IPL 2025: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಗೆ ಕಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ತಂಡದ ನಾಯಕನ್ನಾಗಿ ಅಜಿಂಕ್ಯ ರಹಾನೆ ಅವರನ್ನು ನೇಮಕ ಮಾಡಲಾಗಿದ್ದು, ವೆಂಕಟೇಶ್ ಅಯ್ಯರ್ ಉಪನಾಯಕರನ್ನಾಗಿ ಮಾಡಿದೆ ಎಂದು ಸೋಮವಾರ ವರದಿಯಾಗಿದೆ.
IPL ಇತಿಹಾಸದಲ್ಲಿ ಮೂರು ಬಾರಿ ಚಾಪಿಂಯನ್ಸ್ ಆಗಿ ಹೊರ ಹೊಮ್ಮಿರುವ ಕೆಕೆಆರ್ ತಂಡ ಅತ್ಯಂತ ಯಶಸ್ವಿ ಪ್ರಾಂಚೈಸಿಗಳಲ್ಲಿ ಒಂದಾಗಿದೆ. ತಮ್ಮ ನೇಮಕದ ಬಗ್ಗೆ ಮಾತನಾಡರುವ ರಹಾನೆ,'' ಕೆಕೆಆರ್ ತಂಡವನ್ನು ಮುನ್ನಡೆಸಲು ಕೇಳಿಕೊಳ್ಳುವುದು ಗೌರವದ ಸಂಗತಿ. ನಮ್ಮಲ್ಲಿ ಅತ್ಯುತ್ತಮ ಮತ್ತು ಸಮತೋಲಿತ ತಂಡವಿದೆ ಎಂದು ನಾನು ಭಾವಿಸುತ್ತೇನೆ. ಎಲ್ಲರೊಂದಿಗೆ ಕೆಲಸ ಮಾಡಲು ಮತ್ತು ನಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಸವಾಲನ್ನು ಸ್ವೀಕರಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತ ಹೇಳಿಕೆ ನೀಡಿದ್ದಾರೆ.
ಇತ್ತೀಚಿಗೆ ದುಬೈನಲ್ಲಿ ನಡೆದ IPL 2025 ರ ಹರಾಜಿನಲ್ಲಿ ಕೆಕೆಆರ್ ತಂಡವೂ ಅಜಿಂಕ್ಯಾ ರಹಾನೆಯನ್ನು 1.5 ಕೋಟಿ ರೂ.ಗೆ ಖರೀದಿಸಿತ್ತು. ವೆಂಕಟೇಶ್ ಅಯ್ಯರ್ ಅವರನ್ನು ಬರೊಬ್ಬರಿ 23.75 ಕೋಟಿ ರೂ.ಗೆ ಖರೀದಿ ಮಾಡಿದೆ.
“ಅಜಿಂಕ್ಯ ರಹಾನೆ ಅವರಂತಹ ಅನುಭವವನ್ನು ಮತ್ತು ನಾಯಕನಾಗಿ ಪ್ರಬುದ್ಧತೆಯನ್ನು ತರಲು ನಾವು ಸಂತೋಷಪಡುತ್ತೇವೆ. ಅಲ್ಲದೆ, ವೆಂಕಟೇಶ್ ಅಯ್ಯರ್ ಕೆಕೆಆರ್‌ಗೆ ಫ್ರಾಂಚೈಸಿ ಆಟಗಾರರಾಗಿದ್ದಾರೆ ಮತ್ತು ಸಾಕಷ್ಟು ನಾಯಕತ್ವದ ಗುಣಗಳನ್ನು ತರುತ್ತಿದ್ದಾರೆ. ನಾವು ನಮ್ಮ ಪ್ರಶಸ್ತಿಯ ರಕ್ಷಣೆಯನ್ನು ಪ್ರಾರಂಭಿಸಿದಾಗ ಅವರು ಉತ್ತಮವಾಗಿ ಸಂಯೋಜಿಸುತ್ತಾರೆ ಎಂದು ನಮಗೆ ವಿಶ್ವಾಸವಿದೆ.'' |ವೆಂಕಿ ಮೈಸೂರು, ಕೆಕೆಆರ್ ಸಿಇಒ. https://www.vijayavani.net/world-record-run-machine-virat-kohli-becomes-third-batsman-in-the-world-to-score-14000-runs https://www.vijayavani.net/tamannaah-bhatia-seen-in-hot-look-fans-call-her-a-barbie-doll