ಕ್ರೀಡೆ

ಭಾರತ-ಶ್ರೀಲಂಕಾ ಟಿ-20: ಕೃನಾಲ್ ಪಾಂಡ್ಯಗೆ ಕೊರೊನಾ.. ಇಂದಿನ ಪಂದ್ಯ ಮುಂದೂಡಿಕೆ

theerthaswamy

ಕೊಲೊಂಬೊ: ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆಯಬೇಕಿದ್ದ ಭಾರತ-ಶ್ರೀಲಂಕಾ ನಡುವಿನ 2ನೇ ಟಿ-20 ಪಂದ್ಯವನ್ನು ಮುಂದೂಡಲಾಗಿದೆ.

ಭಾರತ ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯರ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಇಂದು ನಡೆಯಬೇಕಿದ ಟಿ-20 ಪಂದ್ಯವನ್ನು ಮುಂದೂಡಲಾಗಿದೆ.
ಎರಡು ತಂಡದ ಆಟಗಾರರು ಐಸೋಲೇಶನ್​​ಲ್ಲಿದ್ದು, ಕೃನಾಲ್ ಹತ್ತಿರ ಸಂಪರ್ಕ ಹೊಂದಿರುವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಅಲ್ಲದೇ ಬುಧವಾರ ಪಂದ್ಯ ನಡೆಯುವುದು ಅನುಮಾನವಾಗಿದೆ.

 ಭಾರತ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದ್ದು, ಟಿ-20ಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ.