ಕ್ರೀಡೆ

ಭಾರತ-ಶ್ರೀಲಂಕಾ ಟಿ-ಟ್ವೆಂಟಿ: ಟಾಸ್ ಗೆದ್ದ ಸಿಂಹಳೀಯರಿಂದ ಬೌಲಿಂಗ್ ಆಯ್ಕೆ..

ಕೊಲೊಂಬೊ: ಆರ್, ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ನಡೆಯಲಿರುವ 2ನೇ ಟಿ-ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡ ಬೌಲಿಂಗ್ ಆಯ್ದುಕೊಂಡಿದೆ.

ಭಾರತ ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಮಂಗಳವಾರ ಕೊರೊನಾ ಪಾಸಿಟಿವ್ ದೃಢಪಟ್ಟ ಕಾರಣ ನಿನ್ನೆ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಗಿತ್ತು.
ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಹನ್ನೊಂದರ ಬಳಗ (ಭಾರತ): ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸ್​​ನ್, ನಿತೀಶ್ ರಾಣಾ, ಭುವನೇಶ್ವರ್, ಕುಲ್ದೀಪ್ ಯಾದವ್, ರಾಹುಲ್ ಚಹರ್, ವರುಣ್ ಚಕ್ರವರ್ತಿ, ನವದೀಪ್ ಸೈನಿ, ಚೇತನ್ ಸಕಾರಿಯಾ.

ಹನ್ನೊಂದರ ಬಳಗ (ಶ್ರೀಲಂಕಾ): ಆವಿಷ್ಕಾ ಫರ್ನಾಂಡೋ, ಮಿನೋದ್ ಭನುಕಾ, ಧನಂಜಯಾ ಡಿಸಿಲ್ವಾ, ಚರಿತ್ ಅಸಲಂಕಾ, ಅಸೆನ್ ಭಂಡಾರ/ಭನುಕಾ ರಾಜಪಕ್ಸಾ, ಧಸುನ್ ಸನಕಾ, ವಾಣಿಂದು ಹಸರಂಗಾ, ಚನುಕಾ ಕರುಣರತ್ನೆ, ಇಸುರು ಉದಾನ, ಧುಶ್ಮಂತಾ ಚಮೀರಾ, ಅಖಿಲಾ ಧನಂಜಯಾ. (ಏಜೆನ್ಸೀಸ್)