Sunil Gavaskar: ಟೀಮ್ ಇಂಡಿಯಾ ಕುರಿತಂತೆ ಆಗಾಗ್ಗೆ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಮುಕ್ತವಾಗಿ ಹಾಗೂ ನೇರವಾಗಿ ಹೊರಹಾಕುವ ಭಾರತದ ದಿಗ್ಗಜ, ಮಾಜಿ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಇದೀಗ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರಿತ್ ಬುಮ್ರಾ ತಂಡದಲ್ಲಿ ಇಲ್ಲದೇ ಹೋದರೂ ಟೀಮ್ ಇಂಡಿಯಾ ಗೆಲುವು ಸಾಧಿಸಬಲ್ಲದು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಭಾರತ 2025ರ ಚಾಂಪಿಯನ್ಸ್ ಟ್ರೋಫಿಯನ್ನು ವಶಪಡಿಸಿಕೊಂಡಿತು. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಸೋಲು ಅನುಭವಿಸಿತು. ಈ ಸರಣಿಯಲ್ಲಿ ತಂಡ ಬುಮ್ರಾ ಮೇಲೆ ಸಂಪೂರ್ಣವಾಗಿ ಆವಲಂಬಿತವಾಗಿತ್ತು. ಇದರಿಂದಲೇ ಒಂದು ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಲು ಟೀಮ್ ಇಂಡಿಯಾ ಪರದಾಡಿತು. ಈ ಮಧ್ಯೆ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿಗೆ ತಯಾರಾಗಲು ಬಹಳ ಕಡಿಮೆ ಸಮಯವಿತ್ತು. ಆಸೀಸ್ ನಂತರ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯವನ್ನಾಡಿದ ರೋಹಿತ್ ಶರ್ಮ ಪಡೆ, 3-0 ಅಂತರದಲ್ಲಿ ಸರಣಿ ಗೆದ್ದಿದ್ದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ವಿಶ್ವಾಸವನ್ನು ನೀಡಿತು ಎಂದರು.
ಜಸ್ಪ್ರಿತ್ ಬುಮ್ರಾ ಮೇಲೆ ವಿಪರೀತ ಅವಲಂಬಿತವಾಗಿದ್ದ ಟೀಮ್ ಇಂಡಿಯಾ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರಿಲ್ಲದೆ ಗೆಲುವನ್ನು ಸಾಧಿಸಿತು. ಇನ್ನು ಈ ಹಿಂದೆ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇಲ್ಲದೆಯೇ ಭಾರತ ಹಲವಾರು ಪಂದ್ಯಗಳನ್ನು ಗೆದ್ದಿದೆ. ಭಾರತಕ್ಕೆ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯವಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರಿತ್ ಬುಮ್ರಾ ಇಲ್ಲದೆ ತಂಡ ಗೆಲ್ಲಬಹುದು. ಆದರೆ, ಈ ಮೂವರು ತಂಡಲ್ಲಿದ್ದರೆ ಭಾರತ ಮತ್ತಷ್ಟು ಬಲಿಷ್ಠವಾಗಿ ಕಾಣಿಸುತ್ತದೆ ಎಂದು ಹೇಳಿದರು,(ಏಜೆನ್ಸೀಸ್).