ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್: ಇತಿಹಾಸ ಬರೆದ ಮನು ಭಾಕರ್! ಭಾರತಕ್ಕೆ ​ಮತ್ತೊಂದು ಪದಕ

ಪ್ರಸಕ್ತ ಪ್ಯಾರಿಸ್​ನಲ್ಲಿ ನಡೆಯುತ್ತಿರುವ 4ನೇ ದಿನದ ಒಲಿಂಪಿಕ್ ಗೇಮ್ಸ್ 2024ರಲ್ಲಿ ಇಂದು ನಡೆದ 10 ಮೀಟರ್ ಏರ್ ಪಿಸ್ತೂಲ್ ಡಬಲ್ಸ್​ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಾಕರ್​ ಮತ್ತು ಸರಬ್ಜೋತ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.

ಇಂದು ನಡೆದ 10 ಮಿಟರ್ ಏರ್​ ಪಿಸ್ತೂಲ್ ಶೂಟಿಂಗ್​ ಡಬಲ್ಸ್​ ಸ್ಪರ್ಧೆಯಲ್ಲಿ ಸೌತ್​ ಕೊರಿಯಾ ವಿರುದ್ಧ ಗೆದ್ದು ಬೀಗಿದ ಮನು ಭಾಕರ್​ ಮತ್ತು ಸರಬ್ಜೋತ್ ಸಿಂಗ್ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮನು, ಶೂಟಿಂಗ್​​​ನಲ್ಲಿ ಕಂಚಿನ ಮೆಡಲ್ ಪಡೆದಿದ್ದರು. ಇದೀಗ ಸತತವಾಗಿ ಎರಡನೇ ಬಾರಿಗೆ ಪದಕ ಗೆಲ್ಲುವ ಮುಖೇನ ಭಾರತೀಯರನ್ನು ಹೆಮ್ಮೆಪಡಿಸಿದ್ದಾರೆ.

ಭಾರತದ ಇತಿಹಾಸದಲ್ಲಿ ಒಂದೇ ಒಲಿಂಪಿಕ್ಸ್ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಮಹಿಳೆ ಅವರಾಗಿದ್ದಾರೆ.