ಅಹಮದಾಬಾದ್: ಆರಂಭಿಕ ಆಘಾತದಿಂದ ಪುಟಿದೆದ್ದಿದ್ದ ಭಾರತ ತಂಡ 3ನೇ ಚುಟುಕು ಕ್ರಿಕೆಟ್ ಕದನದಲ್ಲಿ ಮತ್ತೆ ಮುಗ್ಗರಿಸಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಕರೊನಾ ವೈರಸ್ ಭೀತಿಯಿಂದ ಪ್ರೇಕ್ಷಕರಿಲ್ಲದೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ 8 ವಿಕೆಟ್‌ಗಳಿಂದ ಶರಣಾಯಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 1-2ರಿಂದ ಹಿನ್ನಡೆ ಅನುಭವಿಸಿದೆ. ತವರು ನೆಲದಲ್ಲಿ ಸರಣಿ ಉಳಿಸಿಕೊಳ್ಳಲು ಕಡೇ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡ ಭಾರತಕ್ಕೆ ಎದುರಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಆರಂಭಿಕ ಆಘಾತದ ನಡುವೆಯೂ ವಿರಾಟ್ ಕೊಹ್ಲಿ (77*ರನ್, 46 ಎಸೆತ, 8 ಬೌಂಡರಿ, 4 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 156 ರನ್ ಪೇರಿಸಿತು. ಬಳಿಕ ಇಂಗ್ಲೆಂಡ್ ತಂಡ ಜೋಸ್ ಬಟ್ಲರ್ (83*ರನ್, 52 ಎಸೆತ, 5 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 18.2 ಓವರ್‌ಗಳಲ್ಲಿ 2 ವಿಕೆಟ್‌ಗೆ 158 ರನ್‌ಗಳಿಸಿ ಜಯದ ನಗೆ ಬೀರಿತು.
ಭಾರತ: 6 ವಿಕೆಟ್‌ಗೆ 156 (ರೋಹಿತ್ ಶರ್ಮ 15, ಕೆಎಲ್ ರಾಹುಲ್ 0, ಇಶಾನ್ ಕಿಶನ್ 4, ವಿರಾಟ್ ಕೊಹ್ಲಿ 77*, ರಿಷಭ್ ಪಂತ್ 25, ಶ್ರೇಯಸ್ ಅಯ್ಯರ್ 9, ಹಾರ್ದಿಕ್ ಪಾಂಡ್ಯ 17, ಮಾರ್ಕ್‌ವುಡ್ 31ಕ್ಕೆ 3, ಕ್ರಿಸ್ ಜೋರ್ಡಾನ್ 35ಕ್ಕೆ 2), ಇಂಗ್ಲೆಂಡ್: 18.2 ಓವರ್‌ಗಳಲ್ಲಿ 2 ವಿಕೆಟ್‌ಗೆ 158 (ಜೇಸನ್ ರಾಯ್ 9, ಜೋಸ್ ಬಟ್ಲರ್ 83*, ಡೇವಿಡ್ ಮಲನ್ 18, ಜಾನಿ ಬೇರ್‌ಸ್ಪೋ 40*, ಯಜುವೇಂದ್ರ ಚಾಹಲ್ 41ಕ್ಕೆ 1, ವಾಷಿಂಗ್ಟನ್ ಸುಂದರ್ 26ಕ್ಕೆ 1).