ದುಬೈ: ವೇಗಿ ಆರುಂಧತಿ ರೆಡ್ಡಿ (19ಕ್ಕೆ3), ಕನ್ನಡತಿ ಶ್ರೇಯಾಂಕಾ ಪಾಟೀಲ್ (12ಕ್ಕೆ 2) ಬಿಗಿ ಬೌಲಿಂಗ್ ಹಾಗೂ ನಾಯಕಿ ಹರ್ಮಾನ್‌ಪ್ರೀತ್ ಕೌರ್ (29 ರನ್, 24 ಎಸೆತ, 1 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಪಡೆ ನಾಕೌಟ್ ಆಸೆ ಜೀವಂತವಿರಿಸಿಕೊಂಡಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಇಳಿಯಿತು. ಆರುಂಧತಿ ರೆಡ್ಡಿ ಸಹಿತ ಬೌಲರ್‌ಗಳ ದಾಳಿಗೆ ನಿರಂತರ ವಿಕೆಟ್ ಕಳೆದುಕೊಂಡು 8 ವಿಕೆಟ್‌ಗೆ 105 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಶೆಾಲಿ ವರ್ಮ (32 ರನ್, 35 ಎಸೆತ, 3 ಬೌಂಡರಿ) ಒದಗಿಸಿದ ಆರಂಭದ ನೆರವಿನಿಂದ 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 108 ರನ್‌ಗಳಿಸಿ ಹೋರಾಟಯುತ ಗೆಲುವು ಕಂಡಿತು.
ಪಾಕಿಸ್ತಾನ: 8 ವಿಕೆಟ್‌ಗೆ 105 (ಮುನೀಬಾ 17, ಸಿದ್ರಾ 8, ಒಮೈಮಾ 3,ನಿದಾ 28, ಅಲಿಯಾ 4, ಾತಿಮಾ 13, ಸೈಯದಾ 14, ನಶ್ರಾ *, ಆರುಂಧತಿ ರೆಡ್ಡಿ 19ಕ್ಕೆ 3, ಶ್ರೇಯಾಂಕಾ 12ಕ್ಕೆ 2, ರೇಣುಕಾ 23ಕ್ಕೆ 1). ಭಾರತ:18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 108 (ಶೆಾಲಿ 32, ಸ್ಮತಿ ಮಂದನಾ 7, ಜೆಮೀಮಾ ರೋಡ್ರಿಗಸ್ 23, ಹರ್ಮಾನ್‌ಪ್ರೀತ್ 29, ರಿಚಾ ೋಷ್ 0, ದೀಪ್ತಿ ಶರ್ಮ 7*, ಸಜನಾ 4*, ಾತಿಮಾ 23ಕ್ಕೆ 2, ಒಮೈಮಾ 17ಕ್ಕೆ 1). ಪಂದ್ಯಶ್ರೇಷ್ಠ: ಆರುಂಧತಿ ರೆಡ್ಡಿ.
ಹರ್ಮಾನ್‌ಪ್ರೀತ್‌ಗೆ ಇಂಜುರಿ: ಗೆಲುವಿಗೆ 2 ರನ್ ಅಗತ್ಯವಿದ್ದಾಗ ಕುತ್ತಿಗೆ ನೋವಿನ ಸಮಸ್ಯೆಯಿಂದಾಗಿ ಹರ್ಮಾನ್‌ಪ್ರೀತ್ ಅಂಗಣ ತೊರೆದರು. 19ನೇ ಓವರ್‌ನ 4ನೇ ಎಸೆತದಲ್ಲಿ ೈನ್ ಲೆಗ್‌ನತ್ತ ಬಾರಿಸಲು ಯತ್ನಿಸಿದ ಹರ್ಮಾನ್‌ಪ್ರೀತ್ ಬ್ಯಾಲೆನ್ಸ್ ತಪ್ಪಿ ನೆಲಕ್ಕೆ ಉರುಳಿದರು. ಸ್ಟಂಪಿಂಗ್‌ನಿಂದ ಪಾರಾಗುವ ಪ್ರಯತ್ನದಲ್ಲಿ ಹರ್ಮಾನ್‌ಪ್ರೀತ್ ಗಾಯದ ಸಮಸ್ಯೆಗೆ ಒಳಗಾದರು.
ಭಾರತಕ್ಕೆ ಮುಂದಿನ ಪಂದ್ಯ
ಯಾವಾಗ: ಬುಧವಾರ
ಎದುರಾಳಿ: ಶ್ರೀಲಂಕಾ