ನವದೆಹಲಿ: ಮೇ 27ರಿಂದ 31ರವರೆಗೆ ದಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ 59 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಮೂವರು ಅಥ್ಲೀಟ್ಗಳು ಸ್ಥಾನ ಪಡೆದಿದ್ದಾರೆ. ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಈ ಕೈಟಕ್ಕೆ ಗೈರಾಗಲಿದ್ದಾರೆ. ನೀರಜ್ ಮೇ 24ರಂದು ಬೆಂಗಳೂರಿನಲ್ಲಿ ಎನ್ಸಿ ಕ್ಲಾಸಿಕ್ನಲ್ಲಿ ಪಾಲ್ಗೊಳ್ಳಲಿರುವುದರಿಂದ ಅವರ ಗೈರು ನಿರೀಕ್ಷಿತವಾಗಿತ್ತು. ಅಲ್ಲದೆ ನೀರಜ್ 2017ರ ನಂತರದಲ್ಲಿ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿಲ್ಲ.
ಕೊಚ್ಚಿಯಲ್ಲಿ ನಡೆದ ಫೆಡರೇಷನ್ ಕಪ್ನಲ್ಲಿ ಮಿಂಚಿದ ಬಹುತೇಕ ಅಥ್ಲೀಟ್ಗಳಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಕರ್ನಾಟಕದ ಮಣಿಕಂಠ ಹೋಬಳಿದಾರ್ (4/100 ಮೀ. ರಿಲೇ), ಸ್ನೇಹಾ ಎಸ್ಎಸ್, ದಾನೇಶ್ವರಿ ಎಟಿ, ವಿ. ಸುಧೀಾ (4/100 ಮೀ. ರಿಲೇ) ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಅವಿನಾಶ್ ಸಾಬಲೆ (3 ಸಾವಿರ ಮೀ. ಸ್ಟೀಪಲ್ಚೇಸ್), ಪಾರುಲ್ ಚೌಧರಿ (ಸ್ಟೀಪಲ್ಚೇಸ್), ಗುಲ್ವೀರ್ ಸಿಂಗ್ (5, 10 ಸಾವಿರ ಮೀ) ಕೂಟದಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ಕ್ರೀಡಾಪಟುಗಳು. 200 ಮೀ. ಓಟದಲ್ಲಿ ನೂತನ ರಾಷ್ಟ್ರೀಯ ದಾಖಲೆ ಬರೆದ ಅನಿಮೇಶ್ ಕುಜುರ್, ಟ್ರಿಪಲ್ ಹೈಜಂಪರ್ ಪ್ರವಿಣ್ ಚಿತ್ರವೇಲ್ ಕೂಡ ತಂಡದಲ್ಲಿದ್ದಾರೆ.
ಮಹಿಳಾ ಜಾವೆಲಿನ್ ಥ್ರೋ ತಾರೆ ಅನ್ನು ರಾಣಿ ಇತ್ತೀಚೆಗೆ 60 ಮೀಟರ್ ಗಡಿ ದಾಟಲು ವಿಫಲರಾಗುತ್ತಿರುವ ನಡುವೆಯೂ ತಂಡದಲ್ಲಿ ಸ್ಥಾನ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. 32 ವರ್ಷದ ಅನ್ನು ರಾಣಿ 2024ರ ಮೇನಲ್ಲಿ ಕೊನೆಯದಾಗಿ 60 ಮೀ. ಗಡಿ ದಾಟಿದ್ದರು. ಬ್ಯಾಂಕಾಕ್ನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಭಾರತ 6 ಚಿನ್ನ, 12 ಬೆಳ್ಳಿ, 9 ಕಂಚಿನ ಸಹಿತ 27 ಪದಕ ಗೆದ್ದುಕೊಂಡಿತ್ತು.