ಪುಣೆ: ತವರಿನ ಅಂಗಣದಲ್ಲಿ ಬರೋಬ್ಬರಿ 36 ವರ್ಷಗಳ ಬಳಿಕ ನ್ಯೂಜಿಲೆಂಡ್ ಎದುರು ಟೆಸ್ಟ್ ಕ್ರಿಕೆಟ್ನಲ್ಲಿ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಇದರಿಂದಾಗಿ ಗುರುವಾರ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ಗೆ ತಿರುಗೇಟು ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಭಾರತ ತಂಡ ಪುಟಿದೇಳುವ ಹಂಬಲದಲ್ಲಿದೆ. ಎಂದಿನ ಸ್ಪಿನ್ ಕಾರ್ಯತಂತ್ರದ ಮೂಲಕ ಸರಣಿ ಜೀವಂತವಿರಿಸರುವತ್ತ ರೋಹಿತ್ ಶರ್ಮ ಪಡೆ ಗಮನಹರಿಸಿದೆ.
ಪ್ರಮುಖ ಆಟಗಾರರ ಲಭ್ಯತೆಯ ನಡುವೆಯೂ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿ ತವರಿನಲ್ಲಿ ಬ್ಯಾಟಿಂಗ್ ವೈಲ್ಯ ಕಂಡಿರುವ ಟೀಮ್ ಇಂಡಿಯಾಗೆ ಸರಣಿ ಜೀವಂತವಿರಿಸಲು ಗೆಲುವು ಅನಿವಾರ್ಯ. ಹಾಲಿ ವರ್ಷ ಎರಡನೇ ಬಾರಿಗೆ ಟೆಸ್ಟ್ನಲ್ಲಿ, ಅದರಲ್ಲೂ ತವರಿನಲ್ಲಿ ಸೋಲು ಅನುಭವಿಸಿರುವುದು ರೋಹಿತ್ಗೆ ಹಿನ್ನಡೆ ಎನಿಸಿದೆ. ಭಾರತ ಯುವ ಆಟಗಾರರಿಂದ, ಅದರಲ್ಲೂ ಪ್ರಮುಖವಾಗಿ ಬೌಲಿಂಗ್ ವಿಭಾಗದಲ್ಲಿ ಉತ್ತಮ ನಿರ್ವಹಣೆಯನ್ನು ನಿರೀಸುತ್ತಿದೆ.
ಹಾಲಿ ವರ್ಷದಲ್ಲಿ ಇಂಗ್ಲೆಂಡ್ ಎದುರು ಮೊದಲ ಟೆಸ್ಟ್ ಪಂದ್ಯ ಸೋತ ಬಳಿಕ ನಂತರದ 4 ಟೆಸ್ಟ್ಗಳಲ್ಲೂ ಗೆದ್ದು ಸರಣಿ ವಶಪಡಿಸಿಕೊಂಡಿದ್ದ ರೋಹಿತ್ ಪಡೆ, ಈ ಸಲವೂ ಅದೇ ರೀತಿ ತಿರುಗೇಟು ನೀಡುವ ಛಲದಲ್ಲಿದೆ. ಆದರೆ ಭಾರತಿಯ ಸ್ಪಿನ್ನರ್ಗಳ ಎದುರು ಕಿವೀಸ್ ಬ್ಯಾಟರ್ಗಳು ದಿಟ್ಟ ಪ್ರದರ್ಶನ ನೀಡುತ್ತಿರುವುದು ಟೀಮ್ ಇಂಡಿಯಾಗೆ ಹಿನ್ನಡೆ ಎನಿಸಿದೆ. ರಚಿನ್ ರವೀಂದ್ರ, ಡೆವೋನ್ ಕಾನ್ ವೇ, ಡೆರಿಲ್ ಮಿಚೆಲ್ ಸ್ಪಿನ್ನರ್ಗಳ ಎದುರು ಉತ್ತಮ ದಾಖಲೆ ಹೊಂದಿದ್ದಾರೆ.
ಬೆಂಗಳೂರು ಟೆಸ್ಟ್ನಲ್ಲಿ ಸ್ಪಿನ್ನರ್ಗಳ ಎದುರು ಸ್ವೀಪ್&ರಿವರ್ಸ್ ಸ್ವೀಪ್ ಮೂಲಕ ಅವಕಾಶ ಸಿಕ್ಕಾಗಲೆಲ್ಲ ರನ್ ಕಸಿಯುವ ತಂತ್ರದಿಂದ ಯಶ ಸಾಧಿಸಿದೆ. ವಿರಾಟ್ ಕೊಹ್ಲಿ, ಸ್ರಾರ್ಜ್ ಖಾನ್ ಹಾಗೂ ರಿಷಭ್ ಪಂತ್ ಉತ್ತಮ ಲಯದಲ್ಲಿದ್ದು, ರೋಹಿತ್ ಜತೆಗೆ ಕೆಎಲ್ ರಾಹುಲ್ ಾಮ್ರ್ ಕಂಡುಕೊಂಡರೆ ಭಾರತಕ್ಕೆ ಹೆಚ್ಚಿನ ಬಲ ಸಿಗಲಿದೆ.
ಆಸೀಸ್ ಪ್ರವಾಸಕ್ಕೆ ಮುನ್ನ ಕಿವೀಸ್ ಎದುರಿನ 2 ಟೆಸ್ಟ್ ಜಯಿಸುವುದು ರೋಹಿತ್ ಪಡೆಯ ಮುಂದಿರುವ ಪ್ರಮುಖ ಸವಾಲಾಗಿದೆ. 2ನೇ ಟೆಸ್ಟ್ಗೆ ಭಾರತ ತಂಡ ಆಡುವ ಬಳಗ ಆಯ್ಕೆ ಕಗ್ಗಂಟ್ಟಾಗಿದೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನ ವೈಯಕ್ತಿಕ ಗರಿಷ್ಠ ಮೊತ್ತ 254 ರನ್ ಇದೇ ಮೈದಾನದಲ್ಲಿ ದಾಖಲಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ನ್ಯೂಜಿಲೆಂಡ್ ಪಂದ್ಯ ಬಾಕಿಯಿರುವಂತೆಯೆ ಐತಿಹಾಸಿಕ ಸರಣಿ ಜಯಿಸುವ ಗುರಿ ಹೊಂದಿದೆ.
ರಾಹುಲ್ ವರ್ಸಸ್ ಸರ್ಪ್ರಾಜ್: ಮೊದಲ ಟೆಸ್ಟ್ ಪಂದ್ಯ ತಪ್ಪಿಸಿಕೊಂಡಿದ್ದ ಬ್ಯಾಟರ್ ಶುಭಮಾನ್ ಗಿಲ್ ಹಾಗೂ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ವಿಕೆಟ್ ಕೀಪರ್&ಬ್ಯಾಟರ್ ರಿಷಭ್ ಪಂತ್ 2ನೇ ಟೆಸ್ಟ್ಗೆ ಫಿಟ್ ಆಗಿರುವುದಾಗಿ ಕೋಚ್ ಗೌತಮ್ ಗಂಭೀರ್ ಖಾತ್ರಿಪಡಿಸಿದ್ದಾರೆ. ಜತೆಗೆ ಪಂತ್ ವಿಕೆಟ್ ಕೀಪಿಂಗ್ ನಿರ್ವಹಣೆಯ ಜವಾಬ್ದಾರಿಯೂ ಹೊರಲಿದ್ದಾರೆ ಎಂದು ತಿಳಿಸಿದ್ದಾರೆ. ಗಿಲ್ ವಾಪಸಾತಿ ಹಿನ್ನಲೆ ಸ್ರಾರ್ಜ್ ಅಥವಾ ಕೆಎಲ್ ರಾಹುಲ್ ಸ್ಥಾಬ ಬಿಟ್ಟುಕೊಡಬೇಕಾಗುತ್ತದೆ. ತವರಿನ ಅಂಗಣದಲ್ಲಿ ರಾಹುಲ್ ವೈಲ್ಯ ಅನುಭವಿಸಿದ ಹಿನ್ನಡೆ ಎದುರಿಸಿದರೆ, ಸ್ರಾರ್ಜ್ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಸ್ಥಾನ ಗಟ್ಟಿಮಾಡಿಕೊಂಡಿದ್ದಾರೆ. ಸರಣಿಯಲ್ಲಿ ಹಿನ್ನಡೆಯ ನಡುವೆ ಅನುಭವಿ ರಾಹುಲ್ಗೆ ಮಣೆ ಹಾಕಿದರೆ, ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ ನಡುವೆಯೂ ಸ್ರಾರ್ಜ್ ಸ್ಥಾನ ಕಳೆದುಕೊಳ್ಳಲಿದ್ದಾರೆ.
ಟೀಮ್ ನ್ಯೂಸ್
ಭಾರತ: ಶುಭಮಾನ್ ಗಿಲ್ ಫಿಟ್ ಆಗಿರುವುದರಿಂದ ಭಾರತವೂ ಕೆಲ ಬದಲಾವಣೆ ಮಾಡುವುದು ಖಚಿತವೆನಿಸಿದೆ. ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರೆ, ಕೊಹ್ಲಿ ನಂತರದಲ್ಲಿ ಕ್ರೀಸ್ಗಿಳಿಯಲಿದ್ದಾರೆ. ರಾಹುಲ್ ಮತ್ತು ಸ್ರಾರ್ಜ್ ಖಾನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಕುಲದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆದರೂ ಅಚ್ಚರಿ ಇಲ್ಲ. ಇನ್ನು 2ನೇ ವೇಗಿ ಮೊಹಮದ್ ಸಿರಾಜ್ ಬದಲಿಗೆ ಆಕಾಶ್ದೀಪ್ಗೆ ಸ್ಥಾನ ನಿರೀಸಲಾಗಿದೆ.
ನ್ಯೂಜಿಲೆಂಡ್: ಗೆಲುವಿನ ಕಾಂಬಿನೇಷನ್ನಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಕೇನ್ವಿಲಿಯಮ್ಸನ್ ಗೈರಿನಲ್ಲಿ ವಿಲ್ ಯಂಗ್ ಮುಂದುವರಿಯಲಿದ್ದು, ಮೂವರು ವೇಗಿಗಳ ಜತೆಗೆ ಕಣಕ್ಕಿಳಿಯುವ ನಿರೀೆಗಳಿವೆ.ಪುಣೆ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ಒದಗಿಸುವುದರಿಂದ ಹೆಚ್ಚುವರಿ ಸ್ಪಿನ್ನರ್ ಕಣಕ್ಕಿಳಿದರೂ ಅಚ್ಚರಿ ಇಲ್ಲ.
ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ
ಪಿಚ್ ರಿಪೋರ್ಟ್
ಎಂಸಿಎ ಕ್ರೀಡಾಂಣ ಇದುವರೆಗೆ 3 ಟೆಸ್ಟ್ ಪಂದ್ಯಗಳಿಗೆ ಆತಿಥ್ಯವಹಿಸಿದ್ದು, ಈ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಗೆಲುವು ದಾಖಲಿಸಿದೆ. 2019ರಲ್ಲಿ ಭಾರತ ಇಲ್ಲಿ ಕೊನೆಯದಾಗಿ ದ.ಆಫ್ರಿಕಾ ವಿರುದ್ಧಆಡಿತ್ತು. ಆಗ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 137 ರನ್ಗಳಿಂದ ಗೆದ್ದು ಬೀಗಿತ್ತು. ಈ ಸಲದ ಪಿಚ್ ಸ್ಪಿನ್ ಸ್ನೇಹಿಯಾಗಿರುವ ನಡುವೆ ಬ್ಯಾಟಿಂಗ್ಗೂ ಸಹಕರಿಸುವ ನಿರೀೆ ಇದೆ.