ಕ್ರೀಡೆ

video: ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಸೂಪರ್ ಓವರ್‌ನಲ್ಲಿ ತಂಡವನ್ನು ಗೆಲ್ಲಿಸಿದ ರಿಂಕು ಸಿಂಗ್

ಕಾನ್ಪುರ: ಟೀಮ್ ಇಂಡಿಯಾ ಯುವ ಎಡಗೈ ಬ್ಯಾಟರ್ ರಿಂಕು ಸಿಂಗ್ ಐಪಿಎಲ್ 16ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸತತ ಐದು ಸಿಕ್ಸರ್ ಸಿಡಿಸಿ ಏಕಾಂಗಿಯಾಗಿ ಕೋಲ್ಕತ ನೈಟ್ ರೈಡರ್ಸ್‌ಗೆ ಪಂದ್ಯ ಗೆಲ್ಲಿಸಿಕೊಟ್ಟ ಕ್ಷಣಗಳು ಕ್ರೀಡಾಭಿಮಾನಿಗಳ ಹೃದಯದಲ್ಲಿ ಇನ್ನೂ ತಾಜಾ ಎನಿಸಿರುವಾಗಲೆ, ಮತ್ತೊಮ್ಮೆ ಟಿ20 ಲೀಗ್‌ನ ಸೂಪರ್ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡದ ಜಯದ ರೂವಾರಿ ಎನಿಸಿದ್ದಾರೆ.

ಪ್ರತಿಯಾಗಿ ಚೇಸಿಂಗ್ ನಡೆಸಿದ ಕಾಶಿ ರುದ್ರಾಸ್ ತಂಡ 7 ವಿಕೆಟ್‌ಗೆ 181 ರನ್‌ಗಳಿಸಿತ್ತು. ಇತ್ತೀಚೆಗೆ ಐರ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ ರಿಂಕು ಸಿಂಗ್ ಪದಾರ್ಪಣೆ ಮಾಡಿದ್ದರು.

ಉತ್ತರ ಪ್ರದೇಶ ಪ್ರೀಮಿಯರ್ ಟಿ20 ಲೀಗ್‌ನಲ್ಲಿ ಮೀರತ್ ಮೇವರಿಕ್ಸ್ ಹಾಗೂ ಕಾಶಿ ರುದ್ರಾಸ್ ನಡುವಿನ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಗುರವಾರ ನಡೆದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಾಶಿ ರುದ್ರಾಸ್ ತಂಡ 1 ವಿಕೆಟ್‌ಗೆ 16 ರನ್ ಬಾರಿಸಿತು. ಪ್ರತಿಯಾಗಿ ಮೀರತ್ ಮೇವರಿಕ್ಸ್ ತಂಡ 4 ಎಸೆತಗಳಲ್ಲಿ 18 ರನ್‌ಬಾರಿಸಿತು. ಸೂಪರ್ ಓವರ್‌ನಲ್ಲಿ 17 ರನ್‌ಗಳಿಸುವ ಗುರಿ ಪಡೆದ ಮೀರತ್ ಮೇವರಿಕ್ಸ್ ಪರ ರಿಂಕು ಸಿಂಗ್ ಮೊದಲ ಎಸೆತದಲ್ಲಿ ರನ್‌ಗಳಿಸಲು ವಿಲರಾದರು.ನಂತರದ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿದ ರಿಂಕು ಸಿಂಗ್ ಫಿನಿಷರ್ ಎಂದು ತೋರಿಸಿಕೊಟ್ಟರು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ನಡೆಸಿದ ಮೀರತ್ ಮೇವರಿಕ್ಸ್ ತಂಡ 4 ವಿಕೆಟ್‌ಗೆ 181 ರನ್ ಪೇರಿಸಿತು.