ಕ್ರೀಡೆ

ಅಂತರ ಶಾಲಾ ಬಾಲಕಿಯರ ಬಾಸ್ಕೆಟ್​ಬಾಲ್: ಕ್ಲೂನಿ ಕಾನ್ವೆಂಟ್​, ಕ್ರೀಡಾ ಶಾಲೆಗೆ ಪ್ರಶಸ್ತಿ

ಬೆಂಗಳೂರು: ಕ್ಲೂನಿ ಕಾನ್ವೆಂಟ್​ ಮತ್ತು ಸ್ಪೋರ್ಟ್ಸ್​ ಸ್ಕೂಲ್​ ತಂಡಗಳು ಯೊಹೊ ಬೀಗಲ್ಸ್​ ವಿಂಟರ್​ ಹೂಪ್ಸ್​ ಅಂತರ ಶಾಲಾ ಬಾಲಕಿಯರ ಬಾಸ್ಕೆಟ್​ಬಾಲ್​ ಟೂರ್ನಿಯಲ್ಲಿ ಕ್ರಮವಾಗಿ 14 ಮತ್ತು 16 ವಯೋಮಿತಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.

ಮಲ್ಲೇಶ್ವರದ ಬೀಗಲ್ಸ್​ ಕ್ಲಬ್​ನಲ್ಲಿ ನಡೆದ ಟೂರ್ನಿಯಲ್ಲಿ 14 ವಯೋಮಿತಿ ವಿಭಾಗದ ಫೈನಲ್​ನಲ್ಲಿ ಕ್ಲೂನಿ ಕಾನ್ವೆಂಟ್​ ತಂಡ 21-8ರಿಂದ ಬಿಶಪ್​ ಕಾಟನ್​ ತಂಡವನ್ನು ಮಣಿಸಿತು. 16 ವಯೋಮಿತಿ ವಿಭಾಗದ ಫೈನಲ್​ನಲ್ಲಿ ಕ್ರೀಡಾಶಾಲಾ ತಂಡ 40-13ರಿಂದ ಕ್ಲೂನಿ ಕಾನ್ವೆಂಟ್​ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತು.

ಆಂಥೋನಿ ಕ್ಲಾರೆಟ್​ ಮತ್ತು ಸಿಲಿಕಾಲ್​ ಸಿಟಿ ತಂಡಗಳು ಕ್ರಮವಾಗಿ 14 ಮತ್ತು 16 ವಯೋಮಿತಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡವು.