ಐಪಿಎಲ್​ ಟ್ರೋಫಿ ಸಂಗ್ರಹ ಚಿತ್ರ
ಕ್ರೀಡೆ

ಡಿ.16ಕ್ಕೆ ಗೋವಾದಲ್ಲಿ ಐಪಿಎಲ್​ ಮಿನಿ ಹರಾಜು; ಆಟಗಾರರ ರಿಟೇನ್​ ಗಡುವು ಸನಿಹ...

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಶ್ರೀಲಂಕಾ ತಂಡಗಳ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ನಡೆಯಲಿರುವ ದಿನದಂದೇ ಹರಾಜು ಪ್ರಕ್ರಿಯೆ ನಿಗದಿಯಾಗಿರುವುದು ಅಚ್ಚರಿ ಎನಿಸಿದೆ.

ನವದೆಹಲಿ: ಮುಂದಿನ ವರ್ಷದ ಐಪಿಎಲ್​ 20ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್​ 16ರಂದು ಗೋವಾದಲ್ಲಿ ನಡೆಯಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಶ್ರೀಲಂಕಾ ತಂಡಗಳ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ನಡೆಯಲಿರುವ ದಿನದಂದೇ ಹರಾಜು ಪ್ರಕ್ರಿಯೆ ನಿಗದಿಯಾಗಿರುವುದು ಅಚ್ಚರಿ ಎನಿಸಿದೆ.

2022ರ ಬಳಿಕ ಭಾರತದಲ್ಲಿ ನಡೆಯಲಿರುವ ಮೊದಲ ಐಪಿಎಲ್​ ಹರಾಜು ಪ್ರಕ್ರಿಯೆ ಇದಾಗಿದೆ. ಕಳೆದ 3 ಹರಾಜು ಪ್ರಕ್ರಿಯೆಗಳು ದುಬೈ, ಜಿದ್ದಾ ಮತ್ತು ಅಬುಧಾಬಿಯಲ್ಲಿ ನಡೆದಿದ್ದವು. ಹರಾಜಿಗೆ ಮುನ್ನ ತಂಡಗಳು ಆಟಗಾರರ ರಿಟೇನ್​ ಪಟ್ಟಿಯನ್ನು ಸಲ್ಲಿಸಲು ನವೆಂಬರ್​ 15 ಅಂತಿಮ ಗಡುವಾಗಿದೆ.

ಐಪಿಎಲ್​ 20ನೇ ಆವೃತ್ತಿ 2027ರ ಮಾರ್ಚ್​ 14ರಿಂದ ಮೇ 30ರ ನಡುವೆ ನಡೆಯುವ ನಿರೀಕ್ಷೆ ಇದೆ. ಆರ್​ಸಿಬಿ ತಂಡ ಈ ಬಾರಿ ಮತ್ತೆ ಹಾಲಿ ಚಾಂಪಿಯನ್​ ತಂಡವಾಗಿ ಕಣಕ್ಕಿಳಿಯಲಿದ್ದು, ಹ್ಯಾಟ್ರಿಕ್​ ಪ್ರಶಸ್ತಿ ಗೆಲುವಿನ ಕನಸಿನಲ್ಲಿದೆ.