ಅಹಮದಾಬಾದ್: ಆತಿಥೇಯ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಕಾಮನ್ವೆಲ್ತ್ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿವೆ. ಭಾರತದ ಮಹಿಳಾ ತಂಡ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉಗಾಂಡ ವಿರುದ್ಧ ಸೆಣಸಲಿದ್ದರೆ, ಪುರುಷರ ತಂಡ ಶ್ರೀಲಂಕಾ ಅಥವಾ ಕೀನ್ಯಾ ವಿರುದ್ಧ ಆಡಲಿದೆ.
ವೀರ್ ಸಾವರ್ಕರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಮಹಿಳಾ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 39-14 ಅಂಕಗಳಿಂದ ಗೆಲುವು ಸಾಧಿಸಿತು. ಭಾರತ ಮೊದಲಾರ್ಧದಲ್ಲಿ 24&7ರಿಂದ ಮುನ್ನಡೆ ಸಾಧಿಸಿತ್ತು. ಸಾಕ್ಷಿ ಗರಿಷ್ಠ 11 ಅಂಕ ಗಳಿಸಿ ಮಿಂಚಿದರೆ, ನಾಯಕಿ ನಿಧಿ ಶರ್ಮ 12 ರೈಡ್ಗಳಿಂದ 10 ಅಂಕ ಗಳಿಸಿದರು. ರಿತು 4 ಅಂಕ ಗಳಿಸಿ ಡಿೆಂಡಿಂಗ್ನಲ್ಲಿ ಗಮನಸೆಳೆದರು. ಸುಮನ್ 3 ಅಂಕ ಗಳಿಸಿದರು. ಇನ್ನೊಂದು ಸೆಮಿೈನಲ್ನಲ್ಲಿ ಉಗಾಂಡ ತಂಡ 23-21ರಿಂದ ಕೀನ್ಯಾ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಭಾರತ ಲೀಗ್ ಹಂತದಲ್ಲಿ ಉಗಾಂಡ ವಿರುದ್ಧ 41-18 ಅಂಕಗಳಿಂದ ಗೆದ್ದಿತ್ತು.
ಪುರುಷರ ವಿಭಾಗದ ಮೊದಲ ಸೆಮಿೈನಲ್ ಪಂದ್ಯದಲ್ಲಿ ಸುರ್ಜೀತ್ ಸಿಂಗ್ ಸಾರಥ್ಯದ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 56-27 ಅಂಕಗಳಿಂದ ಏಕಪಕ್ಷೀಯ ಗೆಲುವು ಸಾಧಿಸಿತು.
ಶನಿವಾರ ಫೈನಲ್
ಮಹಿಳಾ ವಿಭಾಗ
ಭಾರತ-ಉಗಾಂಡ
ಆರಂಭ: ರಾತ್ರಿ 7.30
ಪುರುಷರ ವಿಭಾಗ
ಭಾರತ-ಲಂಕಾ/ಕೀನ್ಯಾ
ಆರಂಭ: ರಾತ್ರಿ 9.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್