ಮುಂಬೈ: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್ಗೆ (IPL) ಸಂಬಂಧಿಸಿದಂತೆ ನವೆಂಬರ್ 24 ಹಾಗೂ 25ರಂದು ಮೆಗಾ ಹರಾಜು (Mega Auction) ನಡೆಯಲಿದ್ದು, ಮೆಗಾ ಹರಾಜಿಗಾಗಿ ಬರೋಬ್ಬರಿ 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 1,165 ಭಾರತೀಯ ಆಟಗಾರರಿದ್ದರೆ, 409 ವಿದೇಶಿ ಆಟಗಾರರಿದ್ದಾರೆ.
ಈ ಹಿಂದೆ ಸಿಂಗಾಪುರ್, ದುಬೈ ಅಥವಾ ಲಂಡನ್ನಲ್ಲಿ ಮೆಗಾ ಆಕ್ಷನ್ (Mega Auction) ನಡೆಯಲಿದೆ ಎಂದು ವರದಿಯಾಗಿತ್ತು. ಆದರೀಗ ಸೌದಿ ಅರೇಬಿಯಾದಲ್ಲಿ ಮೆಗಾ ಹರಾಜು ನಡೆಯಲಿದೆ. ಅದರಂತೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ಐಪಿಎಲ್ (IPL) ಮೆಗಾ ಹರಾಜು ನಡೆಯಲಿದೆ. ಈ ಮೊದಲು ರಿಯಾದ್ನಲ್ಲಿನಡೆಯಲಿದೆ ಎಂದು ಹೇಳಲಾಗಿತ್ತಾದರು. ಇದೀಗ ಜಿದ್ದಾದಲ್ಲಿ (Jeddah) ನಡೆಯುವುದು ಪಕ್ಕಾ ಆಗಿದೆ.
ನೋಂದಣಿ ವಿವರ ಹೀಗಿದೆ
- ರಾಷ್ಟ್ರೀಯ ತಂಡದ ಪರ ಆಡಿದ ಭಾರತೀಯರು – 48 ಆಟಗಾರರು
- ರಾಷ್ಟ್ರೀಯ ತಂಡದ ಪರ ಆಡಿದ ವಿದೇಶಿಯರು- 272 ಆಟಗಾರರು
- ಹಿಂದಿನ ಐಪಿಎಲ್ ಸೀಸನ್‌ಗಳ ಭಾಗವಾಗಿದ್ದ ಅನ್‌ಕ್ಯಾಪ್ಡ್ ಭಾರತೀಯರು- 152 ಆಟಗಾರರು
- ಹಿಂದಿನ ಐಪಿಎಲ್ ಸೀಸನ್‌ಗಳ ಭಾಗವಾಗಿದ್ದ ಅನ್‌ಕ್ಯಾಪ್ಡ್ ವಿದೇಶಿಯರು- 3 ಆಟಗಾರರು
- ಅನ್‌ಕ್ಯಾಪ್ಡ್ ಭಾರತೀಯರು- 965 ಆಟಗಾರರು
- ಅನ್‌ಕ್ಯಾಪ್ಡ್ ವಿದೇಶಿಯರು- 104 ಆಟಗಾರರು
ರಿಟೇನ್ ಹಾಗೂ ಪರ್ಸ್ ವಿವರ ಹೀಗಿದೆ
ಆರ್ಸಿಬಿ (RCB)
- ವಿರಾಟ್ ಕೊಹ್ಲಿ (21 ಕೋಟಿ ರೂ.)
- ರಜತ್ ಪಾಟಿದಾರ್ (11 ಕೋಟಿ ರೂ.)
- ಯಶ್ ದಯಾಳ್ (5 ಕೋಟಿ ರೂ.)
- ಆರ್‌ಟಿಎಮ್: 03
- ಪರ್ಸ್ನಲ್ಲಿರುವ ಮೊತ್ತ: 83 ಕೋಟಿ ರೂ.
ಪಂಜಾಬ್ ಕಿಂಗ್ಸ್ (PBKS)
- ಶಶಾಂಕ್ ಸಿಂಗ್ (₹5.5 ಕೋಟಿ ರೂ.)
- ಪ್ರಭ್ಸಿಮ್ರಾನ್ ಸಿಂಗ್ (₹4 ಕೋಟಿ ರೂ.)
- ಆರ್‌ಟಿಎಮ್: 04
- ಪರ್ಸ್ನಲ್ಲಿರುವ ಮೊತ್ತ ₹110.5 ಕೋಟಿ ರೂ.
ಮುಂಬೈ ಇಂಡಿಯನ್ಸ್ (MI)
- ಜಸ್ಪ್ರೀತ್ ಬುಮ್ರಾ (₹18 ಕೋಟಿ ರೂ.)
- ಹಾರ್ದಿಕ್ ಪಾಂಡ್ಯ (₹16.35 ಕೋಟಿ ರೂ.)
- ಸೂರ್ಯಕುಮಾರ್ ಯಾದವ್ (₹16.35 ಕೋಟಿ ರೂ.)
- ರೋಹಿತ್ ಶರ್ಮಾ (₹16.30 ಕೋಟಿ ರೂ.)
- ತಿಲಕ್ ವರ್ಮಾ (₹8 ಕೋಟಿ ರೂ.)
- ಆರ್‌ಟಿಎಮ್: 01
- ಪರ್ಸ್ನಲ್ಲಿರುವ ಮೊತ್ತ: 45 ಕೋಟಿ ರೂ.
ಚೆನ್ನೈ ಸೂಪರ್ ಕಿಂಗ್ಸ್ (CSK)
- ಋತುರಾಜ್ ಗಾಯಕ್ವಾಡ್ (₹18 ಕೋಟಿ ರೂ.)
- ರವೀಂದ್ರ ಜಡೇಜಾ (₹18 ಕೋಟಿ ರೂ.)
- ಮಥೀಶ ಪತಿರಾನ (₹13 ಕೋಟಿ ರೂ.)
- ಶಿವಂ ದುಬೆ (₹12 ಕೋಟಿ ರೂ.)
- ಎಂಎಸ್ ಧೋನಿ (ಅನ್‌ಕ್ಯಾಪ್ಡ್. ₹ 4 ಕೋಟಿ ರೂ.)
- ಆರ್‌ಟಿಎಮ್: 01
- ಪರ್ಸ್ನಲ್ಲಿರುವ ಮೊತ್ತ : ₹55 ಕೋಟಿ ರೂ.
ಕಲ್ಕತ್ತಾ ನೈಟ್ರೈಡರ್ಸ್ (KKR)
- ರಿಂಕು ಸಿಂಗ್ (₹13 ಕೋಟಿ ರೂ.)
- ವರುಣ್ ಚಕ್ರವರ್ತಿ (₹12 ಕೋಟಿ ರೂ.)
- ಸುನಿಲ್ ನರೇನ್ (₹12 ಕೋಟಿ ರೂ.)
- ಆಂಡ್ರೆ ರಸೆಲ್ (₹12 ಕೋಟಿ ರೂ.)
- ಹರ್ಷಿತ್ ರಾಣಾ (ಅನ್‌ಕ್ಯಾಪ್ಡ್, ₹ 4 ಕೋಟಿ ರೂ.)
- ರಮಣದೀಪ್ ಸಿಂಗ್ (ಅನ್‌ಕ್ಯಾಪ್ಡ್, ₹ 4 ಕೋಟಿ ರೂ.)
- ಆರ್‌ಟಿಎಮ್: 0
- ಪರ್ಸ್ನಲ್ಲಿರುವ ಮೊತ್ತ: ₹51 ಕೋಟಿ ರೂ.
ರಾಜಸ್ಥಾನ ರಾಯಲ್ಸ್ (RR)
- ಸಂಜು ಸ್ಯಾಮ್ಸನ್ (₹18 ಕೋಟಿ ರೂ.)
- ಯಶಸ್ವಿ ಜೈಸ್ವಾಲ್ (₹18 ಕೋಟಿ ರೂ.)
- ರಿಯಾನ್ ಪರಾಗ್ (₹14 ಕೋಟಿ ರೂ.)
- ಧ್ರುವ್ ಜುರೆಲ್ (₹14 ಕೋಟಿ ರೂ.)
- ಶಿಮ್ರಾನ್ ಹೆಟ್ಮೆಯರ್ (₹11 ಕೋಟಿ ರೂ.)
- ಸಂದೀಪ್ ಶರ್ಮಾ (ಅನ್‌ಕ್ಯಾಪ್ಡ್,₹ 4 ಕೋಟಿ ರೂ.)
- ಆರ್‌ಟಿಎಮ್: 0
- ಪರ್ಸ್ನಲ್ಲಿರುವ ಮೊತ್ತ: ₹41 ಕೋಟಿ ರೂ.
ಗುಜರಾತ್ ಟೈಟಾನ್ಸ್ (GT)
- ರಶೀದ್ ಖಾನ್ (₹18 ಕೋಟಿ ರೂ.)
- ಶುಭಮನ್ ಗಿಲ್ (₹16.5 ಕೋಟಿ ರೂ.)
- ಸಾಯಿ ಸುದರ್ಶನ್ (₹8.5 ಕೋಟಿ ರೂ.)
- ರಾಹುಲ್ ತೆವಾಟಿಯಾ (₹4 ಕೋಟಿ ರೂ.)
- ಶಾರುಖ್ ಖಾನ್ (₹4 ಕೋಟಿ ರೂ.)
- ಆರ್‌ಟಿಎಮ್: 01
- ಪರ್ಸ್ನಲ್ಲಿರುವ ಮೊತ್ತ: ₹69 ಕೋಟಿ ರೂ.
ಲಕ್ನೋ ಸೂಪರ್ ಜೈಂಟ್ಸ್ (LSG)
- ನಿಕೋಲಸ್ ಪೂರನ್ (₹21 ಕೋಟಿರೂ.)
- ಮಯಾಂಕ್ ಯಾದವ್ (₹11 ಕೋಟಿ ರೂ.)
- ರವಿ ಬಿಷ್ಣೋಯ್ (₹11 ಕೋಟಿ ರೂ.)
- ಮೊಹ್ಸಿನ್ ಖಾನ್ (ಅನ್‌ಕ್ಯಾಪ್ಡ್, ₹4 ಕೋಟಿ ರೂ.)
- ಆಯುಷ್ ಬದೋನಿ (ಅನ್‌ಕ್ಯಾಪ್ಡ್, ₹4 ಕೋಟಿ ರೂ.)
- ಆರ್‌ಟಿಎಮ್: 01
- ಪರ್ಸ್ನಲ್ಲಿರುವ ಮೊತ್ತ : ₹69 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್ (DC)
- ಅಕ್ಷರ್ ಪಟೇಲ್ (₹16.5 ಕೋಟಿ ರೂ.)
- ಕುಲದೀಪ್ ಯಾದವ್ (₹13.25 ಕೋಟಿ ರೂ.)
- ಟ್ರಿಸ್ಟನ್ ಸ್ಟಬ್ಸ್ (₹10 ಕೋಟಿ ರೂ.)
- ಅಭಿಷೇಕ್ ಪೊರೆಲ್ (ಅನ್‌ಕ್ಯಾಪ್ಡ್ ₹4 ಕೋಟಿ ರೂ.)
- ಆರ್‌ಟಿಎಮ್: 02
- ಪರ್ಸ್ನಲ್ಲಿರುವ ಮೊತ್ತ: ₹76.25 ಕೋಟಿ ರೂ.
ಸನ್‌ರೈಸರ್ಸ್ ಹೈದರಾಬಾದ್ (SRH)
- ಪ್ಯಾಟ್ ಕಮ್ಮಿನ್ಸ್ (₹18 ಕೋಟಿ ರೂ.)
- ಅಭಿಷೇಕ್ ಶರ್ಮಾ (₹14 ಕೋಟಿ ರೂ.)
- ನಿತೀಶ್ ಕುಮಾರ್ ರೆಡ್ಡಿ (₹6 ಕೋಟಿ ರೂ.)
- ಹೆನ್ರಿಕ್ ಕ್ಲಾಸೆನ್ (₹23 ಕೋಟಿ ರೂ.)
- ಟ್ರಾವಿಸ್ ಹೆಡ್ (₹14 ಕೋಟಿ ರೂ.)
- ಆರ್‌ಟಿಎಮ್: 04
- ಪರ್ಸ್ನಲ್ಲಿರುವ ಮೊತ್ತ: ₹45 ಕೋಟಿ ರೂ