ಕ್ರೀಡೆ

ಸೌತ್​ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ಭಾರತ ತಂಡ ಪ್ರಕಟ: ಕನ್ನಡಿಗ ಪ್ರಸಿದ್ಧ್​ ಕೃಷ್ಣ ಔಟ್​ | Indian Squad

ನವದೆಹಲಿ: ನ.14ರಂದು ಸೌತ್​ ಆಫ್ರಿಕಾ ವಿರುದ್ಧ ಆಂರಭವಾಗುವ ಎರಡು ಟೆಸ್ಟ್​ಗಳ ಸರಣಿಗೆ ಇದೀಗ(ನ.5) 15 ಆಟಗಾರರು ಇರುವ ಭಾರತ ತಂಡವನ್ನು( Indian Squad) ಭಾರತೀಯ ಕ್ರಿಕೆಟ್​​ ನಿಯಂತ್ರಣ ಮಂಡಳಿ(ಬಿಸಿಸಿಐ) ಬುಧವಾರ ಪ್ರಕಟಿಸಿದೆ.

ಸರಣಿಯ ಮೊದಲ ಪಂದ್ಯ ನವೆಂಬರ್ 14 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದ್ದು, ಗುವಾಹಟಿ ನವೆಂಬರ್ 22-26 ರವರೆಗೆ ಎರಡನೇ ಪಂದ್ಯವನ್ನು ಆಯೋಜಿಸಲಿದೆ. ಉಪನಾಯಕ ರಿಷಭ್ ಪಂತ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ಬಂಗಾಳದ ವೇಗಿ ಆಕಾಶ್ ದೀಪ್ ಅವರನ್ನು ಟೆಸ್ಟ್ ತಂಡಕ್ಕೆ ಕರೆಸಿಕೊಳ್ಳಲಾಗಿದೆ.

ಈ ವರ್ಷದ ಆರಂಭದಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪಾದದ ಮೂಳೆ ಮುರಿತಕ್ಕೊಳಗಾಗಿದ್ದ ಪಂತ್, ಕಳೆದ ವಾರ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಎ ತಂಡವನ್ನು ಅದ್ಭುತ ಗೆಲುವಿನತ್ತ ಮುನ್ನಡೆಸುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು.

ಭಾರತ ತಂಡ ಹೀಗಿದೆ..

ಶುಭಮನ್​ ಗಿಲ್​(ಕ್ಯಾಪ್ಟನ್​), ರಿಷಬ್ ಪಂತ್(ಉಪ-ನಾಯಕ), ಯಶಸ್ವಿ ಜೈಸ್ವಾಲ್​, ಕೆ.ಎಲ್​. ರಾಹುಲ್​, ಸಾಯಿ ಸುದರ್ಶನ್​, ದೇವದತ್ತ ಪಡಿಕಲ್​, ಧ್ರುವ್​ ಜುರೆಲ್​, ರವೀಂದ್ರ ಜಡೇಜಾ, ವಾಷಿಂಗ್​ಟನ್​ ಸುಂದರ್​, ಜಸ್ಪ್ರೀತ್​ ಬುಮ್ರಾ, ಅಕ್ಷರ್​ ಪಟೇಲ್​, ನೀತಿಶ್​ ಕುಮಾರ್ ರೆಡ್ಡಿ, ಮೊಹ್ಮದ್​ ಸಿರಾಜ್​​, ಕುಲದೀಪ್​ ಯಾದವ್​ ಮತ್ತು ಅಕ್ಷರ್​ ದೀಪ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕನ್ನಡಿಗ ಪ್ರಸಿದ್ಧ ಕೃಷ್ಣ ಔಟ್​

ಕಳೆದ ಟೆಸ್ಟ್​ ಸರಣಿಯಲ್ಲಿ ಭಾಗವಾಗಿದ್ದ ಇಬ್ಬರು ಆಟಗಾರರನ್ನು ಈ ಬಾರಿ ತಂಡದಿಂದ ಕೈ ಬಿಡಲಾಗಿದೆ. ಹೌದು, ವೇಗದ ಬೌಲರ್​ ಕನ್ನಡಿಗ ಪ್ರಸಿದ್ಧ್​ ಕೃಷ್ಣ ಮತ್ತು ಬ್ಯಾಟ್ಸ್​ಮನ್​, ವಿಕಿ ಜಗದೀಶನ್​ ಅವರನ್ನು ಕೈ ಬಿಡಲಾಗಿದೆ. ಕಳೆದ ವೆಸ್ಟ್ ಇಂಡೀಸ್​​ ಪಂದ್ಯದಲ್ಲಿ ಇಬ್ಬರಿಗೂ ಒಂದೇ ಒಂದು ಪಂದ್ಯದಲ್ಲಿ ಕೂಡ ಆಡಿರಲಿಲ್ಲ.(ಏಜೆನ್ಸೀಸ್​)