ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬರುವ ಐಪಿಎಲ್ಗೆ ಪೂರ್ವಭಾವಿಯಾಗಿ ಮಾಜಿ ಕ್ರಿಕೆಟಿಗರಾದ ವೇಣುಗೋಪಾಲ್ ರಾವ್ ಮತ್ತು ಹೇಮಂಗ್ ಬದಾನಿ ಅವರನ್ನು ಕ್ರಮವಾಗಿ ಕ್ರಿಕೆಟ್ ನಿರ್ದೇಶಕ ಮತ್ತು ಮುಖ್ಯ ಕೋಚ್ ಆಗಿ ನೇಮಿಸಿದೆ. ಆಂಧ್ರದ ವೇಣುಗೋಪಾಲ್ ಭಾರತ ಪರ 16 ಎಕದಿನ ಪಂದ್ಯ ಆಡಿದ್ದಾರೆ. ಅಲ್ಲದೆ 2009ರಲ್ಲಿ ಐಪಿಎಲ್ ಗೆದ್ದ ಡೆಕ್ಕನ್ ಚಾರ್ಜರ್ಸ್ ತಂಡದ ಪ್ರಮುಖ ಸದಸ್ಯರಾಗಿದ್ದರು.
ಈ ನಡುವೆ ಡೆಲ್ಲಿ ತಂಡದ ಆಡಳಿತ ಮಂಡಳಿಯಲ್ಲಿ ಬದಲಾವಣೆಯಾಗಿದ್ದು, ಜೆಎಸ್ಡಬ್ಲು ಸ್ಪೋರ್ಟ್ಸ್ ಮತ್ತು ಜಿಎಂಆರ್ ಗ್ರೂಪ್ ಕಂಪನಿಗಳು ಆವರ್ತನ ಪದ್ಧತಿಯನ್ವಯ ತಂಡಗಳ ಉಸ್ತುವಾರಿ ನೋಡಿಕೊಳ್ಳಲಿವೆ. ಇದರನ್ವಯ ಮುಂದಿನ 2 ವರ್ಷ ಜಿಎಂಆರ್ ಗ್ರೂಪ್, ಐಪಿಎಲ್ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾನೇಜ್ಮೆಂಟ್ ನಿರ್ವಹಿಸಲಿದೆ. ಮುಂದಿನ 2 ವರ್ಷ ಜೆಎಸ್ಡಬ್ಲ್ಯುಗೆ ವುಮೆನ್ಸ್ ಪ್ರೀಮಿಯರ್ ಲೀಗ್ನ ಡೆಲ್ಲಿ ತಂಡ ಮತ್ತು ದ. ಆಫ್ರಿಕಾದ ಎಸ್ಎ20ಯಲ್ಲಿ ಆಡುವ ಪ್ರಿಟೋರಿಯಾ ಕ್ಯಾಪಿಟಲ್ಸ್ ಆಡಳಿತ ನಿರ್ವಹಿಸಲಿದೆ.
ಇದರನ್ವಯ ಸೌರವ್ ಗಂಗೂಲಿ ಇನ್ನು ಜೆಎಸ್ಡಬ್ಲು ಸ್ಪೋರ್ಟ್ಸ್ನಲ್ಲಿ ಕ್ರಿಕೆಟ್ ನಿರ್ದೇಶಕರಾಗಿ ಡೆಲ್ಲಿ ಮಹಿಳಾ ತಂಡ ಮತ್ತು ಪ್ರಿಟೋರಿಯಾ ತಂಡವನ್ನಷ್ಟೇ ನಿರ್ವಹಿಸಲಿದ್ದಾರೆ.