ಐಪಿಎಲ್​ನ ತೆರೆಹಿಂದಿನ ಘಟನೆ ನೆನಪಿಸಿಕೊಂಡ ಜಿತೇಶ್​ ಶರ್ಮಾ 
ಐಪಿಎಲ್

ನನ್ನನ್ನು ಕ್ಷಮಿಸು ಜಿತೇಶ್​: ಆರ್​ಸಿಬಿ ಬ್ಯಾಟರ್​ ಬಳಿ ಪ್ರೀತಿ ಜಿಂಟಾ ಕ್ಷಮೆಯಾಚನೆ; ಹರಾಜಿನ ನಂತರ ನಡೆದ ಆ ಘಟನೆ ಬಿಚ್ಚಿಟ್ಟ ವಿಕೆಟ್ ಕೀಪರ್! Jitesh Sharma and Preity Zinta

ಪ್ರಮುಖ ಮುಖ್ಯಾಂಶಗಳು

  • ಜಿತೇಶ್​ ಶರ್ಮಾ ಬಳಿ ಕ್ಷಮೆ ಕೇಳಿದ ಪ್ರೀತಿ ಜಿಂಟಾ
  • ಹರಾಜಿನಲ್ಲಿ ಪಂಜಾಬ್​ ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದಿದ್ದಾಗ ನೊಂದಿಕೊಂಡ ನಟಿ
  • ನಾನು 11 ಕೋಟಿಗೆ ಆರ್​ಸಿಬಿ ತಂಡಕ್ಕೆ ಆಯ್ಕೆಯಾದಾಗ ಅಕ್ಕ ಖುಷಿ ಪಟ್ಟರು ಎಂದ ಜಿತೇಶ್​
  • ಐಪಿಎಲ್​ನ ತೆರೆಹಿಂದಿನ ಘಟನೆ ನೆನಪಿಸಿಕೊಂಡ ಜಿತೇಶ್​ ಶರ್ಮಾ
ಮುಂಬೈ: ಐಪಿಎಲ್ ಅಂಗಳದಲ್ಲಿ ಸಿಕ್ಸರ್-ಬೌಂಡರಿಗಳ ಆರ್ಭಟ ಎಷ್ಟು ಜೋರಿರುತ್ತದೆಯೋ, ಅಷ್ಟೇ ಕುತೂಹಲಕಾರಿ ಕಥೆಗಳು ತೆರೆಯ ಹಿಂದೆ ನಡೆಯುತ್ತಿರುತ್ತದೆ. ಅಂತಹದ್ದೇ ಒಂದು ಸಂಗತಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಫೋಟಕ ಬ್ಯಾಟರ್ ಜಿತೇಶ್ ಶರ್ಮಾ ಈಗ ಬಿಚ್ಚಿಟ್ಟಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಪ್ರೀತಿ ಜಿಂಟಾ ಮತ್ತು ಜಿತೇಶ್ (Jitesh Sharma and Preity Zinta) ನಡುವಿನ ಅಕ್ಕ-ತಮ್ಮನ ಬಾಂಧವ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿಯಾಗುತ್ತಿದೆ.

ಪ್ರೀತಿ ಜಿಂಟಾ ನನ್ನ ಅಕ್ಕ: ಜಿತೇಶ್

ಇತ್ತೀಚೆಗೆ ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡ ಜಿತೇಶ್ ಶರ್ಮಾ, ಪ್ರೀತಿ ಜಿಂಟಾ ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ನಾನು ಅವರನ್ನು ಯಾವಾಗಲೂ ಅಕ್ಕನಂತೆಯೇ ನೋಡುತ್ತೇನೆ. ನಾನು ಹಿಮಾಚಲ ಪ್ರದೇಶದವನು ಎಂದು ತಿಳಿದಾಗ ಅವರು ನನ್ನೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ನನ್ನ ವೃತ್ತಿಜೀವನಕ್ಕೆ ಪಂಜಾಬ್ ಕಿಂಗ್ಸ್ ದೊಡ್ಡ ತಿರುವು ನೀಡಿತು ಎಂದು ಜಿತೇಶ್ ಭಾವುಕರಾಗಿ ಹೇಳಿದ್ದಾರೆ.
ಹರಾಜಿನ ವೇಳೆ ನಡೆದ ಆ ಘಟನೆ!
2025ರ ಐಪಿಎಲ್ ಹರಾಜಿನಲ್ಲಿ ನಡೆದ ಘಟನೆ ಜಿತೇಶ್ ಶರ್ಮಾರ ಬದುಕನ್ನೇ ಬದಲಿಸಿತು. ಪಂಜಾಬ್ ಕಿಂಗ್ಸ್ ತಂಡ ಜಿತೇಶ್ ಅವರನ್ನು 7 ಕೋಟಿಗೆ ತಮ್ಮ ಬಳಿಯೇ ಉಳಿಸಿಕೊಳ್ಳಲು (RTM ಮೂಲಕ) ಪ್ರಯತ್ನಿಸಿತ್ತು. ಆದರೆ ಆರ್‌ಸಿಬಿ ಹಠಕ್ಕೆ ಬಿದ್ದು ಬರೋಬ್ಬರಿ 11 ಕೋಟಿ ರೂ. ಕೊಟ್ಟು ಜಿತೇಶ್ ಅವರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಪಂಜಾಬ್ ತಂಡಕ್ಕೆ ಆ ಮೊತ್ತವನ್ನು ಮೀರಿ ಜಿತೇಶ್​ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಹರಾಜಿನ ನಂತರ ಸ್ವತಃ ಪ್ರೀತಿ ಮೇಡಂ ನನಗೆ ಫೋನ್ ಮಾಡಿದ್ದರು. ನಿನ್ನನ್ನು ತಂಡಕ್ಕೆ ಆಯ್ಕೆ ಮಾಡಲು ಸಾಧ್ಯವಾಗದಿದ್ದಕ್ಕೆ ತುಂಬಾ ಬೇಸರವಿದೆ ಜಿತೇಶ್ ಎಂದು ಅವರು ಕ್ಷಮೆ ಕೇಳಿದರು. ಆದರೆ ನಾನು 11 ಕೋಟಿಗೆ ಆರ್‌ಸಿಬಿ ಪಾಲಾದದ್ದನ್ನು ಕಂಡು ಅವರು ಅಷ್ಟೇ ಸಂತೋಷಪಟ್ಟರು ಎಂದು ಜಿತೇಶ್ ಆ ನೆನಪನ್ನು ಹಂಚಿಕೊಂಡಿದ್ದಾರೆ.
ಆರ್‌ಸಿಬಿ ಅಭ್ಯಾಸ ಪಂದ್ಯದಲ್ಲಿ ಜಿತೇಶ್ ಅಬ್ಬರ!
ಮಾರ್ಚ್ 28 ರಂದು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ನಡೆಯಲಿರುವ ಮೊದಲ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಜಿತೇಶ್ ರೌದ್ರಾವತಾರ ತಾಳಿದ್ದಾರೆ. ಕೇವಲ 37 ಎಸೆತಗಳಲ್ಲಿ 81 ರನ್ ಸಿಡಿಸುವ ಮೂಲಕ ತಾವು ಯಾಕೆ 11 ಕೋಟಿ ರೂ. ಬೆಲೆಯ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರ ಜೊತೆಗೆ ರಜತ್ ಪಾಟಿದಾರ್ (74 ರನ್) ಮತ್ತು ವಿರಾಟ್ ಕೊಹ್ಲಿ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ,(ಏಜನ್ಸೀಸ್​).