ನವದೆಹಲಿ: ಐಪಿಎಲ್ ಟೂರ್ನಿ ನಿಗದಿಯಂತೆ ಏಪ್ರಿಲ್-ಮೇ ಸಮಯದಲ್ಲಿ ನಡೆಯದೆ ಅನಿರ್ದಿ ಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಕಾರಣದಿಂದ ವೆಸ್ಟ್ ಇಂಡೀಸ್ನ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯ ಸಂಘಟಕರಿಗೆ ‘ದಿನಾಂಕ ಸಂಘರ್ಷ’ ಏರ್ಪಡುವ ಭೀತಿ ಶುರುವಾಗಿದೆ. ನಿಗದಿತ ವೇಳಾಪಟ್ಟಿಯ ಪ್ರಕಾರ ಸಿಪಿಎಲ್ ಆಗಸ್ಟ್ 19ರಿಂದ ಸೆಪ್ಟೆಂಬರ್ 26ರವರೆಗೆ ನಡೆಯಬೇಕಿದೆ. ಆದರೆ ಐಪಿಎಲ್ ಕೂಡ ಸೆಪ್ಟೆಂಬರ್ಗೆ ಮುಂದೂಡಿಕೆಯಾಗುವ ಸಾಧ್ಯತೆ ಇರುವುದರಿಂದ ಸಿಪಿಎಲ್ ಸಿಇಒ ಪೆಟ್ ರಸೆಲ್ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಜತೆಯಲ್ಲೇ, ಬಿಸಿಸಿಐ ನಮ್ಮೊಂದಿಗೆ ಸಂಘರ್ಷಕ್ಕೆ ಇಳಿಯದೆ ತನ್ನದೇ ಆದ ಅವಧಿಯನ್ನು ಕಂಡುಕೊಳ್ಳಬಹುದು ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
‘ಬಿಸಿಸಿಐ ಇತರ ಲೀಗ್ಗಳನ್ನು ಗಣನೆಗೆ ತೆಗೆದುಕೊಂಡು ಕ್ರಮಕೈಗೊಳ್ಳಲಿ. ಐಪಿಎಲ್ ಜತೆಗೆ ನಮಗೆ ಪೈಪೋಟಿ ಸಾಧ್ಯವಿಲ್ಲ. ಬಹುತೇಕ ವಿಂಡೀಸ್ ಆಟಗಾರರು ಐಪಿಎಲ್ನಲ್ಲಿ ಆಡಲು ಬಯಸುತ್ತಾರೆ. ಆಗ ಸಿಪಿಎಲ್ಗೆ
ಗೈರಾಗುತ್ತಾರೆ. ಇದರಿಂದ ನಮಗೆ ನಷ್ಟ’ ಎಂದು ರಸೆಲ್ ತಿಳಿಸಿದ್ದಾರೆ. ಕರೊನಾ ಭೀತಿ ಇಡೀ ವಿಶ್ವವನ್ನೇ ವ್ಯಾಪಿಸಿದ್ದರೂ ಕೆರಿಬಿಯನ್ ದ್ವೀಪರಾಷ್ಟ್ರಗಳನ್ನು ಅಷ್ಟಾಗಿ ಕಾಡಿಲ್ಲ.