ಕ್ರೀಡೆ

ಎರಡನೇ ಏಕದಿನ ಪಂದ್ಯದಿಂದ ಶ್ರೇಯಸ್​ ಅಯ್ಯರ್​ಗೆ ಕೊಕ್​? ಕೋಚ್ Gautam Gambhir ಸ್ಟ್ರಾಟರ್ಜಿ ವಿರುದ್ಧ ಮುಗಿಬಿದ್ದ ಫ್ಯಾನ್ಸ್

ಕಟಕ್​: ಇಲ್ಲಿನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಆತಿಥೇಯರು ತಯಾರಿ ನಡೆಸುತ್ತಿದ್ದಾರೆ. ಮೊದಲ ಪಂದ್ಯದ ಸೋಲಿನಿಂದ ಹೊರಬಂದು ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಬೇಕೆಂದು ಇಂಗ್ಲೆಂಡ್​ ತಯಾರಿ ನಡೆಸುತ್ತಿದ್ದು, ಭಾನುವಾರದ (ಫೆಬ್ರವರಿ 09) ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ಇನ್ನೂ ಮೊದಲ ಪಂದ್ಯ ಶುರುವಾಗುವುದಕ್ಕೂ ಮುನ್ನ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ವಿರಾಟ್​ ಕೊಹ್ಲಿ (Virat Kohli) ಫಿಟ್​ ಆಗಿದ್ದು, ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ವಿರಾಟ್​ ತಂಡಕ್ಕೆ ವಾಪಸ್​ ಆಗುತ್ತಿರುವುದರಿಂದ ಓರ್ವ ಆಟಗಾರನಿಗೆ ಕೊಕ್ ಕೊಡುವುದು ಪಕ್ಕಾ ಆಗಿದ್ದು, ಆ ಆಟಗಾರ ಯಾರೆಂಬುದು ದೊಡ್ಡ ಪ್ರಶ್ನೆಯಾಗಿದೆ. ಮೊದಲಿಗೆ ಯಶಸ್ವಿ ಜೈಸ್ವಾಲ್ ಹೆಸರಿ ಕೇಳಿ ಬಂದಿತಾದರು. ಇದೀಗ ಮತ್ತೋರ್ವ ಆಟಗಾರನ ಹೆಸರು ಮುನ್ನೆಲೆಗೆ ಬಂದಿದ್ದು, ಕೋಚ್​ ಗೌತಮ್​ ಗಂಭೀರ್​ (Gautam Gambhir) ಸ್ಟ್ರಾಟರ್ಜಿ ವಿರುದ್ಧ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಶ್ರೇಯಸ್ ಅಯ್ಯರ್​ ಕೊಹ್ಲಿಗೆ ಸ್ಥಾನ ಬಿಟ್ಟುಕೊಡುವ ಆಟಗಾರ ಎಂದು ಹೇಳಲಾಗುತ್ತಿದೆ. ಕಳೆದ ಪಂದ್ಯದಲ್ಲಿ ತಂಡದ ಪರ ಉಪಯುಕ್ತ ಇನ್ನಿಂಗ್ಸ್ ಆಡಿದ್ದ ಶ್ರೇಯಸ್​ಗೆ ಎರಡನೇ ಪಂದ್ಯದಲ್ಲಿ ಚಾನ್ಸ್​ ಸಿಗುವುದು ಡೌಟ್​ ಎಂದು ಹೇಳಲಾಗಿದ್ದು, ಕೋಚ್ ಗೌತಮ್ ಗಂಭೀರ್​ (Gautam Gambhir) ಹಾಕಿಕೊಂಡಿರುವ ಯೋಜನೆ ವಿರುದ್ಧ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆದರೆ, ಈ ಸುದ್ದಿ ಇನ್ನಷ್ಟೇ ಅಧಿಕೃತವಾಗಬೇಕಿದೆ.

ಆರಂಭಿಕರಾಗಿ ರೋಹಿತ್ ಶರ್ಮ ಹಾಗೂ ಯಶಸ್ವಿ ಜೈಸ್ವಾಲ್​ರನ್ನು ಮುಂದುವರೆಸಲು ಗೌತಮ್​ ಗಂಭೀರ್​ (Gautam Gambhir) ಯೋಜಿಸಿದ್ದು, ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್​ ಬದಲು ವಿರಾಟ್​ರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ಟಾಸ್​ ಆದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.