ಕ್ರೀಡೆ

ICCWC 2023, IND VS NZ: 47ಕ್ಕೆ ರೋಹಿತ್ ಔಟ್​; ಅರ್ಧ ಶತಕ ಸಿಡಿಸಿದ ಗಿಲ್​ಗೆ ​ಕೊಹ್ಲಿ ಸಾಥ್​

ಮುಂಬೈ: ಇಂದು (ನವೆಂಬರ್ 15) ಏಕದಿನ ವಿಶ್ವಕಪ್​ 2023ರ ಸೆಮಿಫೈನಲ್​ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಭಾರತ ಮತ್ತು ನ್ಯೂಜಿಲೆಂಡ್​ ಫೈನಲ್​ ಪ್ರವೇಶಿಸಲು ಭಾರೀ ಸೆಣಸಾಟಕ್ಕೆ ಮುಂದಾಗಿದೆ. ಮೊದಲು ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಮೊದಲು ಬೌಲಿಂಗ್ ಮಾಡಲು ಬಿಟ್ಟು, ತಾವು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡರು.

ಬ್ಯಾಟಿಂಗ್​ ಆರಂಭಿಸಿದ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ ಭರ್ಜರಿ ಓಪನಿಂಗ್​​ ನೀಡಿದರು. ಸಿಕ್ಸರ್​ಗಳ ಅಬ್ಬರವನ್ನು ಶುರುಮಾಡಿದ ರೋಹಿತ್​, 47 ರನ್​ಗೆ ಪೆವಿಲಿಯನ್​ನತ್ತ ಸಾಗಿದರು. ಇದೀಗ ವಿರಾಟ್​ ಕೊಹ್ಲಿ ಅಖಾಡಕ್ಕೆ ಇಳಿದಿದ್ದು, ಗಿಲ್​ಗೆ ಜತೆಯಾಗಿದ್ದಾರೆ. ಸಿಕ್ಸ್, ಫೋರ್​ಗಳನ್ನು ಬಾರಿಸುತ್ತಿರುವ ಶುಭಮನ್​ 49* ಎಸೆತಕ್ಕೆ 63* ರನ್​ಗಳನ್ನು ಗಳಿಸಿ ತಮ್ಮ ಆರ್ಭಟವನ್ನು ಮುಂದುವರಿಸಿದ್ದಾರೆ.

ಶುಭಮನ್​ಗೆ ಸಾಥ್​ ನೀಡುವುದರ ಜತೆಗೆ ತಮ್ಮ 50ನೇ ಶತಕ ಸಿಡಿಸಲಿದ್ದಾರಾ ವಿರಾಟ್​ ಎಂಬುದನ್ನು ಕೂಡ ಕಾದು ನೋಡಬೇಕಿದೆ. ಸದ್ಯ ಟೀಮ್​ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಮತ್ತು ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.