ಕ್ರೀಡೆ

IPL 2025ರ ಟ್ರೋಫಿ ವಿನ್ನರ್​ ಸಮೀಕ್ಷೆ: ಈ ಬಾರಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ RCB!

ಇಂಡಿಯನ್​ ಪ್ರೀಮಿಯರ್​ ಲೀಗ್ (IPL 2025)ನ ಸುಮಾರು 65 ಪ್ರತಿಶತದಷ್ಟು ಅಭಿಮಾನಿಗಳು ಈ ವರ್ಷ ಹೊಸ ಟ್ರೋಫಿ ವಿಜೇತರನ್ನು ನೋಡುವ ನಿರೀಕ್ಷೆಯಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಸಮೀಕ್ಷೆ ಹೇಳಿದ್ದೇನು..?

ಮೇ.5 ರವರೆಗೆ ಜನರಲ್ ಝಡ್‌ಗಳು ಸೇರಿದಂತೆ 5,000 ಕ್ಕೂ ಹೆಚ್ಚು ಕ್ರಿಕೆಟ್ ಅಭಿಮಾನಿಗಳ ಸಮೀಕ್ಷೆಯಲ್ಲಿ, ಶೇ. 12ರಷ್ಟು ಅಭಿಮಾನಿಗಳು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ವಿಜೇತರಾಗಿ ಹಾಗೂ ಶೇ.7ರಷ್ಟು ಜನರು ಪಂಜಾಬ್ ಕಿಂಗ್ಸ್‌ಗೆ ಬೆಂಬಲ ನೀಡಿದ್ದಾರೆ. ಅಲ್ಲದೆ, ಶೇ.65ರಷ್ಟು ಫ್ಯಾನ್ಸ್​ ಆರ್​ಸಿಬಿ ಈ ಬಾರಿಯ ಟ್ರೋಫಿ ವಿನ್ನರ್​ ಆಗುತ್ತೆ ಎಂದು ಸಮೀಕ್ಷೆಯನ್ನು ನಡೆಸಿದ 23 ವ್ಯಾಟ್ಸ್ ಇನ್‌ಸೈಟ್ಸ್ ಸ್ಟುಡಿಯೋ ಹೇಳಿದೆ.

23 ವ್ಯಾಟ್ಸ್ ನಡೆಸಿದ ಸಮೀಕ್ಷೆಯಲ್ಲಿ ಅಧಿಕ ಫ್ಯಾನ್ಸ್​ ಎಂ.ಎಸ್.ಧೋನಿ ಆಟದಲ್ಲಿ ಅವರ ಶಾಶ್ವತ ಉಪಸ್ಥಿತಿಯನ್ನು(ಅದ್ಭುತ ಫಾರ್ಮೆಟ್​) ತೋರಿಸಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಧೋನಿ ನಿವೃತ್ತಿಯ ಬಗ್ಗೆ ಕೇಳಿದಾಗ, ಶೇ.73 ರಷ್ಟು ಜನರು ಅವರು ಮುಂದುವರಿಯಬೇಕೆಂದು ಬಯಸುತ್ತಾರೆ. ಅಲ್ಲದೆ, ದೇಶಾದ್ಯಂತ ಅಭಿಮಾನಿಗಳಿಂದ ಧೋನಿಗೆ ಇನ್ನೂ ಬಲವಾದ ಬೆಂಬಲ ಸಿಗುತ್ತಿದೆ. ಶೇ.35.13ರಷ್ಟು ಜನರು ಅವರು ಸಿಎಸ್‌ಕೆಯ ಆತ್ಮ ಎಂದು ಹೇಳುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಸೂರ್ಯವಂಶಿ ಪ್ರತಿಭಾನ್ವಿತ ಆಟಗಾರ

ಪ್ರತಿಭೆಯ(ಟ್ಯಾಲೆಂಟ್) ಏರಿಕೆಯ ಬಗ್ಗೆ ಕೇಳಿದಾಗ, ರಾಜಸ್ಥಾನ ರಾಯಲ್ಸ್‌ನ ವೈಭವ್ ಸೂರ್ಯವಂಶಿ ಅವರನ್ನು ಐಪಿಎಲ್ 2025ರ ಚೊಚ್ಚಲ ಆಟಗಾರ ಎಂದು ಶೇ.31.4 ರಷ್ಟು ಅಭಿಮಾನಿಗಳು ಸೂರ್ಯವಂಶಿ ಪರ ಮತ ಚಲಾಯಿಸಿದ್ದಾರೆ. ಮುಂಬೈ ಇಂಡಿಯನ್ಸ್‌ನ ಉದಯೋನ್ಮುಖ ಬೌಲರ್ ಅಶ್ವನಿ ಕುಮಾರ್ ಅವರನ್ನು ಶೇ.21 ರಷ್ಟು ಮತಗಳೊಂದಿಗೆ ಪ್ರತಿಭಾನ್ವಿತ ಆಟಗಾರ ಎಂದಿದ್ದಾರೆ.

ಶೇ.78 ರಷ್ಟು ಅಭಿಮಾನಿಗಳು ಇನ್​ಫ್ಯಾಕ್ಟ್​ ಆಟಗಾರ ಪರಿಚಯವು ಆಟವನ್ನು ಹೆಚ್ಚು ಕಾರ್ಯತಂತ್ರ ಮತ್ತು ಆಕರ್ಷಕವಾಗಿಸಿದೆ ಎಂದು ಹೇಳುತ್ತಿದ್ದಾರೆ. ಇನ್ನು ಶೇ.20ರಷ್ಟು ಜನರು ನಿಯಮಗಳನ್ನು ಅತಿಯಾಗಿ ಪ್ರಚಾರ ಮಾಡಲಾಗಿದೆ ಮತ್ತು ಆಲ್‌ರೌಂಡರ್‌ಗಳಿಗೆ ಅನ್ಯಾಯವಾಗಿದೆ ಎಂದಿದ್ದಾರೆ.

ಗುಜರಾತ್ ಟೈಟಾನ್ಸ್, ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಐಪಿಎಲ್ 2025ರ ಪ್ಲೇಆಫ್‌ಗೆ ಪ್ರವೇಶ ಪಡೆದಿವೆ. ಇತ್ತ ನಾಲ್ಕನೇ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್, ಎಲ್‌ಎಸ್‌ಜಿ ಮತ್ತು ದೆಹಲಿ ಕ್ಯಾಪಿಟಲ್ಸ್ ಮೂರು ತಂಡಗಳು ಮೇ.19ರ ಹೊತ್ತಿಗೆ ಅಂತಿಮ ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ.(ಏಜೆನ್ಸೀಸ್​)