FIFA WorldCup: ಇದು ಸತತ 2 ಪ್ರಶಸ್ತಿ ಗೆಲುವಿನ ವರ್ಷ? ಆರ್ಸಿಬಿ, ಪಿಎಸ್ಜಿ ಸಾಧನೆ ಪುನರಾವರ್ತಿಸುವುದೇ ಅರ್ಜೆಂಟೀನಾ?
ಬೆಂಗಳೂರು: ಕಳೆದ ವರ್ಷ ಬಹುತೇಕ ಕ್ರೀಡಾಕೂಟಗಳಲ್ಲಿ ಹೊಸ ಚಾಂಪಿಯನ್ ಉದಯಿಸಿದ್ದರೆ, ಹಾಲಿ ವರ್ಷದ ಬಹುತೇಕ ಕ್ರೀಡಾಕೂಟಗಳಲ್ಲಿ ಸತತ 2ನೇ ಬಾರಿ ಪ್ರಶಸ್ತಿ ಗೆಲುವಿನ ಟ್ರೆಂಡ್ ಕಾಣಿಸಿದೆ. ಹೀಗಾಗಿ ಫಿಫಾ ವಿಶ್ವಕಪ್ನಲ್ಲೂ (FIFA WorldCup) ಅರ್ಜೆಂಟೀನಾ ಈ ಟ್ರೆಂಡ್ ಮುಂದುವರಿಸುವುದೇ ಎಂಬ ಕುತೂಹಲ ಹರಡಿದೆ.
ಭಾರತ ತಂಡ ಹಾಲಿ ವರ್ಷ ಟಿ20 ವಿಶ್ವಕಪ್ನಲ್ಲಿ ಸತತ 2ನೇ ಬಾರಿ ಪ್ರಶಸ್ತಿ ಜಯಿಸಿದ್ದರೆ, ಐಪಿಎಲ್ನಲ್ಲಿ ಆರ್ಸಿಬಿ (RCB) ತಂಡವೂ ಸತತ 2ನೇ ಬಾರಿ ಚಾಂಪಿಯನ್ ಪಟ್ಟವೇರಿತ್ತು. ಚಾಂಪಿಯನ್ಸ್ ಲೀಗ್ನಲ್ಲಿ ಪ್ಯಾರಿಸ್ ಸೇಂಟ್-ಜಮೈರ್ನ್ (ಪಿಎಸ್ಜಿ) ತಂಡ ಸತತ 2ನೇ ಬಾರಿ ಪ್ರಶಸ್ತಿ ಗೆದ್ದಿದ್ದರೆ, ವಿಂಬಲ್ಡನ್ನಲ್ಲಿ ಯಾನಿಕ್ ಸಿನ್ನರ್ ಕೂಡ ಇಂಥದ್ದೇ ಸಾಧನೆ ಮಾಡಿದ್ದರು.