ಕೂಟದ ಮಾಹಿತಿ ನೀಡಿದ ಎಸ್​ಎಸಿ ಹಿರಿಯ ಮೇಲ್ವಿಚಾರಕ ಜಿಜೀಶ್​ ಜಯನ್​. ಮುಖ್ಯ ತರಬೇತುದಾರರಾದ ಶರತ್​ ಚಂದ್ರ, ಅಂಕುಶ್​ ಕನ್ಬಾರ್ಕರ್​, ಕಾರ್ಯಾಚರಣೆ ಮುಖ್ಯಸ್ಥ ಅನಿಲ್​ ಕುಮಾರ್​ ನಾಯರ್​, ವ್ಯವಸ್ಥಾಪಕ ವಿನೋದ್​ ಕುಮಾರ್​ ಇದ್ದರು.  
ಕ್ರೀಡೆ

ನೆಟ್ಟಕಲ್ಲಪ್ಪ ಈಜು ಸ್ಪರ್ಧೆ ಎಂಬ ರೋಚಕ ಅಲೆಗಳ ಸಾಗರ

ಪ್ರತಿವರ್ಷವೂ ಈಜುಪ್ರಿಯರು ಕಾತುರದಿಂದ ಕಾಯುವ ಅತ್ಯಂತ ರೋಮಾಂಚಕ ಮತ್ತು ಪ್ರತಿಷ್ಠಿತವಾದ ‘ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್ ವೇದಿಕೆ ಸಿದ್ಧವಾಗಿದೆ. ಒಲಿಂಪಿಯನ್‌ಗಳು, ಅಂತರರಾಷ್ಟ್ರೀಯ ಈಜುಪಟುಗಳು ಮತ್ತು ಉದಯೋನ್ಮುಖರು ಗೆಲುವಿನ ಅಲೆಗಳನ್ನೆಬ್ಬಿಸಲು ಕಾತುರರರಾಗಿದ್ದಾರೆ.

ಬೆಂಗಳೂರು: ಪ್ರತಿವರ್ಷವೂ ಈಜುಪ್ರಿಯರು ಕಾತುರದಿಂದ ಕಾಯುವ ಅತ್ಯಂತ ರೋಮಾಂಚಕ ಮತ್ತು ಪ್ರತಿಷ್ಠಿತವಾದ ‘ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್ ವೇದಿಕೆ ಸಿದ್ಧವಾಗಿದೆ. ಒಲಿಂಪಿಯನ್‌ಗಳು, ಅಂತರರಾಷ್ಟ್ರೀಯ ಈಜುಪಟುಗಳು ಮತ್ತು ಉದಯೋನ್ಮುಖರು ಗೆಲುವಿನ ಅಲೆಗಳನ್ನೆಬ್ಬಿಸಲು ಕಾತುರರರಾಗಿದ್ದಾರೆ.

ಈ ಕೂಟವು ಪದ್ಮನಾಭನಗರದಲ್ಲಿರುವ ನೆಟ್ಟಕಲ್ಲಪ್ಪ ಅಕ್ವಾಟಿಕ್ ಕೇಂದ್ರ (ಎನ್‌ಎಸಿ)ದಲ್ಲಿ ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಆಯೋಜನೆಗೊಳ್ಳಲಿದೆ.

ಅತ್ಯಾಧುನಿಕ ಮತ್ತು ಸುಸಜ್ಜಿತವಾದ ಮೂಲಸೌಲಭ್ಯಗಳು ಇರುವ ಎನ್‌ಎಸಿಯಲ್ಲಿ ಪ್ರತಿವರ್ಷವು ನಡೆಯುವ ಈ ಕೂಟವು ಅಂತರಾಷ್ಟ್ರೀಯಮಟ್ಟದಲ್ಲಿ ಗಮನ ಸೆಳೆದಿದೆ. ಈಜು ಕ್ರೀಡೆಯತ್ತ ಮಕ್ಕಳು, ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ‘ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್ ಪ್ರೇರಣೆಯಾಗುತ್ತಿದೆ. ಇದಕ್ಕೆ ಕಾರಣವೆಂದರೆ ಪ್ರತಿ ಬಾರಿಯೂ ಇಲ್ಲಿ ಸ್ಪರ್ಧಿಸುತ್ತಿರುವ ಭಾರತದ ಅಗ್ರಮಾನ್ಯ ಈಜುಪಟುಗಳು, ಒಲಿಂಪಿಯನ್ ಈಜು ಸಾಧಕರು. ಈ ಬಾರಿಯೂ ಖ್ಯಾತನಾಮ ಅಂತರರಾಷ್ಟ್ರೀಯ ಈಜುಪಟುಗಳು ‘ಸ್ಪರ್ಧಾಕೊಳ’ಕ್ಕೆ ಧುಮುಕಲು ಸಿದ್ಧರಾಗಿದ್ದಾರೆ. ಒಲಿಂಪಿಯನ್ ಶ್ರೀಹರಿ ನಟರಾಜ್ ಮತ್ತು ಸಾಜನ್ ಪ್ರಕಾಶ್ ಅವರು ಕಣದಲ್ಲಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಕೂಟದಲ್ಲಿ ಪ್ರತಿವರ್ಷವೂ ನಡೆಯುತ್ತಿರುವ ‘ಸ್ಕಿನ್ಸ್‌’ (SKINS) ವಿಭಾಗದ ಸ್ಪರ್ಧೆಗಳು ಪ್ರಮುಖ ಆಕರ್ಣೆಯಾಗಿವೆ. ನಾಕೌಟ್ ಮಾದರಿಯ ಈ ರೇಸ್‌ ವಿಭಾಗದಲ್ಲಿ ಈಜುಪಟುಗಳ ಸಾಮರ್ಥ್ಯದ ನೈಜಪ್ರದರ್ಶನ ನಡೆಯುತ್ತದೆ. ಎಲಿಮಿನೇಷನ್ ಸುತ್ತುಗಳು ಇರುವುದರಿಂದ ಸ್ಪರ್ಧಿಗಳ ಈಜು ಕೌಶಲಗಳಷ್ಟೇ ಅಲ್ಲ. ಅವರ ದೈಹಿಕ ಶಕ್ತಿ, ವೇಗ ಮತ್ತು ಮನೋದಾರ್ಢ್ಯಗಳು ಮುಖ್ಯವಾಗುತ್ತವೆ. ಒಲಿಂಪಿಯನ್ ಈಜುಪಟುಗಳು ಕೂಡ ಈ ಸವಾಲು ಎದುರಿಸುವ ರೀತಿ ಅನನ್ಯವಾಗಿದೆ. ನೋಡುಗರಿಗಂತೂ ರೋಚಕ ರಸದೌತಣವನ್ನು ಈ ‘ಸ್ಕಿನ್ಸ್‌’ ನೀಡುತ್ತದೆ.

ಒಟ್ಟು ₹ 15 ಲಕ್ಷಕ್ಕೂ ಹೆಚ್ಚಿನ ನಗದು ಪ್ರಶಸ್ತಿ ನೀಡಲಾಗುವುದು. ಪ್ರತಿ ಬಾರಿ ಹಲವು ವಿಭಾಗಗಳಲ್ಲಿ ಪುರಸ್ಕಾರ ನೀಡಲಾಗುತ್ತದೆ. ಈ ಸಾಲಿಗೆ ಈಗ 'ಅತ್ಯಮೂಲ್ಯ ಈಜುಗಾರ’ ಪ್ರಶಸ್ತಿ ಕೂಡ ಸೇರ್ಪಡೆಯಾಗಲಿದೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ ಒಬ್ಬರು ಸ್ಪರ್ಧಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ದಿವಂಗತ ಕೆ.ಎ. ನೆಟ್ಟಕಲ್ಲಪ್ಪ ಅವರು ಕ್ರೀಡಾಕ್ಷೇತ್ರಕ್ಕೆ ನೀಡಿರುವ ಹಲವು ಕೊಡುಗೆಗಳಿಂದ ಪ್ರೇರಣೆಗೊಂಡಿರುವ ಈಜು ಚಾಂಪಿಯನ್‌ಷಿಪ್ ಇದಾಗಿದೆ. ಈಜು ಕ್ರೀಡೆಯಲ್ಲಿ ಭವಿಷ್ಯದ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ತಾರೆಗಳನ್ನು ಬೆಳೆಸುವ ಮಹಾನ್ ಉದ್ದೇಶ ಈ ಕೂಟದ್ದಾಗಿದೆ. ವಿಶ್ವದರ್ಜೆಯ ಈ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳುವ ಸದಾವಕಾಶ ಈಜುಪ್ರೇಮಿಗಳಿಗೆ ಲಭಿಸಲಿದೆ.

ಭಾರತೀಯ ಈಜು ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಮೊನಾಲ್ ಚೋಕ್ಸಿ ಅವರು ಅಕ್ಟೋಬರ್ 31 ರಂದು ಸಂಜೆ 4:30 ಕ್ಕೆ NAC ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವೀಕ್ಷಕರು ಭಾರತದ 350 ಅತ್ಯುತ್ತಮ ಈಜುಗಾರರ ನಡುವಿನ ವಿಶ್ವ ದರ್ಜೆಯ ಸ್ಪರ್ಧೆ, ರೋಮಾಂಚಕ ಫಿನಿಶಿಂಗ್‌ಗಳು ಮತ್ತು ಕ್ರೀಡಾ ಶ್ರೇಷ್ಠತೆಯನ್ನು ಆಚರಿಸುವ ವಾರಾಂತ್ಯದ ವಾತಾವರಣವನ್ನು ಸವಿಯಬಹುದು.


ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://nac.org.in