಇವೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಇಲ್ಲದಿದ್ದಾಗ ಅಥವಾ ಲಂಡನ್‌ನಲ್ಲಿ ಅಭ್ಯಾಸ ನಡೆಸದ ಅವಧಿಯಲ್ಲಿ, ಪತ್ನಿ ಅನುಷ್ಕಾ ಜೊತೆ ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಈ ಜೋಡಿ ಬೃಂದಾವನದ ಕೇಳಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿ, ಶ್ರೀ ಪ್ರೇಮಾನಂದ ಗೋವಿಂದ ಶರಣ್ ಜಿ ಮಹಾರಾಜ್ ಅವರ ದರ್ಶನ ಪಡೆದು ವಿಶೇಷ ಆಶೀರ್ವಾದ ಪಡೆದಿದ್ದರು. ಸದ್ಯ ಕ್ರಿಕೆಟ್ ಮತ್ತು ಆಧ್ಯಾತ್ಮ ಎರಡರಲ್ಲೂ ಸಮತೋಲನ ಕಾಯ್ದುಕೊಂಡಿರುವ ಕೊಹ್ಲಿ ಅವರ ಈ ಹೊಸ ಫ್ಯಾಮಿಲಿ ಟ್ಯಾಟೂ ಅಭಿಮಾನಿಗಳ ಮನ ಗೆಲ್ಲುತ್ತಿದೆ, (ಏಜೆನ್ಸೀಸ್).