ಕ್ರೀಡೆ

PHOTO: ಟೀಮ್ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

ಮುಂಬೈ: ಟೀಮ್ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ದೀರ್ಘಕಾಲದ ಗೆಳತಿ ಮಿತ್ತಲಿ ಪಾರುಲ್ಕರ್ ಜತೆಗೆ ಸೋಮವಾರ ನಿಶ್ಚಿತಾರ್ಥ ಮಾಡಿಕೊಂಡರು. ಬಾಂದ್ರಾ ಕುರ್ಲಾದಲ್ಲಿ ನಡೆದ ಸಮಾರಂಭದಲ್ಲಿ ಟಿ20 ನಾಯಕ ರೋಹಿತ್ ಶರ್ಮ ಸಹಿತ ಸುಮಾರು 75 ಅತಿಥಿಗಳು ಪಾಲ್ಗೊಂಡಿದ್ದರು.

ಟಿ20 ವಿಶ್ವಕಪ್‌ನಲ್ಲಿ ಆಡಿದ ಭಾರತ ತಂಡದ ಭಾಗವಾಗಿದ್ದ 30 ವರ್ಷದ ಶಾರ್ದೂಲ್‌ಗೆ ಬಳಿಕ ಕಿವೀಸ್ ವಿರುದ್ಧದ ತವರಿನ ಟಿ20 ಮತ್ತು ಟೆಸ್ಟ್ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಕಾರ್ಯದೊತ್ತಡ ತಗ್ಗಿಸುವ ದೃಷ್ಟಿಯಿಂದ ರೆಸ್ಟ್ ನೀಡಲಾಗಿತ್ತು.

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಶಾರ್ದೂಲ್ ವಿವಾಹ ನಡೆಯಲಿದೆ ಎನ್ನಲಾಗಿದೆ. ಶಾರ್ದೂಲ್ ಭಾರತ ಪರ ಇದುವರೆಗೆ 4 ಟೆಸ್ಟ್, 15 ಏಕದಿನ ಮತ್ತು 24 ಟಿ20 ಪಂದ್ಯ ಆಡಿದ್ದಾರೆ.