ಕ್ರೀಡೆ

Champions Trophy| ನ್ಯೂಜಿಲೆಂಡ್​ನಿಂದ ಭಾರತಕ್ಕೆ ಎದುರಾಯ್ತು ದೊಡ್ಡ ಸವಾಲು; 37 ವರ್ಷಗಳ ಹಳೇ ಶಾಪವನ್ನು ಮುರಿಯುತ್ತಾ ಟೀಮ್ ಇಂಡಿಯಾ?

ದುಬೈ: ಭಾರೀ ಹೈಪ್​ನೊಂದಿಗೆ ಆರಂಭವಾದ ಚಾಂಪಿಯನ್ಸ್​ ಟ್ರೋಫಿ (Champions Trophy) ಫಿನಾಲೆ ಪಂದ್ಯವು ಭಾನುವಾರ (ಮಾರ್ಚ್ 09) ನಡೆಯಲಿದ್ದು, ಪ್ರಶಸ್ತಿಗಾಗಿ ನ್ಯೂಜಿಲೆಂಡ್ ಹಾಗೂ ಭಾರತ  ಸೆಣಸಾಡಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ತನ್ನ 37 ವರ್ಷಗಳ ಹಳೆಯ ಶಾಪವನ್ನು ಮುರಿಯುವ ನಿಟ್ಟಿನಲ್ಲಿ ಕಣಕ್ಕಿಳಿಯುತ್ತಿದೆ.

ಟೂರ್ನಿಯಲ್ಲಿ ಆಡಿದ ಅಷ್ಟು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸಿರುವ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ  ಒಂದಾಗಿದ್ದು, ಭಾರೀ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯುತ್ತಿದೆ. ಇನ್ನೂ ಅಂಕಿ ಅಂಶಗಳ ವಿಚಾರಕ್ಕೆ ಬರುವುದಾದರೆ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 1988ರಿಂದಲೂ ಫೈನಲ್​ನಲ್ಲಿ ಗೆಲ್ಲದಿರುವುದು ಅಭಿಮಾನಿಗಳ ಚಿಂತೆಯನ್ನು ಹೆಚ್ಚುವಂತೆ ಮಾಡಿದ್ದು, ಭಾರತ ಗೆಲ್ಲಲಿ ಎಂದು ದೇವರ ಮೊರೆ ಹೋಗಿದ್ದಾರೆ.

1988ರಿಂದ ಇಲ್ಲಿಯವರೆಗೂ ನ್ಯೂಜಿಲೆಂಡ್ ಹಾಗೂ ಭಾರತ ತಂಡ ಎರಡು ಭಾರೀ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದು, ಎರಡರಲ್ಲೂ ಭಾರತ ತಂಡ ಸೋಲುಂಡಿದೆ. 1988ರಲ್ಲಿ ನಡೆದ ಶಾರ್ಜಾ ಕಪ್​ನಲ್ಲಿ ಟೀಮ್ ಇಂಡಿಯಾ 52 ರನ್​ಗಳ ಜಯ ಸಾಧಿಸಿದ್ದು, ಹೊರತುಪಡಿಸಿದರೆ ಆ ಬಳಿಕ ನ್ಯೂಜಿಲೆಂಡ್​ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆಲುವು ಕಂಡಿಲ್ಲ. 2000ರಲ್ಲಿ ನಡೆದ ಚಾಂಪಿಯನ್ಸ್​ ಟ್ರೋಫಿ (Champions Trophy) ಫೈನಲ್ ಪಂದ್ಯ ಹಾಗೂ 2005ರಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲುಂಡಿತ್ತು.

ಇದೀಗ ಭಾರತ ತಂಡಕ್ಕೆ ಈ ಶಾಪವನ್ನು ವಿಮೋಚನೆಗೊಳಿಸುವ ಅವಕಾಶ ದೊರೆತ್ತಿದ್ದು, ಭಾನುವಾರ (ಮಾರ್ಚ್ 09) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಭಾರತ ಗೆಲ್ಲಲೆಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಸೇರಿದಂತೆ ಸತತವಾಗಿ 7 ಏಕದಿನ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಟ್ರೋಫಿಗೆ ಮುತ್ತಿಕ್ಕುವ ಮುನ್ಸೂಚನೆಯನ್ನು ನೀಡಿದೆ.