ಕ್ರೀಡೆ

IPL Mega Auction 2025 ವೀಕ್ಷಿಸುವುದು ಹೇಗೆ?; ದಿನಾಂಕ, ಸಮಯ ಸೇರಿದಂತೆ ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ನವದೆಹಲಿ:  ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್ (IPL)​ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ರಿಟೇನ್​ ಹಾಗೂ ಮೆಗಾ ಆಕ್ಷನ್​ಗೆ (Mega Auction)ಸಂಬಂಧಿಸಿದ ಸುದ್ದಿಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ. 570ಕ್ಕೂ ಅಧಿಕ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ನವೆಂಬರ್​ 24-25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ (jeddah) ಹರಾಜು ಕಾರ್ಯಕ್ರಮ ನಡೆಯಲಿದ್ದು, ವಿವಿಧ ಫ್ರಾಂಚೈಸಿಗಳು ಬಲಿಷ್ಠ ಆಟಗಾರರನ್ನು ಖರೀದಿಸಲು ಲೆಕ್ಕಾಚಾರ ಹಾಕಿದ್ದು, ಮೆಗಾ ಹರಾಜು ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಬಾರಿ ಆಕ್ಷನ್‌ಗೆ ಒಟ್ಟು 574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 366 ಕ್ರಿಕೆಟಿಗರು ಭಾರತೀಯರಾಗಿದ್ದರೆ, ಉಳಿದ 208 ಆಟಗಾರರು ವಿದೇಶಿಗರು. ದಕ್ಷಿಣ ಆಫ್ರಿಕಾದಿಂದ ದಾಖಲೆ ಸಂಖ್ಯೆಯ ಆಟಗಾರರು ನೋಂದಣಿ ಮಾಡಿಕೊಂಡಿದ್ದು, 318 ಅನ್‌ಕ್ಯಾಪ್ಡ್ ಭಾರತೀಯ ಮತ್ತು 12 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಕೂಡಾ ಐಪಿಎಲ್‌ ಆಡುವ ಉತ್ಸಾಹದಲ್ಲಿದ್ದಾರೆ.

ಕಳೆದ ಆವೃತ್ತಿಯಲ್ಲಿ ಹರಾಜು ಕೂಗಿದ್ದ ಮಲ್ಲಿಕಾ ಸಾಗರ್​ (Mallika Sagar) ಈ ಬಾರಿ ಹರಾಜುದಾರರಾಗಿ ಮುಂದುವರೆಯಲಿದ್ದು, ಈ ಬಾರಿ ಮೆಗಾ ಹರಾಜು ಕಾರ್ಯಕ್ರಮದಲ್ಲಿ ತಂಡಗಳು ನಡುವೆ ಪೈಪೋಠಿ ಏರ್ಪಡುವ ಸಾಧ್ಯತೆ ಹೆಚ್ಚಿದೆ. ಬಹುತೇಕ ಸ್ಟಾರ್​ ಆಟಗಾರರು ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಇವರಿಗೆ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ.

ಮಲ್ಲಿಕಾ ಸಾಗರ್

IPL 2025 ಹರಾಜು ಎಲ್ಲಿ ನಡೆಯುತ್ತದೆ?

ಐಪಿಎಲ್ 2025 ರ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿದೆ. ವಿದೇಶದಲ್ಲಿ ಐಪಿಎಲ್ ಹರಾಜು ನಡೆಯುತ್ತಿರುವುದು ಇದು ಎರಡನೇ ಬಾರಿ.

IPL 2025 ಹರಾಜು ಯಾವಾಗ ನಡೆಯುತ್ತದೆ?

ಎರಡು ದಿನಗಳ ಮೆಗಾ ಹರಾಜು ನವೆಂಬರ್​ 24 ಹಾಗೂ 25ರಂದು ನಡೆಯಲಿದೆ. 

IPL 2025 ಮೆಗಾ ಹರಾಜು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?

ಮೆಗಾ ಹರಾಜು ಭಾನುವಾರ ಭಾರತೀಯ ಕಾಲಮಾನ ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗುತ್ತದೆ. 

ಟಿವಿಯಲ್ಲಿ IPL 2025 ಹರಾಜು ನೇರ ಪ್ರಸಾರವನ್ನು ವೀಕ್ಷಿಸುವುದು ಹೇಗೆ?

ಐಪಿಎಲ್ 2025ರ ಹರಾಜು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.

ಆನ್​ಲೈನ್​ನಲ್ಲಿ IPL 2025 ಹರಾಜು ನೇರ ಪ್ರಸಾರವನ್ನು ವೀಕ್ಷಿಸುವುದು ಹೇಗೆ?

ಐಪಿಎಲ್ 2025ರ ಹರಾಜು ಕಾರ್ಯಕ್ರಮವನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದಾಗಿದೆ. 

https://www.vijayavani.net/fake-doctors-open-multi-speciality-hospital-it-shuts-a-day-after-grand-launch

https://www.vijayavani.net/youth-slaps-woman-cop-after-police-refuses-to-lodge-complaint-video