ಚೆನ್ನೈ: ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ತೋರುತ್ತಿರುವ ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 17ರ ತನ್ನ ಲೀಗ್ ಪಂದ್ಯದಲ್ಲಿ ಬುಧವಾರ ಪಂಜಾಬ್ ಕಿಂಗ್ಸ್ಎದುರು ಸೆಣಸಾಡಲಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಸ್ಯಾಮ್ ಕರನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಂದಿನ ಪಂದ್ಯಕ್ಕೂ ತಂಡದ ನಾಯಕ ಶಿಖರ್ ಧವನ್ ಅಲಭ್ಯರಾಗಿದ್ದಾರೆ. ಇಲ್ಲಿನ ಚೆಪಾಕ್ನಲ್ಲಿ ಜಯದ ಹಾದಿಗೆ ಮರಳಿರುವ ಋತುರಾಜ್ ಗಾಯಕ್ವಾಡ್ ಪಡೆ ಪ್ಲೇಆಫ್ ಅವಕಾಶ ವೃದ್ಧಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡಚನ್ನು ಹಾಲಿ ಟೂರ್ನಿಯಲ್ಲಿ ಆಲೌಟ್ ಮಾಡಿದ ಮೊದಲ ತಂಡ ಎನಿಸಿರುವ ಸಿಎಸ್ಕೆ ಇದುವರೆಗೆ ಆಡಿದ 9 ಪಂದ್ಯಗಲ್ಲಿ 5 ಗೆಲುವು, 4 ಸೋಲಿನೊಂದಿಗೆ 10 ಅಂಕ ಕಲೆಹಾಕಿದೆ. ಉಳಿದಿರುವ 5 ಪಂದ್ಯಗಳ ಪೈಕಿ 3ರಲ್ಲಿ ಗೆಲುವು ದಾಖಲಿಸಿ ಪ್ಲೇ ಆಫ್ ಗೇರುವತ್ತ ಸಿಎಸ್ಕೆ ಗಮನಹರಿಸಿದೆ. ಪಂಜಾಬ್ ಇದುವರೆಗೆ ಆಡಿರುವ 9 ಪಂದ್ಯಗಲ್ಲಿ 3ರಲ್ಲಿ ಗೆದ್ದು 6 ಸೋಲಿನೊಂದಿಗೆ 6 ಅಂಕ ಕಲೆಹಾಕಿದೆ.
ಈ ಪಂದ್ಯದಲ್ಲಿ ಚೆನ್ನೈ ತನ್ನ ಆವೇಗವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಪಂಜಾಬ್ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಲು ಕಣ್ಣಿಟ್ಟಿದೆ.