ಕ್ರೀಡೆ

ಕನ್ನಡತಿ ಅಶ್ವಿನಿ-ತನಿಶಾ ಗುವಾಹಟಿ ಮಾಸ್ಟರ್ಸ್‌-100 ಬ್ಯಾಡ್ಮಿಂಟನ್ ಟೂರ್ನಿ ಡಬಲ್ಸ್ ಚಾಂಪಿಯನ್

ಗುವಾಹಟಿ: ಭಾರತದ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿ ಕನ್ನಡತಿ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೋ ಗುವಾಹಟಿ ಮಾಸ್ಟರ್ಸ್‌-100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಈ ಜೋಡಿ 2ನೇ ಸೂಪರ್-100 ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

ಭಾನುವಾರ ನಡೆದ ೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಅಶ್ವಿನಿ-ತನಿಶಾ ಜೋಡಿ 21-13, 21-19 ನೇರ ಗೇಮ್‌ಗಳಿಂದ ಚೀನಾ ತೈಪೆಯ ಸುಂಗ್ ಶುವೋ ಯುನ್ -ಯು ಚಿಯೆನ್ ಹುಯಿ ಜೋಡಿ ಎದುರು 40 ನಿಮಿಷ ಹೋರಾಟದಲ್ಲಿ ಸುಲಭ ಗೆಲುವು ದಾಖಲಿಸಿತು. ಇತ್ತೀಚೆಗೆ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್‌ಅಪ್ ಸ್ಥಾನ ಪಡೆದಿದ್ದ ಭಾರತೀಯ ಜೋಡಿ ಮೂರನೇ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಕಳೆದ ಜನವರಿಯಿಂದ ಜತೆಯಾಗಿ ಆಡಲಾರಂಭಿಸಿದ 34 ವರ್ಷದ ಅಶ್ವಿನಿ ಮತ್ತು 20 ವರ್ಷದ ತನಿಶಾ ಜೋಡಿ ಇದಕ್ಕೂ ಮುನ್ನ ಅಬುಧಾಬಿ ಮಾಸ್ಟರ್ಸ್‌-100 ಹಾಗೂ ನಾಂಟೆಸ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಒಲಿಸಿಕೊಂಡಿತ್ತು. 2012 ಹಾಗೂ 2016ರಲ್ಲಿ ಜ್ವಾಲಾಗುಟ್ಟಾ ಜತೆಯಾಗಿ ಲಂಡನ್ ಮತ್ತು ರಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಅಶ್ವಿನಿ ಬಿಡಬ್ಲ್ಯುಎ್ ವಿಶ್ವ ರ‌್ಯಾಂಕಿಂಗ್‌ನ ಮಹಿಳಾ ಡಬಲ್ಸ್ ವಿಭಾಗದಲ್ಲಿ 28ನೇ ಸ್ಥಾನದಲ್ಲಿದ್ದಾರೆ.