ಕ್ರೀಡೆ

ಭಾರತ-ಐರ್ಲೆಂಡ್ ಟಿ20 ಸರಣಿ ಯಾವ ಚಾನಲ್​ನಲ್ಲಿ ನೇರಪ್ರಸಾರವಾಗಲಿದೆ ಗೊತ್ತೇ?

ಮುಂಬೈ: ವೇಗಿ ಜಸ್​ಪ್ರೀತ್ ​ಬುಮ್ರಾ ಸಾರಥ್ಯದ ಭಾರತದ ಯುವ ತಂಡ ಆಗಸ್ಟ್​ 18, 20 ಮತ್ತು 23ರಂದು ಡಬ್ಲಿನ್​ನ ಮಲಾಹೈಡ್​ಕ್ರಿಕೆಟ್​ಕ್ಲಬ್​ನಲ್ಲಿ ಆಡಲಿರುವ ಮೂರು ಟಿ20 ಪಂದ್ಯಗಳ ನೇರಪ್ರಸಾರದ ಹಕ್ಕುಗಳನ್ನು ವಯಾಕಾಮ್​18 ಪಡೆದುಕೊಂಡಿದೆ. ಸರಣಿಯ ಪಂದ್ಯಗಳು ಜಿಯೋಸಿನಿಮಾ ಮೂಲಕ ಡಿಜಿಟಲ್​ ವೇದಿಕೆಯಲ್ಲಿ ನೇರಪ್ರಸಾರ ಕಾಣಲಿದ್ದರೆ, ಟಿವಿಯಲ್ಲಿ ಸ್ಪೋರ್ಟ್ಸ್ 18 - 1, ಸ್ಪೋರ್ಟ್ಸ್ 18 - 1 ಎಚ್‌ಡಿ ಮತ್ತು ಸ್ಪೋರ್ಟ್ಸ್ 18 ಖೇಲ್‌ ಚಾನಲ್​ಗಳಲ್ಲಿ ನೇರಪ್ರಸಾರ ಕಾಣಲಿವೆ. ಪಂದ್ಯಗಳು ಸಂಜೆ 7.15ಕ್ಕೆ ಆರಂಭವಾಗಲಿವೆ.

ಪ್ರಸಕ್ತ ನಡೆಯುತ್ತಿರುವ ಭಾರತ ತಂಡದ 2023ರ ವೆಸ್ಟ್ ಇಂಡೀಸ್ ಪ್ರವಾಸ ಪಂದ್ಯಗಳೂ ಜಿಯೋಸಿನಿಮಾದಲ್ಲಿ ನೇರಪ್ರಸಾರವಾಗುತ್ತಿದ್ದು, ವೀಕ್ಷಕರ ಸಂಖ್ಯೆ, ವೀಕ್ಷಕರನ್ನು ಹಿಡಿದಿಡುವಲ್ಲಿ ಮತ್ತು ಏಕಕಾಲಿಕತೆಯಲ್ಲಿ ಟಿವಿಯನ್ನು ಮೀರಿಸಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯು ಜಿಯೋಸಿನಿಮಾದಲ್ಲಿ 2.2 ದಶಲಕ್ಷಕ್ಕಿಂತಲೂ ಹೆಚ್ಚಿನ ಏಕಕಾಲಿಕತೆಯನ್ನು ದಾಖಲಿಸಿತು. ಇದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕಿಂತ ಹೆಚ್ಚಾಗಿದೆ. ಕೆರಿಬಿಯನ್‌ನಲ್ಲಿ ನಡೆದ ಎಲ್ಲ ಮಾದರಿಯ ಕ್ರಿಕೆಟ್​ಸರಣಿಗಳ ಪಂದ್ಯಗಳನ್ನು 7 ಕೋಟಿಗೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ.

'ವೀಕ್ಷಕರು ತಮ್ಮ ನೆಚ್ಚಿನ ಕ್ರೀಡೆಗಳನ್ನು ವೀಕ್ಷಿಸಲು ಪ್ರವೇಶ ಮತ್ತು ವೈಯಕ್ತೀಕರಣದ ಅನುಕೂಲತೆಯನ್ನು ಅಳವಡಿಸಿಕೊಳ್ಳುವಲ್ಲಿ ನಿರಂತರ ಏರಿಕೆಯಿಂದ ಸ್ಫೂರ್ತಿ ಪಡೆದು ಬಹು-ಕ್ರೀಡಾ ಪ್ರತಿಪಾದನೆಯನ್ನು ನಿರ್ಮಿಸುವತ್ತ ನಮ್ಮ ಪ್ರಯತ್ನವು ಇನ್ನಷ್ಟು ದೃಢವಾಗಿದೆ. ಐರ್ಲೆಂಡ್‌ ಪ್ರವಾಸದೊಂದಿಗೆ ಭಾರತ ತಂಡದ ಅಂತಾರಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ಅತ್ಯುತ್ತಮ ನಿರ್ವಹಣೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇದಾಗಿದೆ. ಮೂರು ಪಂದ್ಯಗಳ ಟಿ20 ಸರಣಿಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬಹಳಷ್ಟು ಮಹತ್ವದ್ದಾಗಿದೆ. ಏಕೆಂದರೆ ಇದು ಭಾರತದ ಬೌಲಿಂಗ್ ತಾರೆ ಜಸ್​ಪ್ರೀತ್​ಬುಮ್ರಾ ಅವರ ಪುನರಾಗಮನಕ್ಕೆ ವೇದಿಕೆಯಾಗಲಿದೆ. ಜತೆಗೆ ಮುಂದಿನ ಪೀಳಿಗೆಯ ಭಾರತೀಯ ಕ್ರಿಕೆಟ್ ಪ್ರತಿಭೆಗಳ ಒಂದು ಇಣುಕುನೋಟವನ್ನು ನೀಡುತ್ತದೆ' ಎಂದು ವಯಾಕಾಮ್18 ಸ್ಪೋರ್ಟ್ಸ್​ನ ಕಾರ್ಯತಂತ್ರ, ಪಾಲುದಾರಿಕೆ ಮತ್ತು ಸ್ವಾಧೀನಗಳ ಮುಖ್ಯಸ್ಥ ಹರ್ಷ್ ಶ್ರೀವಾಸ್ತವ ಹೇಳಿದ್ದಾರೆ.

ನೇರಪ್ರಸಾರ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು, ಪಂಜಾಬಿ ಮತ್ತು ಭೋಜ್‌ಪುರಿಯಂಥ ಜನಪ್ರಿಯ ಭಾಷೆಗಳನ್ನು ಒಳಗೊಂಡಂತೆ ಬಹು ಭಾಷೆಗಳಲ್ಲಿ ಸರಣಿಯನ್ನು ಜಿಯೋಸಿನಿಮಾ ಪ್ರಸ್ತುತಪಡಿಸಲಿದೆ. ಜತೆಗೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಜನಪ್ರಿಯವಾದ ತನ್ನ, ಭವಿಷ್ಯ ಹೇಳಿ ಬಹುಮಾನ ಗೆಲ್ಲುವ 'ಜೀತೋ ಧನ್ ಧನಾ ಧನ್' ಸ್ಪರ್ಧೆಯನ್ನೂ ಮುಂದುವರಿಸುತ್ತದೆ. 2023ರ ಟಾಟಾ ಐಪಿಎಲ್​ಸಮಯದಲ್ಲಿ ಮೊದಲಿಗೆ 'ಜೀತೋ ಧನ್ ಧನಾ ಧನ್' ಸ್ಪರ್ಧೆಯನ್ನು ಪರಿಚಯಿಸಲಾಯಿತು. ಹತ್ತಾರು ಸಾವಿರ ಜನರು ಬಹುಮಾನಗಳನ್ನು ಗೆಲ್ಲುವ ಈ ಸ್ಪರ್ಧೆ ಭರ್ಜರಿ ಯಶಸ್ಸು ಕಂಡಿದೆ.