ಕ್ರೀಡೆ

ವಿರಾಟ್​ ಕೊಹ್ಲಿಗೆ ಅವಕಾಶ ನೀಡಿದಂತೆ ಈತನಿಗೂ ಕೊಡಿ; ಬಾಬರ್​ ಉಲ್ಲೇಖಿಸಿ Pak​ ಪ್ಲೇಯರ್​ನ ಟ್ವೀಟ್​ ವೈರಲ್​

ನವದೆಹಲಿ: ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಮ್ಯಾಚ್​ನಲ್ಲಿ ಪಾಕಿಸ್ತಾನ ತಂಡವು (Pakistan Cricket Team) ಹೀನಾಯವಾಗಿ ಸೋತಿದ್ದು, ವಿಶ್ವದ ಮುಂದೆ ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ. ಮುಲ್ತಾನ್​ನಲ್ಲಿ ನಡೆದ ಸರಣಿಯ (Series) ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಪ್ರವಾಸಿ ತಂಡವು ಸಂಪೂರ್ಣ ಮೇಲುಗೈ ಸಾಧಿಸಿದ್ದು, ಪಾಕಿಸ್ತಾನ ಕ್ರಿಕೆಟ್​ ತಂಡವು (Pakistan Cricket Team) ಭಾರೀ ಮುಖಭಂಗವನ್ನು ಅನುಭವಿಸಿದೆ. ಇದೀಗ ತಂಡದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು (Pakistan Cricket Board) ಬಾಬರ್​ ಅಜಂ (Babar Azam), ಶಹೀನ್​ ಅಫ್ರಿದಿಗೆ (Shahin Afridi) ತಂಡದಿಂದ ಗೇಟ್​ಪಾಸ್​ ನೀಡಲಾಗಿದ್ದು, ಈ ವಿಚಾರ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡವು (Pakistan Cricket Team) ತನ್ನ ಕಳಪೆ ಪ್ರದರ್ಶನಕ್ಕಾಗಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಇದಕ್ಕೆ ಜೀವಂತೆ ನಿದರ್ಶನ ಎಂದರೆ ಟಿ20 ವಿಶ್ವಕಪ್​ನಲ್ಲಿ (T20 WorldCup) ಕ್ರಿಕೆಟ್​ ಶಿಶು ಯುಎಸ್​ಎ (USA), ತವರು ನೆಲದಲ್ಲಿ ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿ (Test Series) ಸೋಲು ಹಾಗೂ ಆಟಗಾರರ ನಡುವಿನ ಒಳಜಗಳ ಎಂದರೆ ತಪ್ಪಾಗಲಾರದು. ಇದೀಗ ಇದಕ್ಕೆ ಬ್ರೇಕ್​ ಹಾಕಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (Pakistan Cricket Board) ಮುಂದಾಗಿದ್ದು, ಬಾಬರ್ (Babar)​ ಹಾಗೂ ಶಹೀನ್​ಗೆ (Shahin) ತಂಡದಿಂದ ಗೇಟ್​ಪಾಸ್​ ನೀಡಿದೆ. ಆದರೆ, ಪಿಸಿಬಿಯ (PCB) ನಡೆಗೆ ಕಿಡಿಕಾರಿರುವ ಆರಂಭಿಕ ಆಟಗಾರ ಫಖರ್​ ಜಮಾನ್ (Fakhar Zaman)​ ವಿರಾಟ್​ ಕೊಹ್ಲಿ (Virat Kohli) ವಿಚಾರವನ್ನು ಉಲ್ಲೇಖಿಸಿ ಕ್ರಿಕೆಟ್​ ಮಂಡಳಿ ವಿರುದ್ಧ ಹರಿಹಾಯ್ದಿದ್ಧಾರೆ.

ಈ ಕುರಿತು ಟ್ವೀಟ್​ ಮಾಡಿರುವ ಫಖರ್​ ಜಮಾನ್ (Fakhar Zaman)​, ಬಾಬರ್​ ಅಜಂರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ನಡೆಗೆ ಸಂಬಂಧಿಸಿದಂತೆ. 2020 ಮತ್ತು 2023 ರ ನಡುವೆ ಭಾರತವು ವಿರಾಟ್ ಕೊಹ್ಲಿಯನ್ನು ಕ್ರಮವಾಗಿ 19.33, 28.21 ಮತ್ತು 26.50 ರ ಸರಾಸರಿ ಹೊಂದಿದ್ದಾಗ ತಂಡದಿಂದ ಕೈಬಿಡದೆ ಹೆಚ್ಚಿನ ಅವಕಾಶವನ್ನು ನೀಡಿದರು. ನಾವು ನಮ್ಮ ಮೇನ್​ ಬ್ಯಾಟ್ಸ್​ಮನ್​ಅನ್ನು ತಂಡದಿಂದ ಕೈಬಿಡುವ ಬಗ್ಗೆ ಯೋಚಿಸುತ್ತಿರುವುದನ್ನು ನೋಡಿದರೆ ಇದು ಟೀಮ್​ನ ಮೇಲೆ ನಕಾರಾತ್ಮಕ ಪರಿಣಾವನ್ನು ಬೀರುತ್ತದೆ. ಅವರು ಫಾರ್ಮ್​ನಲ್ಲಿರದ ಕಾರಣ ನಾವು ಪ್ಯಾನಿಕ್ ಬಟನ್ ಅನ್ನು ಒತ್ತುವುದನ್ನು ತಪ್ಪಿಸಲು ನಾವು ಅವರನ್ನು ದುರ್ಬಲಗೊಳಿಸುವುದಕ್ಕಿಂತ ಹೆಚ್ಚಾಗಿ ಅವರನ್ನು ರಕ್ಷಿಸುವತ್ತ ಗಮನಹರಿಸಬೇಕಿದೆ ಎಂದು ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರ ಫಖರ್​ ಜಮಾನ್ (Fakhar Zaman)​ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಆಯ್ಕೆ ಸಮಿತಿ ಸದಸ್ಯ ಆಕಿಬ್​ ಜಾವೇದ್ (Aaqib Javed)​, ಬಾಬರ್​ (Babar Azam) ಹಾಗೂ ಶಹೀನ್​​ಗೆ (Shahin) ವಿರಾಮದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಅವರನ್ನು ಸರಣಿಯ ಎರಡನೇ ಪಂದ್ಯದಿಂದ ಹೊರಗಿಡಲಾಗಿದೆ. ಫಾರ್ಮ್​ ಸಮಸ್ಯೆಯ ಕಾರಣ ಉಳಿದ ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದ್ದು ಬೇರೆಯವರಿಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.