ಕ್ರೀಡೆ

IPL 2025 Auction: ಇವರೇ ನೋಡಿ ದುಬಾರಿ ಮೊತ್ತಕ್ಕೆ ಖರೀದಿಯಾದ 5 ಸ್ಟಾರ್​ ಆಟಗಾರರು

ನವದೆಹಲಿ: ನವೆಂಬರ್ 24 ಹಾಗೂ 25ರಂದು ನಡೆಯಲಿರುವ ಐಪಿಎಲ್​ ಹರಾಜಿನತ್ತ ಎಲ್ಲರ ಚಿತ್ತ ಮೂಡಿದ್ದು, ಯಾವ ಸ್ಟಾರ್​ ಆಟಗಾರರನ್ನು ಆಯಾ ಫ್ರಾಂಚೈಸಿ ಖರೀದಿ ಮಾಡಲಿದೆ? ಎಷ್ಟು ಕೋಟಿ ಹಣಕ್ಕಾಗಿ ಬಿಡ್​ ಮಾಡಲಿದೆ ಎಂಬ ಲೆಕ್ಕಾಚಾರಗಳು ಸದ್ಯ ಬಿರುಸಿನಿಂದ ಸಾಗಿತ್ತು. ಆದರೆ, ಮೊದಲ ದಿನದ ಹರಾಜು ಪ್ರಕ್ರಿಯೆ ಬಹುತೇಕರನ್ನು ಅಚ್ಚರಿಗೆ ದೂಡಿದೆ. ಒಂದೆಡೆ ಲೆಕ್ಕಾಚಾರಗಳೆನೋ ಜೋರಾಗಿದ್ದರೂ, ಟಾರ್ಗೆಟ್​ ಮಾಡಬೇಕಿದ್ದ ಆಟಗಾರರನ್ನು ಖರೀದಿ ( IPL 2025 Auction) ಮಾಡುವಲ್ಲಿ ಆಯಾ ತಂಡಗಳು ವಿಫಲವಾಗಿರುವುದು ಇದೀಗ ಕ್ರಿಕೆಟ್ ಪ್ರಿಯರಲ್ಲಿ ಭಾರೀ ನಿರಾಸೆ ಮೂಡಿಸಿದೆ.

ಮೊದಲ ದಿನದ ಹರಾಜಿನಲ್ಲಿ ಭಾರತೀಯ ಸ್ಟಾರ್​ ಆಟಗಾರರಾದ ಶ್ರೇಯಸ್​ ಅಯ್ಯರ್​, ರಿಷಭ್ ಪಂತ್, ಕೆ.ಎಲ್​. ರಾಹುಲ್ ಮೇಲೆ ಭಾರೀ ನಿರೀಕ್ಷೆಯಿತ್ತು. ಈ ಪೈಕಿ ಅರ್ಷ್​ದೀಪ್ ಸಿಂಗ್​ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್​ ಸೇರಿದರೆ, ಯಜುವೇಂದ್ರ ಚಹಲ್ ಕೂಡ 18 ಕೋಟಿ ರೂ.ಗೆ ಖರೀದಿಯಾದರು. ಇನ್ನು 15.75 ಕೋಟಿಗೆ​ ಪವರ್​ ಹಿಟ್ಟರ್​​ ಜೋಸ್​ ಬಟ್ಲರ್​ ಗುಜರಾತ್​ ಟೈಟನ್ಸ್​ ಸೇರಿಕೊಂಡರು.
ಇನ್ನು ಎಲ್ಲರ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದು, ರಿಷಭ್ ಪಂತ್​ ಮತ್ತು ಶ್ರೇಯಸ್​ ಅಯ್ಯರ್​. ಐಪಿಎಲ್​ ಹರಾಜಿನಲ್ಲೇ ದಾಖಲೆ ಮೊತ್ತಕ್ಕೆ ಖರೀದಿಯಾದ ಪಂತ್, ಬರೋಬ್ಬರಿ 27 ಕೋಟಿ ರೂ.ಗೆ ಲಖನೌ ಸೂಪರ್ ಜೈಂಟ್ಸ್​ ಪಾಲಾದರೆ, 26.75 ಕೋಟಿಗೆ ಶ್ರೇಯಸ್​ ಪಂಜಾಬ್ ಕಿಂಗ್ಸ್​ಗೆ ಖರೀದಿಯಾದರು. ಇದು ನೋಡುಗರ ಹುಬ್ಬೇರಿಸಿತು. ಆದರೆ, ಕನ್ನಡಿಗ ಕೆ.ಎಲ್​. ರಾಹುಲ್​ ಖರೀದಿ ಯಾರಿಗೂ ಖುಷಿ ನೀಡಲಿಲ್ಲ. ಕೇವಲ 14 ಕೋಟಿ ರೂ. ಡೆಲ್ಲಿ ಕ್ಯಾಪಿಟಲ್ಸ್​ ಪಾಲಾಗಿದ್ದಾರೆ.