ಮುಂದುವರಿದ ಅಮೆರಿಕನ್ನರ ಪ್ರಶಸ್ತಿ ಬರ: ಜ್ವೆರೆವ್ ಚಾಂಪಿಯನ್, ಟಾಪ್ 10ನಿಂದ ಜೋಕೊವಿಕ್ ಔಟ್
ನ್ಯೂಯಾರ್ಕ್: ಹಾಲಿ ಟೆನಿಸ್ ಋತುವಿನಲ್ಲಿ ತನ್ನ ಕನಸಿ ಓಟ ಮುಂದುವರಿಸಿದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವರ್ಷದ 4ನೇ ಹಾಗೂ ಕೊನೇ ಗ್ರಾಂಡ್ ಸ್ಲಾಂ ಯುಎಸ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಈ ಮೂಲಕ ಅಗ್ರ ಶ್ರೇಯಾಂಕಿತ ಜ್ವೆರೆವ್ ಹಾಲಿ ವರ್ಷ ಫ್ರೆಂಚ್ ಓಪನ್ ನಂತರ ಗೆದ್ದ 2ನೇ ಮೇಜರ್ ಟೂರ್ನಿ ಇದಾಗಿದ್ದು, ಆತಿಥೇಯ ತಾರೆ ಬೆನ್ ಶೆಲ್ಟನ್ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನ ಕಂಡರು. ಇದರೊಂದಿಗೆ ಪುರುಷರ ಸಿಂಗಲ್ಸ್‌ನಲ್ಲಿ ಅಮೆರಿಕನ್ನರ 23 ವರ್ಷಗಳ ಸುದೀರ್ಘ ಪ್ರಶಸ್ತಿ ಬರವೂ ಮುಂದುವರಿಯಿತು.
24 ಗ್ರಾಂಡ್ ಸ್ಲಾಂ ವಿಜೇತ, ಸೆರ್ಬಿಯಾ ನೋವಾಕ್ ಜೋಕೊವಿಕ್ ಎಂಟು ವರ್ಷಗಳ ನಂತರ ಎಟಿಪಿ ರ‌್ಯಾಂಕಿಂಗ್ ಅಗ್ರ 10ರಿಂದ ಹೊರಗುಳಿದಿದ್ದಾರೆ. ಇದರೊಂದಿಗೆ 2002ರ ನಂತರ ಬಿಗ್ ತ್ರೀ (ರೋಜರ್ ಫೆಡರರ್, ನಡಾಲ್, ಜೋಕೋ) ಆಟಗಾರರ ಪೈಕಿ ಒಬ್ಬರು ಅಗ್ರ10ರೊಳಗೆ ಸ್ಥಾನ ಪಡೆಯದ ಮೊದಲ ದೃಷ್ಟಾಂತ ಇದಾಗಿದೆ. ಯುಎಸ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ನಿರ್ಗಮನ ಕಂಡ 39 ವರ್ಷದ ಜೋಕೋ 7 ರಿಂದ 12ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
2022ರಲ್ಲಿ ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದ ಸ್ವಿಸ್‌ನ ರೋಜರ್ ಫೆಡರರ್ 2002ರಲ್ಲಿ ಮೊದಲ ಬಾರಿ ಅಗ್ರ 10ರೊಳಗೆ ಸ್ಥಾನ ಪಡೆದರೆ, 2024ರಲ್ಲಿ ನಿವೃತ್ತಿ ಘೋಷಿಸಿದ ಸ್ಪೇನ್ ರಾಫೆಲ್ ನಡಾಲ್ 2005ರಲ್ಲಿ ಹಾಗೂ ಜೋಕೊವಿಕ್ 2007ರಲ್ಲಿ ಈ ಸಾಧನೆ ಮಾಡಿದ್ದರು. 25ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸುವ ಆಸೆ ಹೊಂದಿರುವ ಜೋಕೊವಿಕ್ ದಾಖಲೆಯ 428 ವಾರ ಪುರುಷರ ಸಿಂಗಲ್ಸ್‌ನ ನಂಬರ್ ಒನ್ ಆಟಗಾರ ಎನಿಸಿದ್ದರು. ಸದ್ಯ ಇಟಲಿಯ ಯಾನಿಕ್ ಸಿನ್ನರ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಕ್ರಮವಾಗಿ ಅಗ್ರ 3 ಸ್ಥಾನ ಹೊಂದಿದ್ದಾರೆ.
ಯುಎಸ್ ಓಪನ್ ಮಹಿಳಾ ಚಾಂಪಿಯನ್ ಎಲೆನಾ ರೈಬಕಿನಾ ಅಧಿಕೃತವಾಗಿ ಡಬ್ಲುೃಟಿಎ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದರು. ಹಾಲಿ ವರ್ಷ 2 ಗ್ರಾಂಡ್ ಸ್ಲಾಂ ಜಯಿಸಿರುವ ಕಜಾಕಿಸ್ತಾನದ ರೈಬಕಿನಾ, ಅರಿನಾ ಸಬಲೆಂಕಾ (99 ವಾರ) ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.