ಕ್ರೀಡೆ

ಕಡೆಗೂ ಫಲಿಸಲಿಲ್ಲ ಜಡೇಜಾ ಹೋರಾಟ! ಆಂಗ್ಲರ ಎದುರು 3ನೇ ಟೆಸ್ಟ್​ ಸೋತ ಗಿಲ್ ಪಡೆ | IND vs ENG

IND vs ENG: ಲಾರ್ಡ್​ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​ನ ಐದನೇ ದಿನದಂದು ಸ್ಟೋಕ್ಸ್​ ಪಡೆ ನೀಡಿದ ಗುರಿ ತಲುಪವಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿತು.

ಐದನೇ ದಿನದಂದು ಇಂಗ್ಲೆಂಡ್​ ನೀಡಿದ್ದ 193 ರನ್​ ಗುರಿಯನ್ನು ಬೆನ್ನತ್ತುವಲ್ಲಿ ಎಡವಿದ ಟೀಮ್ ಇಂಡಿಯಾ ಬ್ಯಾಟರ್​ಗಳ ಪೈಕಿ ಕೊನೆಯವರೆಗೂ ನಿಂತು ಆಡಿದ್ದು ರವೀಂದ್ರ ಜಡೇಜಾ ಮಾತ್ರ. ಕ್ಯಾಪ್ಟನ್​ ಶುಭಮನ್ ಗಿಲ್​ (6), ಯಶಸ್ವಿ ಜೈಸ್ವಾಲ್​ (0), ಕರುಣ್ ನಾಯರ್​ (14), ರಿಷಭ್ ಪಂತ್​ (9), ವಾಷಿಂಗ್ಟನ್ ಸುಂದರ್​ (0) ಮತ್ತು ನಿತೀಶ್ ಕುಮಾರ್ ರೆಡ್ಡಿ (14) ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಸ್ಟಾರ್​ ಹಾಗೂ ಬಲಿಷ್ಠ ಬ್ಯಾಟಿಂಗ್ ಲೈನ್​ನಲ್ಲಿದ್ದವರೇ ಕ್ರೀಸ್​ಗೆ ಅಂಟಿ ನಿಲ್ಲಲು ಹೆಣಗಾಡಿದ್ದೇ ಟೀಮ್ ಇಂಡಿಯಾ ಸೋಲಿಗೆ ದೊಡ್ಡ ಕಾರಣವಾಯಿತು. ಅರ್ಧಶತಕ ಸಿಡಿಸಿದ್ದಲ್ಲದೇ ಪಂದ್ಯದ ಕೊನೆಯವರೆಗೂ ಅಜೇಯರಾಗಿ ಉಳಿದಿದ್ದ ಜಡೇಜಾಗೆ (61 ರನ್​) ಉತ್ತಮ ಸಾಥ್​ ಸಿಗಲಿಲ್ಲ. ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್​ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಗಿಲ್ ಪಡೆಗೆ ಸೋಲಿನ ರುಚಿ ದೊರಕಿದೆ.