ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಇರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಟ್ವಿಟರ್ನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿ ಪ್ರಶ್ನೆ ಕೇಳಿದ್ದಾರೆ. 2006ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯವೊಂದರ ಭಾರತ ತಂಡದ ಸ್ಕೋರ್ ಬೋರ್ಡ್ನ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ವಿರೇಂದ್ರ ಸೆಹ್ವಾಗ್ ಟ್ವಿಟರ್ನಲ್ಲಿ ಫೋಟೋ ಅಪ್ಲೋಡ್ ಮಾಡಿ, ಸ್ಕೋರ್‌ಕಾರ್ಡನ್ನು ಮರೆತುಬಿಡಿ, ಇದರಲ್ಲಿರುವ 11 ಜನ ಭಾರತೀಯರ ಬಗ್ಗೆ ಒಂದು ಕುತೂಹಲಕಾರಿ ವಿಷಯವಿದೆ. ಸೂಚಿಸಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಬಗ್ಗೆ ಟ್ವಿಟರ್ನಲ್ಲಿ ಚರ್ಚೆಯಾಗುತ್ತಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ.
ಪಾಕಿಸ್ತಾನ ವಿರುದ್ಧ 2006ರಲ್ಲಿ ನಡೆದ ಈ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಸೆಹ್ವಾಗ್ - ದ್ರಾವಿಡ್ ಜೋಡಿ 404 ರನ್ಗಳ ಜತೆಯಾಟವಾಡಿತ್ತು. ಇವರಿಬ್ಬರ ಈ ಇನ್ನಿಂಗ್ಸ್ ಕ್ರಿಕೆಟ್ ಪ್ರೇಮಿಗಳಲ್ಲಿ ಸ್ಮರಣೀಯವಾಗಿ ಉಳಿದುಕೊಂಡಿದೆ. ಸೆಹ್ವಾಗ್ ದ್ವಿಶತಕ ಸಹಿತ248 ರನ್ ಗಳಿಸಿದರೆ, ದ್ರಾವಿಡ್ 128 ರನ್ ಗಳಿಸಿ ಶತಕ ಸಿಡಿಸಿದ್ದರು.
ಸೆಹ್ವಾಗ್ ಮಾಡಿರುವ ಈ ಟ್ವೀಟ್ಗೆ, ಈ ತಂಡದಲ್ಲಿ ಒಬ್ಬರೇ ಸ್ಪಿನ್ ಬೌಲರ್ ಹರ್ಭಜನ್ ಇದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ, ಇಲ್ಲಾ... ಅನಿಲ್ ಕುಂಬ್ಳೆಯೂ ಇದ್ದಾರೆ. ಭಾರತ ಟೆಸ್ಟ್ ಕ್ರಿಕೆಟ್ನ ಗ್ರೇಟ್ ಮ್ಯಾಚ್ ವಿನ್ನರ್ ಕುಂಬ್ಳೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)