ಕ್ರೀಡೆ

2025 ರ IPLನಲ್ಲಿ ಅತಿ ಎತ್ತರದ ಸಿಕ್ಸ್ ಬಾರಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು ಇವರೇ; IPL

IPL | 2025 ರ 18ನೇ ಆವೃತ್ತಿಯ ಐಪಿಎಲ್​ನಲ್ಲಿ ಋತುವಿನ ಮೊದಲ ವಾರದಿಂದ ಇಲ್ಲಿಯವರೆಗೆ ಹಲವು ರೋಚಕ ಪಂದ್ಯಗಳು ನಡೆದಿವೆ. ಇಲ್ಲಿಯವರೆಗೆ ನಡೆದ ಪಂದ್ಯಗಳಲ್ಲಿ ಹೈದರಾಬಾದ್ ತಂಡಕ್ಕಾಗಿ ಕಣಕ್ಕಿಳಿದಿರುವ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರು ಅತಿ ಎತ್ತರದ ಸಿಕ್ಸ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೂ  ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್​ಗಳ ಹಿಂದೆ ಉಳಿದಿದ್ದಾರೆ.

2025 ರ ಐಪಿಎಲ್​ 18 ರ ಸೀಸನ್​ನ ಮೊದಲ ಐದು ಪಂದ್ಯಗಳಲ್ಲಿ ಒಟ್ಟಾರೆ ರನ್ ದರ 17% ರಷ್ಟು ಹೆಚ್ಚಾಗಿದೆ. ಈ ಋತುವಿನಲ್ಲಿ ಸಿಕ್ಸರ್‌ಗಳ ಸಂಖ್ಯೆ 37% ರಷ್ಟು ಹೆಚ್ಚಾಗಿದೆ ಹಾಗೂ ಬೌಂಡರಿಗಳ ಸಂಖ್ಯೆ 34% ಕ್ಕಿಂತ ಹೆಚ್ಚಾಗಿದೆ. ಈ ಋತುವಿನಲ್ಲಿ ಇಲ್ಲಿಯವರೆಗೆ 32 ಕ್ಕೂ ಹೆಚ್ಚು ಸಿಕ್ಸರ್‌ಗಳು ದಾಖಲಾಗಿವೆ.ಮಾರ್ಚ್ (23) ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ 105 ಮೀಟರ್ ದೂರ ಸಿಕ್ಸ್ ಬಾರಿಸಿ ಭಾರೀ ಸಂಚಲನ ಮೂಡಿಸಿದರು. ಐಪಿಎಲ್ 2025 ರಲ್ಲಿ ಇದು ಅತಿ ಉದ್ದದ ಸಿಕ್ಸ್ ಆಗಿದೆ. ಈ ಪಂದ್ಯದಲ್ಲಿ ಹೆಡ್ 31 ಎಸೆತಗಳಲ್ಲಿ 67 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳನ್ನು ಬಾರಿಸಿದರು.

ಅಂದಹಾಗೆ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಐಪಿಎಲ್ 2025 ರಲ್ಲಿ ಇದುವರೆಗಿನ ಅತಿ ಉದ್ದದ ಸಿಕ್ಸ್ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅವರು 98 ಮೀಟರ್ ಸಿಕ್ಸ್ ಬಾರಿಸಿದರು.

ಟಾಪ್ 5 ಬ್ಯಾಟ್ಸ್‌ಮನ್‌ಗಳು :

5. ನಿಕೋಲಸ್ ಪೂರನ್ (ಲಕ್ನೋ)- ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ - 96ಮೀ.

4. ನಿಕೋಲಸ್ ಪೂರನ್ (ಲಕ್ನೋ)- ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ- 97ಮೀ.

3. ಶೆರ್ಫೇನ್ ರುದರ್ಫೋರ್ಡ್ (ಗುಜರಾತ್​)- ಪಂಜಾಬ್ ಕಿಂಗ್ಸ್ ವಿರುದ್ಧ- 97ಮೀ

2. ಟ್ರಿಸ್ಟಾನ್ ಸ್ಟಬ್ಸ್ (ಡೆಲ್ಲಿ ಕ್ಯಾಪಿಟಲ್​)- ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ- 98ಮೀ.

1. ಟ್ರಾವಿಸ್ ಹೆಡ್ (ಹೈದರಾಬಾದ್​) - ರಾಜಸ್ಥಾನ್ ರಾಯಲ್ಸ್ ವಿರುದ್ಧ- 105ಮೀ.

ಪಟ್ಟಿಯಲ್ಲಿಲ್ಲ ಭಾರತೀಯರ ಹೆಸರು!

ಇಲ್ಲಿಯವರೆಗೆ ನಡೆದ ಐಪಿಎಲ್ ಪಂದ್ಯಗಳಲ್ಲಿ ಅನೇಕ ಭಾರತೀಯ ಬ್ಯಾಟ್ಸ್‌ಮನ್‌ಗಳು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ಆ ಪಟ್ಟಿಯಲ್ಲಿ ಯಾವುದೇ ಬ್ಯಾಟ್ಸ್‌ಮನ್ ಹೆಸರು ಸೇರ್ಪಡೆಯಾಗಿಲ್ಲ. ಅತಿ ಉದ್ದದ ಸಿಕ್ಸ್ ಬಾರಿಸಿದ ಪಟ್ಟಿಯಲ್ಲಿ ಭಾರತೀಯರ ಯಾವ ಬ್ಯಾಟ್ಸ್‌ಮನ್ ಹೆಸರು ಮೊದಲು ಬರುತ್ತದೆ ಎಂದು ನೋಡಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.