ಕ್ರೀಡೆ

ಅಲ್ಪಮೊತ್ತಕ್ಕೆ ಕುಸಿದ ನ್ಯೂಜಿಲೆಂಡ್; ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ

ರಾಯಪುರ: ನ್ಯೂಜಿಲೆಂಡ್ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು. ನಾಯಕ ರೋಹಿತ್ ಶರ್ಮಾನ ಲೆಕ್ಕಾಚಾರ ಫಲಿಸಿದ್ದು, ಭಾರತೀಯ ಬೌಲರ್​ಗಳ ಪ್ರವಾಸಿ ತಂಡವನ್ನ ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ನಲುಗಿದ
ನ್ಯೂಜಿಲೆಂಡ್ 108 ರನ್ ಗಳಿಸಲಷ್ಟೇ ಶಕ್ತವಾಯಿತು.

ನ್ಯೂಜಿಲೆಂಡ್ ನೀಡಿದ ಅಲ್ಪ ಮೊತ್ತದ ಗುರಿಯನ್ನು ಕೇವಲ 20.1 ಓವರ್​ಗಳಲ್ಲಿ ತಲುಪುವಲ್ಲಿ ಸಾಧ್ಯವಾಯಿತು. ನಾಯಕ್ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಇನ್ನಿಂಗ್ಸ್​ ಆರಂಭಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 72 ರನ್​ಗಳ ಜೊತೆಯಾಟವಾಡಿತು. ರೋಹಿತ್ ಶರ್ಮಾ 51 ರನ್ ಗಳಿಸಿ ಮಿಂಚಿದರು. ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದ ರೋಹಿತ್ ಅರ್ಧಶತಕ ಸಿಡಿಸುತ್ತಿದ್ದಂತೆ ವಿಕೆಟ್ ಒಪ್ಪಿಸಿದರು.

ಎರಡನೇ ವಿಕೆಟ್​ಗೆ ಶುಭಮನ್ ಗಿಲ್ ಜತೆಯಾದ ವಿರಾಟ್ ಕೊಹ್ಲಿ 11 ರನ್​ಗಳಿಸಿ ಸ್ಯಾಂಟ್ನರ್ ಎಸೆತದಲ್ಲಿ ಸ್ಟಂಪ್​ ಔಟಾದರು. ಅಂತಿಮವಾಗಿ ಇಶಾನ್ ಕಿಶನ್ ಜತೆಗೂಡಿದ ಗಿಲ್ ಅಜೇಯ 40 ರನ್​ ಬಾರಿಸಿ ಟೀಂ ಇಂಡಿಯಾ ಸರಣಿಯಲ್ಲಿ ಎರಡನೇ ಗೆಲುವು ದಾಖಲಿಸಲು ನೆರವಾದರು. ಇದರೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

ಕಿವೀಸ್ ವಿರುದ್ಧ ಟೀಂ ಇಂಡಿಯಾ ಬೌಲರ್​ಗಳು ಅಧ್ಭುತವಾಗಿ ಬೌಲಿಂಗ್ ದಾಳಿ ನಡೆಸಿದರು. ಯಾವೊಬ್ಬ ಬ್ಯಾಟ್ಸ್​ಮನ್​ಗೂ ಕ್ರಿಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶ ಮಾಡಿ ಕೊಡಲಿಲ್ಲ. ಏಳು ಬ್ಯಾಟ್ಸ್​ಮನ್​ಗಳು ಒಂದಕಿಂಯ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಸ್ಯಾಂಟ್ನರ್ (27), ಗ್ಲೆನ್ ಫಿಲಿಪ್ಸ್ (36), ಮಿಚೆಲ್ ಬ್ರೇಸ್​​ವೆಲ್ (22) ರನ್ ಗಳಿಸಿರು. ಮಧ್ಯಮ ಕ್ರಮಾಂಕದಲ್ಲಿ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಪ್ಸ್​ 47 ರನ್​ಗಳ ಜೊತೆಯಾಟದ ನರವಿನಿಂದ ನ್ಯೂಜಿಲೆಂಡ್ ಮೊತ್ತವು 100ರ ಗಡಿದಾಟಲು ಸಾಧ್ಯವಾಯಿತು. (ಏಜೆನ್ಸೀಸ್)