ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ
- ಎಸ್ಆರ್ಎಚ್ ವಿರುದ್ಧ ನಿರ್ಣಾಯಕ ಪಂದ್ಯ ಸೋತ ಸಿಎಸ್ಕೆ
- ಪ್ಲೇಆಫ್ ರೇಸ್ನಿಂದ ಹಿಂದುಳಿದ ರುತುರಾಜ್ ಗಾಯಕ್ವಾಡ್ ಪಡೆ
- ಪಂದ್ಯ ಸೋತ ಬೆನ್ನಲ್ಲೇ ಅಭಿಮಾನಿಗಳ ಮುಂದೆ ಧೋನಿ ಹಾಜರು
MS Dhoni: ನಿನ್ನೆ (ಮೇ.18) ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಕಡೆಗೂ ಸಿಎಸ್ಕೆ ಸೋಲಿನ ಹಾದಿ ಹಿಡಿಯುವ ಮೂಲಕ ಪ್ಲೇಆಫ್ ರೇಸ್ನಿಂದ ದೂರ ಸರಿಯಿತು.
ಇಶಾನ್ ಕಿಶಾನ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಗೆಲುವಿನ ದಡ ಸೇರಿದ ಎಸ್ಆರ್ಎಚ್, ಪ್ಲೇಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಆದರೆ, ಪಂಜಾಬ್ ಕಿಂಗ್ಸ್ ಸೋಲಿನ ಮೂಲಕ ಪ್ಲೇಆಫ್‌ಗೆ ಲಗ್ಗೆಯಿಡಲು ಸಿಕ್ಕ ಸುವರ್ಣಾವಕಾಶವನ್ನು ಮತ್ತೊಮ್ಮೆ ಕಳಪೆ ಪ್ರದರ್ಶನದಿಂದ ಚೆನ್ನೈ ಪಡೆ ಕೈಚೆಲ್ಲಿದೆ. ಇದು ಫ್ರಾಂಚೈಸಿಯ ಅಭಿಮಾನಿಗಳನ್ನು ಅಕ್ಷರಶಃ ಬೇಸರಕ್ಕೆ ದೂಡಿತು. ಇದೇ ಸಮಯದಲ್ಲಿ ಮೈದಾನಕ್ಕಿಳಿದ ಮಹೇಂದ್ರ ಸಿಂಗ್ ಧೋನಿ, ಫ್ಯಾನ್ಸ್ಗಳತ್ತ ಕೈಬೀಸಿದ್ದು ಕೆಲ ಕ್ಷಣ ಫ್ಯಾನ್ಸ್ಗಳ ಕಣ್ಣುಗಳನ್ನು ಒದ್ದೆಯಾಗಿಸಿತು.
ಇಲ್ಲಿಯವರೆಗೆ ಯಾವುದೇ ಪಂದ್ಯದಲ್ಲಿಯೂ ತಂಡದ ಪರ ಆಡದ ಧೋನಿ, ಪ್ಲೇಆಫ್ ಪ್ರವೇಶಿಸಲು ಸಿಕ್ಕ ಅವಕಾಶವನ್ನು ಸಿಎಸ್ಕೆ ಕಳೆದುಕೊಂಡ ಬೆನ್ನಲ್ಲೇ ತನಗಾಗಿ ಸ್ಟೇಡಿಯಂ ತುಂಬಿದ್ದ ಅಭಿಮಾನಿಗಳನ್ನು ನೋಡಲು ಮೈದಾನಕ್ಕಿಳಿದರು. ಮಾಹಿ ಬರುತ್ತಿಲ್ಲ ಎಂದು ಪ್ರತಿ ಪಂದ್ಯದಲ್ಲಿಯೂ ತೀವ್ರ ಬೇಸರದಿಂದ ಕೂರುತ್ತಿದ್ದ ಫ್ಯಾನ್ಸ್ಗೆ ಕಡೆಗೂ ಧೋನಿ ದರ್ಶನ ಕಂಡು ಕಣ್ಣಂಚಲ್ಲಿ ನೀರು ಮೂಡಿತು.
ತಂಡದ ಆಟಗಾರರ ಜೊತೆ ಮೈದಾನದಲ್ಲಿ ಹೆಜ್ಜೆ ಹಾಕಿದ ಮಹೇಂದ್ರ ಸಿಂಗ್ ಧೋನಿ, ಎಲ್ಲ ಅಭಿಮಾನಿಗಳಿಗೂ ಕೈಬೀಸಿದರು. ತಮ್ಮ ನೆಚ್ಚಿನ ಕ್ಯಾಪ್ಟನ್ ಕೂಲ್, ದಿಗ್ಗಜ ಕ್ರಿಕೆಟಿಗನನ್ನು ಹಲವು ದಿನಗಳ ಬಳಿಕ ಕಂಡು ಫ್ಯಾನ್ಸ್ ಭಾವುಕರಾದರು. ಇದನ್ನು ನೋಡಿದ ಬಳಿಕ ಹಲವರು, ಉಳಿದಿರುವ ಇನ್ನೊಂದು ಪಂದ್ಯದಲ್ಲಿ ಧೋನಿ ಕಣಕ್ಕಿಳಿಯಬಹುದು. ಬ್ಯಾಟಿಂಗ್ ಮತ್ತು ಕೀಪಿಂಗ್ ಮಾಡುವ ಮೂಲಕ ಐಪಿಎಲ್ಗೆ ವಿದಾಯ ಹೇಳುವ ಸಾಧ್ಯತೆಯಿದೆ ಎಂದು ಊಹಿಸಿದ್ದಾರೆ.
ಪಂದ್ಯದ ವಿವರ
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು. ಈ ಸಾಧಾರಣ ರನ್‌ಗಳ ಗುರಿಯನ್ನು ಬೆನ್ನತ್ತಿದ ಪ್ಯಾಟ್ ಕಮ್ಮಿನ್ಸ್ ಪಡೆ 1 ಓವರ್ ಬಾಕಿ ಇರುವಂತೆಯೇ ಪಂದ್ಯವನ್ನು ಮುಗಿಸಿತು. ತಂಡದ ಪರ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಮಾಡಿದರು. 47 ಎಸೆತಗಳಲ್ಲಿ 70 ರನ್ ಸಿಡಿಸಿ, ಸಿಎಸ್ಕೆ ವಿರುದ್ಧ 5 ವಿಕೆಟ್‌ಗಳ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ, ಹೈದರಾಬಾದ್ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ಕೂಡ ಪ್ಲೇಆಫ್‌ಗೆ ಲಗ್ಗೆಯಿಟ್ಟಿದೆ. ಇಲ್ಲಿಯವರೆಗೆ, ಮೂರು ತಂಡಗಳು ಈ ಹಂತಕ್ಕೆ ಪ್ರವೇಶ ಪಡೆದಿವೆ. ಆರ್ಸಿಬಿ, ಜಿಟಿ ಮತ್ತು ಎಸ್ಆರ್ಎಚ್ ಪ್ಲೇಆಫ್ ತಲುಪಿದ್ದು, ಸಿಎಸ್ಕೆಗೆ ಇನ್ನೂ ಅವಕಾಶವಿದೆ. ಆದರೆ, ರಾಜಸ್ಥಾನ ರಾಯಲ್ಸ್ ಎರಡು ಪಂದ್ಯ ಮತ್ತು ಪಂಜಾಬ್ ಕಿಂಗ್ಸ್ ಒಂದು ಪಂದ್ಯವನ್ನು ಸೋತರೆ ಮಾತ್ರ,(ಏಜೆನ್ಸೀಸ್).