IND vs WI Test: ಪ್ರಸಕ್ತ ದೆಹಲಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ಟೀಮ್ ಇಂಡಿಯಾದ ಯುವ ಬ್ಯಾಟರ್ ಸಾಯಿ ಸುದರ್ಶನ್, ಬ್ಯಾಟಿಂಗ್ ಮಾತ್ರವಲ್ಲದೇ ಫೀಲ್ಡಿಂಗ್ನಲ್ಲಿಯೂ ಉತ್ತಮ ಎಂಬುದನ್ನು ಇದೀಗ ಅತ್ಯುತ್ತಮ ಕ್ಯಾಚ್ ಮೂಲಕ ಸಾಬೀತುಪಡಿಸಿದ್ದಾರೆ.
ವೆಸ್ಟ್ ಇಂಡೀಸ್ ದೈತ್ಯರು ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಸಾಯಿ, 7ನೇ ಓವರ್ ಬೌಲಿಂಗ್ನಲ್ಲಿದ್ದ ರವೀಂದ್ರ ಜಡೇಜಾ ತಮ್ಮ ಓವರ್ನ ಎರಡನೇ ಬಾಲ್ ಅನ್ನು ವಿಂಡೀಸ್ನ ಓಪನರ್ ಜಾನ್ ಕ್ಯಾಂಪ್ಬೆಲ್ಗೆ (10) ಹಾಕಿದರು. ಈ ಸಂದರ್ಭದಲ್ಲಿ, ಸ್ವೀಪ್ ಶಾಟ್ ಹೊಡೆದ ಜಾನ್, ನೇರವಾಗಿ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸುದರ್ಶನ್ ಕೈಗೆ ಕ್ಯಾಚ್ ನೀಡಿದರು. ಒಂದು ನಿಮಿಷ ಬಾಲ್ ಬೌಂಡರಿ ಲೈನ್ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಸುದರ್ಶನ್ ಹಿಡಿದ ಆ ಅದ್ಭುತ ಕ್ಯಾಚ್ ಮೈದಾನದಲ್ಲಿದ್ದ ಅಭಿಮಾನಿಗಳ ಅಚ್ಚರಿಗೆ ಕಾರಣವಾಯಿತು.
ಇದನ್ನೂ ಓದಿ: ದಯವಿಟ್ಟು ಇಂಥಾ ಕೆಲಸ ಮಾಡ್ಬೇಡಿ! ಬಳಕೆ ಬಗ್ಗೆ ಅರಿವಿರಲಿ: ನೆಟ್ಟಿಗರಿಗೆ ಸೌತ್ ಬ್ಯೂಟಿ ಖಡಕ್ ಕ್ಲಾಸ್ | Priyanka Mohan
ಬಾಲ್ ಹಿಡಿಯುವ ಭರದಲ್ಲಿ ಸಾಯಿ ಸುದರ್ಶನ್ ತಮ್ಮ ಬಲಗೈ ಕಿರುಬೆರಳಿಗೆ ಗಾಯ ಮಾಡಿಕೊಂಡರು. ಸ್ಟಾರ್ ಬ್ಯಾಟರ್ನ ವಿಕೆಟ್ ಪಡೆದ ಖುಷಿ ಒಂದೆಡೆಯಾದರೆ, ಗಾಯದಿಂದ ಸಾಯಿ ಪೆವಿಲಿಯನ್ ಹಾದಿ ಹಿಡಿದಿದ್ದು ಟೀಮ್ ಇಂಡಿಯಾಗೆ ದೊಡ್ಡ ಶಾಕ್ ನೀಡಿತು. ಸುದರ್ಶನ್ ಇಂಜುರಿ ಬೆನ್ನಲ್ಲೇ ಅವರ ಜಾಗಕ್ಕೆ ಪಡಿಕ್ಕಲ್ರನ್ನು ಕರೆತರಲಾಯಿತು. ಇದರೊಂದಿಗೆ, ವೆಸ್ಟ್ ಇಂಡೀಸ್ 21 ರನ್‌ಗಳಿಗೆ ತಮ್ಮ ಮೊದಲ ವಿಕೆಟ್ ಅನ್ನು ಕಳೆದುಕೊಂಡಿತು.
ಇದಕ್ಕೂ ಮೊದಲು, ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 518/5ಕ್ಕೆ ಡಿಕ್ಲೇರ್ ಮಾಡಿತು. ಬ್ಯಾಟ್ಸ್‌ಮನ್‌ಗಳ ಪೈಕಿ ಯಶಸ್ವಿ ಜೈಸ್ವಾಲ್ (175 ರನ್) ಮತ್ತು ಶುಭಮನ್ ಗಿಲ್ (129 ಅಜೇಯ) ಭರ್ಜರಿ ಶತಕಗಳನ್ನು ಗಳಿಸಿದರು. ಸಾಯಿ ಸುದರ್ಶನ್ (87) ಅರ್ಧಶತಕ ಬಾರಿಸಿದರೆ, ಧ್ರುವ್ ಜುರೆಲ್ (44), ನಿತೀಶ್ ಕುಮಾರ್ ರೆಡ್ಡಿ (43) ಮತ್ತು ಕೆ.ಎಲ್. ರಾಹುಲ್ (38) ತಂಡದ ಪರ ಉತ್ತಮ ಪ್ರದರ್ಶನ ನೀಡಿದರು,(ಏಜೆನ್ಸೀಸ್).