ಕ್ರೀಡೆ

ಪೃಥ್ವಿ ಷಾಗೆ ಗಾಯ, 2ನೇ ಟೆಸ್ಟ್​ಗೆ ಡೌಟ್

ಕ್ರೖೆಸ್ಟ್​ಚರ್ಚ್: ಯುವ ಆರಂಭಿಕ ಆಟಗಾರ ಪೃಥ್ವಿ ಷಾ ಗುರುವಾರ ತಂಡದ ಅಭ್ಯಾಸ ಅವಧಿಯ ವೇಳೆ ಎಡಗಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಅಭ್ಯಾಸದ ವೇಳೆ ಅವರ ಎಡಗಾಲು ತಾನಾಗಿಯೇ ಊದಿಕೊಂಡಿದ್ದು ಗಮನಕ್ಕೆ ಬಂದಿದೆ. ಇದರಿಂದಾಗಿ 2ನೇ ಟೆಸ್ಟ್​ಗೆ ಟೀಮ್ ಮ್ಯಾನೇಜ್​ವೆುಂಟ್​ನ ಆತಂಕ ಇನ್ನಷ್ಟು ಹೆಚ್ಚಾಗಿದೆ.

ಗುರುವಾರವೇ ಪೃಥ್ವಿ ಷಾರ ರಕ್ತ ಪರೀಕ್ಷೆ ನಡೆಸಲಾಗಿದ್ದು, ಕಾಲು ಊದಿಕೊಳ್ಳಲು ಕಾರಣವೇನು ಎನ್ನುವುದನ್ನು ತಿಳಿಯಲು ಪ್ರಯತ್ನಿಸಲಾಗಿದೆ. ವೈದ್ಯಕೀಯ ವರದಿಯ ಆಧಾರದ ಮೇಲೆ ಶುಕ್ರವಾರ ತಂಡದ ಅಭ್ಯಾಸ ಅವಧಿ ಹಾಗೂ ಶನಿವಾರ ಕ್ರೖೆಸ್ಟ್ ಚರ್ಚ್​ನಲ್ಲಿ ಆರಂಭವಾಗಲಿರುವ 2ನೇ ಟೆಸ್ಟ್​ಗೆ ಲಭ್ಯರಿದ್ದಾರೆಯೇ ಎನ್ನುವುದನ್ನು ತೀರ್ವನಿಸಲಾಗುತ್ತದೆ. ಬ್ಯಾಟಿಂಗ್ ಮಾಡುವ ವೇಳೆ ಅವರಿಗೆ ಸಮಸ್ಯೆ ಎದುರಾಗುವುದು ಕಂಡುಬಂದಲ್ಲಿ, ಆಡುವ ಬಳಗಕ್ಕೆ ಆಯ್ಕೆಯಾಗುವುದು ಅನುಮಾನವಾಗಿದೆ.

ಶುಭಮಾನ್ ಗಿಲ್ ಗುರುವಾರ ಉತ್ತಮ ಅಭ್ಯಾಸದಲ್ಲಿ ಭಾಗಿಯಾಗಿದ್ದು, ಪೃಥ್ವಿ ಷಾ ಫಿಟ್ ಆಗದೇ ಇದ್ದಲ್ಲಿ ಮಯಾಂಕ್ ಅಗರ್ವಾಲ್​ರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ಅಭ್ಯಾಸದ ಸಮಯದಲ್ಲೂ ಮುಖ್ಯ ಕೋಚ್ ರವಿಶಾಸ್ತ್ರಿ ಶುಭಮಾನ್ ಗಿಲ್​ರ ಆಟದತ್ತ ಹೆಚ್ಚಿನ ಗಮನ ನೀಡಿದ್ದರು. ಒಂದು ಹಂತದಲ್ಲಿ ಗಿಲ್​ರ

ಬಳಿ ತೆರಳಿದ ರವಿಶಾಸ್ತ್ರಿ ಅವರ ಫುಟ್​ವರ್ಕ್ ಕುರಿತಾಗಿ ಕೆಲ ತಾಂತ್ರಿಕ ಸಲಹೆಗಳನ್ನು ನೀಡಿದರು. ಅಪ್ಪರ್ ಕಟ್ ಮಾಡುವ ಹಂತದಲ್ಲಿ ಗಿಲ್​ರ ಫುಟ್​ವರ್ಕ್ ಕಳವಳಕಾರಿಯಾಗಿರುವುದು ಕೋಚ್ ಗಮನಕ್ಕೆ ಬಂದಿತ್ತು.

ಟೀಮ್ ಮ್ಯಾನೇಜ್​ವೆುಂಟ್ ಪೃಥ್ವಿ ಷಾರ ಕಾಲು ಊದಿಕೊಂಡಿರುವುದು ಗಂಭೀರ ಸಮಸ್ಯೆ ಅಲ್ಲ ಎನ್ನುವ ವಿಶ್ವಾಸದಲ್ಲಿದೆ. ಅದಲ್ಲದೆ, ಕಡ್ಡಾಯವಾಗಿದ್ದ ವಾಮರ್್​ಅಪ್ ವೇಳೆಯಲ್ಲೂ ಪೃಥ್ವಿ ಹಾಜರಿರಲಿಲ್ಲ. ಈ ವೇಳೆ ಆಟಗಾರರು ರಗ್ಬಿ ಆಡುವ ಮೂಲಕ ಕಾಲ ಕಳೆದರು. -ಪಿಟಿಐ