ಕ್ರೀಡೆ

ಕನ್ನಡಿಗ ಕೆಎಲ್ ರಾಹುಲ್ ಆಟಕ್ಕೆ ಕ್ರಿಕೆಟ್ ದಿಗ್ಗಜರ ಮೆಚ್ಚುಗೆ: ಸಂಕಟ್ ಮೋಚನ್ ಎಂದ ಪಠಾಣ್

ಸೆಂಚುರಿಯನ್: ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ ಕಂಬ್ಯಾಕ್ ಮಾಡಿದ ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಭರ್ಜರಿ ಾರ್ಮ್ ಮುಂದುವರಿಸಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯೊಂದಿಗೆ ಕಣಕ್ಕಿಳಿದ ಕೆಎಲ್ ರಾಹುಲ್ (101 ರನ್, 137 ಎಸೆತ, 14 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ಮೂಲಕ ಸಿಡಿಸಿದ ಅಮೋಘ ಶತಕದ ನೆರವಿನಿಂದ ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು ಗೌರವಯುತ ಮೊತ್ತ ದಾಖಲಿಸಿತು. ಆದರೆ, ವೃತ್ತಿಜೀವನದ ಅಂತಿಮ ಟೆಸ್ಟ್ ಸರಣಿಯಲ್ಲಿ ಹಂಗಾಮಿ ನಾಯಕ ಡೀನ್ ಎಲ್ಗರ್ (140* ರನ್, 211 ಎಸೆತ, 23 ಬೌಂಡರಿ) ಶತಕದ ತಿರುಗೇಟು ನೀಡುವುದರೊಂದಿಗೆ ಹರಿಣಗಳಿಗೆ ಮೊದಲ ಇನಿಂಗ್ಸ್‌ನಲ್ಲಿ ಅಮೂಲ್ಯ ಮುನ್ನಡೆ ಒದಗಿಸಿದ್ದಾರೆ.


ರಾಹುಲ್ ಆಟಕ್ಕೆ ದಿಗ್ಗಜರ ಪ್ರಶಂಸೆ
ಅತ್ಯಂತ ಸವಾಲಿನಿಂದ ಕೂಡಿದ್ದ ಪಿಚ್‌ನಲ್ಲಿ ಭಾರತದ ಪರ ಉಪಯುಕ್ತ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಇನಿಂಗ್ಸ್‌ಗೆ ದಿಗ್ಗಜ ಆಟಗಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘50 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ನೋಡುತ್ತಿದ್ದೇನೆ. ಭಾರತ ಟೆಸ್ಟ್ ಇತಿಹಾಸದಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆಯವಂಥ ಇನಿಂಗ್ಸ್ ರಾಹುಲ್ ಅವರದಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಸವಾಲಿನ ಪಿಚ್‌ನಲ್ಲಿ ರಾಹುಲ್ ಅದ್ಭುತ ಇನಿಂಗ್ಸ್ ಆಡಿದ್ದಾರೆ. 95 ರನ್‌ಗಳಿಸಿದಾಗ ಬಾರಿಸಿದ ಸಿಕ್ಸರ್ ಸಾಮಾನ್ಯವಾಗಿ ಟಿ20 ಕ್ರಿಕೆಟ್‌ನಲ್ಲಿ ನೋಡಲಾಗುತ್ತದೆ’ ಎಂದು ವೀಕ್ಷಕ ವಿವರಣೆಕಾರ ಸುನೀಲ್ ಗವಾಸ್ಕರ್ ಹೇಳಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್, ರಾಹುಲ್‌ರ ಪಾದಗಳ ಚಲನೆಯನ್ನು ಪ್ರಶಂಸಿಸಿದ್ದರೆ, ಮಾಜಿ ಆಲ್ರೌಂಡರ್ ರ್ಇಾನ್ ಪಠಾಣ್ ‘ಸಂಕಟ್ ಮೋಚನ್’ ಎಂದು ರಾಹುಲ್‌ರನ್ನು ಬಣ್ಣಿಸಿದ್ದಾರೆ.