ಬ್ಲೋಮಾಂಟೇನ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ ಸಿಕ್ಸ್‌ನಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದರೂ ಪರಸ್ಪರ ಎದುರಾಗುವುದಿಲ್ಲ! ಏಕೆಂದರೆ ಗುಂಪು ಹಂತದ ಪ್ರದರ್ಶನದ ಆಧಾರದ ಮೇಲೆ ಸೂಪರ್-6ನ ಎದುರಾಳಿಗಳು ನಿರ್ಧಾರವಾಗಲಿದ್ದು, ಭಾರತ ತಂಡ ಎ ಗುಂಪಿನಲ್ಲಿ, ಪಾಕಿಸ್ತಾನ ಡಿ ಗುಂಪಿನಲ್ಲಿ ಕ್ರಮವಾಗಿ ಅಗ್ರಸ್ಥಾನ ಪಡೆದಿವೆ.
ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡಗಳು ಸೂಪರ್-6ನಲ್ಲಿ ಪರಸ್ಪರ ಎದುರಾಗುವುದಿಲ್ಲ. ಆರಂಭಿಕ ಹಂತದ 4 ಗುಂಪುಗಳ ಅಗ್ರ-3 ತಂಡಗಳು ಸೂಪರ್ ಸಿಕ್ಸ್‌ಗೆ ಅರ್ಹತೆ ಪಡೆದಿದ್ದು, ಎ ಮತ್ತು ಡಿ ಗುಂಪಿನ ತಂಡಗಳು ಒಂದು ಗುಂಪಿನಲ್ಲಿ ಸ್ಥಾನ ಪಡೆದರೆ, ಬಿ ಮತ್ತು ಸಿ ಗುಂಪಿನ ತಂಡಗಳು ಗ್ರೂಪ್-2ರಲ್ಲಿ ಸ್ಥಾನ ಪಡೆದಿವೆ. ಸೂಪರ್ ಸಿಕ್ಸ್‌ನ 2 ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮೀಸ್ ಅರ್ಹತೆ ಪಡೆಯಲಿವೆ.
ಅಣ್ಣನಿಗೆ ಟೀಮ್ ಇಂಡಿಯಾ ಕರೆ, ತಮ್ಮನಿಂದ 2ನೇ ಶತಕ: ದೇಶೀಯ ಟೂರ್ನಿಯಲ್ಲಿ ರನ್ ಮಳೆಹರಿಸಿದ್ದ ಮುಂಬೈ ಬ್ಯಾಟರ್ ರ್ಸ್ರಾಜ್ ಖಾನ್ ಪ್ರವಾಸಿ ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯಕ್ಕೆ ಸೋಮವಾರ ಟೀಮ್ ಇಂಡಿಯಾದ ಚೊಚ್ಚಲ ಕರೆ ಪಡೆದಿದ್ದಾರೆ. ಇತ್ತ ರ್ಸ್ರಾಜ್ ಕಿರಿಯ ಸಹೋದರ ಮುಶೀರ್ ಖಾನ್ ಮರುದಿನವೇ ಕಿರಿಯರ ವಿಶ್ವಕಪ್‌ನಲ್ಲಿ 2ನೇ ಶತಕ ಸಿಡಿಸುವ ಮೂಲಕ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಎನಿಸಿದ್ದಾರೆ. ಇದಕ್ಕೂ ಮುನ್ನ ಜ.25 ರಂದು ಇಬ್ಬರು ಸಹೋದರರು ಭಾರತದ ಪರ ಶತಕದ ಸಾಧನೆ ಮಾಡಿದ್ದರು. ಮುಶೀರ್ ಐರ್ಲೆಂಡ್ ಎದುರು ಸೆಂಚುರಿ ಗಳಿಸಿದರೆ, ರ್ಸ್ರಾಜ್ ಇಂಗ್ಲೆಂಡ್ ಲಯನ್ಸ್ ವಿರುದ್ಧ ಪಂದ್ಯದಲ್ಲಿ ಭಾರತ ಎ ತಂಡದ ಪರ ಶತಕ ಸಾಧನೆ ಮಾಡಿದ್ದರು.