ನ್ಯೂಯಾರ್ಕ್: ಬೌಲಿಂಗ್ ವಿಭಾಗದಲ್ಲಿ ತೋರಿದ ಪ್ರಚಂಡ ನಿರ್ವಹಣೆಯಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಸೂಪರ್-8 ಹಂತಕ್ಕೆ ಸನಿಹವಾಗಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆಯಲಿರುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು ಎದುರಿಸಲಿದ್ದು, ಹ್ಯಾಟ್ರಿಕ್ ಗೆಲುವಿನೊಂದಿಗೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ತವಕ ರೋಹಿತ್ ಶರ್ಮ ಬಳಗದ್ದಾಗಿದೆ. ಭಾರತ ಮತ್ತು ಅಮೆರಿಕ ತಂಡಗಳು ಟಿ20 ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿ ಆಗಲಿವೆ.
ಸೂಪರ್-8 ದಾರಿ: ಟೀಮ್ ಇಂಡಿಯಾ ಹಾಗೂ ಅಮೆರಿಕ ತಂಡಗಳೂ ಎ ಗುಂಪಿನಿಂದ ಸೂಪರ್-8 ಹಂತಕ್ಕೇರುವ ಸದ್ಯದ ೇವರಿಟ್ ತಂಡಗಳೆನಿಸಿವೆ. 2 ಗೆಲುವಿನ ಜತೆಗೆ 4 ಅಂಕ ಹಾಗೂ ರನ್‌ರೇಟ್‌ನಲ್ಲೂ (+1.455) ಮೇಲುಗೈ ಸಾಧಿಸಿರುವ ಭಾರತ ಗುಂಪಿನ ಅಗ್ರಸ್ಥಾನದಲ್ಲಿದೆ. ಅಮೆರಿಕ ವಿರುದ್ಧ ಅಥವಾ ಕೊನೇ ಲೀಗ್ ಪಂದ್ಯದಲ್ಲಿ ಕೆನಡಾ ಎದುರು ಗೆಲುವು ದಾಖಲಿಸಿದರೂ ಸೂಪರ್-8ಗೆ ಅರ್ಹತೆ ಪಡೆಯಲಿದೆ. ಇನ್ನು ಅಮೆರಿಕ ಸಹ ಇಷ್ಟೇ ಪಂದ್ಯಗಳಲ್ಲಿ 4 ಅಂಕ ಪಡೆದು ಉತ್ತಮ (+0.626) ರನ್‌ರೇಟ್‌ನೊಂದಿಗೆ 2ನೇ ಸ್ಥಾನದಲ್ಲಿದೆ. ತನ್ನ ಕೊನೇ 2 ಲೀಗ್‌ಗಳಲ್ಲಿ ಭಾರತ ಅಥವಾ ಐರ್ಲೆಂಡ್ ಪೈಕಿ 1ರಲ್ಲಿ ಗೆಲುವು ದಾಖಲಿಸಿದರೂ ಮುಂದಿನ ಹಂತಕ್ಕೇರಲಿದೆ. 2ರಲ್ಲಿಯೂ ಸೋತರೆ ಇತರ ಪಂದ್ಯಗಳ ಲಿತಾಂಶದ ಮೇಲೆ ಅರ್ಹತೆ ನಿರ್ಧರಿತವಾಗಲಿದೆ.
ಆರಂಭ: ರಾತ್ರಿ 8
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಇಂದಿನ ಇತರ ಪಂದ್ಯಗಳು
ಶ್ರೀಲಂಕಾ-ನೇಪಾಳ
ಗುಂಪು: ಡಿ
ಎಲ್ಲಿ: ಲೌಡೆರ್‌ಹಿಲ್
ಆರಂಭ: ಬೆಳಗ್ಗೆ 5
ಆಸ್ಟ್ರೇಲಿಯಾ-ನಮೀಬಿಯಾ
ಗುಂಪು: ಬಿ
ಎಲ್ಲಿ: ನಾರ್ತ್‌ಸೌಂಡ್
ಆರಂಭ: ಬೆಳಗ್ಗೆ 6
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್