ಮುಂಬೈ: ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ (103 ರನ್, 61 ಎಸೆತ, 9 ಬೌಂಡರಿ, 5 ಸಿಕ್ಸರ್) ಶತಕದಾಟ ಹಾಗೂ ಸ್ಪಿನ್ನರ್ ಯಜುವೇಂದ್ರ ಚಾಹಲ್ (40ಕ್ಕೆ 5) ಹ್ಯಾಟ್ರಿಕ್ ಸಾಧನೆ ನೆರವಿನಿಂದ ರಾಜಸ್ಥಾನ ರಾಯಲ್ಸ್ ಐಪಿಎಲ್-15ರ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್ ತಂಡವನ್ನು 7 ರನ್‌ಗಳಿಂದ ಮಣಿಸಿತು. ನಾಯಕ ಶ್ರೇಯಸ್ ಅಯ್ಯರ್ (85ರನ್, 51 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಆರನ್ ಫಿಂಚ್ (58ರನ್, 28 ಎಸೆತ, 9 ಬೌಂಡರಿ, 2 ಸಿಕ್ಸರ್) ಅಬ್ಬರದ ಬಳಿಕ ಕೆಕೆಆರ್ ದಿಢೀರ್ ಕುಸಿಯಿತು. ಕೊನೆಯಲ್ಲಿ ಬಾಲಂಗೋಚಿ ಉಮೇಶ್ ಯಾದವ್ (21 ರನ್, 8 ಎಸೆತ, 1 ಬೌಂಡರಿ, 2 ಸಿಕ್ಸರ್) ಕೆಲಕಾಲ ಸ್ಫೋಟಿಸಿದರೂ ಕೆಕೆಆರ್ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಇದರಿಂದ ಶ್ರೇಯಸ್ ಅಯ್ಯರ್ ಪಡೆ ಹ್ಯಾಟ್ರಿಕ್ ಸೋಲಿನ ನಿರಾಸೆ ಕಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 5 ವಿಕೆಟ್‌ಗೆ 217 ರನ್ ಕಲೆಹಾಕಿತು. ಹಾಲಿ ಆವೃತ್ತಿಯಲ್ಲಿ ದಾಖಲಾದ ಈ ಗರಿಷ್ಠ ಮೊತ್ತವನ್ನು ದಿಟ್ಟವಾಗಿಯೇ ಬೆನ್ನಟ್ಟುವ ಸಾಹಸಕ್ಕೆ ಕೆಕೆಆರ್ ಕೈಹಾಕಿದರೂ ಅಂತಿಮವಾಗಿ 19.4 ಓವರ್‌ಗಳಲ್ಲಿ 210 ರನ್‌ಗಳಿಗೆ ಸರ್ವಪತನ ಕಂಡಿತು.
ರಾಜಸ್ಥಾನ ರಾಯಲ್ಸ್: 5 ವಿಕೆಟ್‌ಗೆ 217 (ಜೋಸ್ ಬಟ್ಲರ್ 103, ಸ್ಯಾಮ್ಸನ್ 38, ಸುನೀಲ್ ನಾರಾಯಣ್ 21ಕ್ಕೆ 1), ಕೆಕೆಆರ್: 19.4 ಓವರ್‌ಗಳಲ್ಲಿ 210 (ಆರನ್ ಫಿಂಚ್ 58, ಶ್ರೇಯಸ್ ಅಯ್ಯರ್ 85, ಯಜುವೇಂದ್ರ ಚಾಹಲ್ 40ಕ್ಕೆ 5, ಒಬೆದ್ ಮೆಕ್‌ಕಾಯ್ 41ಕ್ಕೆ 2).