IND vs PAK Tickets: ನಿನ್ನೆಯಷ್ಟೇ ಯುಎಇ ವಿರುದ್ಧ ಅತ್ಯಂತ ಸುಲಭ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, 9 ವಿಕೆಟ್ಗಳ ಅಂತರದಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದು ಬೀಗಿತು. ಈ ಮಧ್ಯೆ ಕ್ರಿಕೆಟ್ ಪ್ರಿಯರು ತೀವ್ರ ಕುತೂಹಲದಿಂದ ಕಾಯುತ್ತಿರುವ ಸೆ.14ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಇನ್ನೂ ಖರೀದಿಯಾಗಿಲ್ಲ. ಈ ಹೈವೋಲ್ಟೇಜ್ ಮ್ಯಾಚ್ಗೆ ಸಾಕ್ಷಿಯಾಗಬೇಕಿದ್ದ ಅಭಿಮಾನಿಗಳೇ ಟಿಕೆಟ್ ಖರೀದಿಸಲು ಹಿಂದೇಟು ಹಾಕಿರುವುದು ಸದ್ಯ ಭಾರೀ ಆಶ್ಚರ್ಯಕ್ಕೆ ಕಾರಣವಾಗಿದೆ. ಅದರಲ್ಲೂ ಪಂದ್ಯಕ್ಕೆ ಇನ್ನೆರೆಡು ದಿನಗಳು ಬಾಕಿ ಉಳಿದಿರುವಾಗಲೇ ಹೀಗೆ ಎಂಬುದು ಗೊಂದಲ ಹುಟ್ಟುಹಾಕಿದೆ.
ಇದನ್ನೂ ಓದಿ: ತಮಿಳುನಾಡು ಬಿಹಾರ ಅಲ್ಲ: ಚುನಾವಣಾ ಆಯೋಗದ SIR ಅಳವಡಿಕೆಯನ್ನು ತಿರಸ್ಕರಿಸಿದ ಡಿಎಂಕೆ ಸಚಿವ ದುರೈ ಮುರುಗನ್
ಮೊದಲೇ ಭಾರತ ಮತ್ತು ಪಾಕ್ ಪಂದ್ಯಕ್ಕೆ ಭಾರೀ ನಿರೀಕ್ಷೆಯಿದೆ. ಹೀಗಿರುವಾಗ, ಪಂದ್ಯದ ಟಿಕೆಟ್ ಬೆಲೆ ಸಾಮಾನ್ಯವಾಗಿ ದುಬಾರಿ ಇರಲಿದೆ. ಅಂದರೆ, ಕೈಗೆಟುಕುವ ದರಕ್ಕಿಂತ ಮೀರಿದ್ದು. ಒಂದಷ್ಟು ಟಿಕೆಟ್‌ಗಳು ಕಡಿಮೆ ಬೆಲೆಗೆ ಸಿಕ್ಕರೆ, ಅದಕ್ಕಿಂತ ಮತ್ತೊಂದು ದರ್ಜೆಯ ಟಿಕೆಟ್ ಬೆಲೆಯು ಬರೋಬ್ಬರಿ 2.5 ಲಕ್ಷ ರೂ. ತಲುಪಿದೆ. ಇದೇ ಅಭಿಮಾನಿಗಳನ್ನು ಖರೀದಿಯಿಂದ ಹಿಂದೆ ಸರಿಯುವಂತೆ ಮಾಡಿದೆ ಎಂಬುದು ಮೊದಲ ಕಾರಣ.
ಪಹಲ್ಗಾಮ್ ಉಗ್ರರ ದಾಳಿಗೆ ಪಾಕ್ ಮೇಲೆ ಸೇಡು ತೀರಿಸಿಕೊಂಡ ಭಾರತ, ಪಾಪಿಸ್ತಾನದ ಉಗ್ರರ ನೆಲೆಯನ್ನು ಛಿದ್ರಗೊಳಿಸುವ ಮೂಲಕ ಪಾಪಿಗಳನ್ನು ಬಲಿಪಡೆಯಿತು. ಇದಾದ ಬಳಿಕ ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ, ವಹಿವಾಟು ನಡೆಸದಂತೆ ಎಲ್ಲ ಸಂಪರ್ಕವನ್ನು ಕಡಿತಗೊಳಿಸದ ಭಾರತ, ಕ್ರಿಕೆಟ್ ಆಡುವುದನ್ನೂ ಸಹ ಬಹಿಷ್ಕರಿಸಿತು. ಹೀಗಿರುವಾಗಲೇ, ಬಿಸಿಸಿಐ ಪಾಕ್ ಜತೆಗೆ ಟೀಮ್ ಇಂಡಿಯಾ ಏಷ್ಯಾಕಪ್ ಪಂದ್ಯ ಆಡುತ್ತಿದೆ ಎಂದು ಖಚಿತಪಡಿಸಿದ್ದು, ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿದೆ. ನಮ್ಮ ವೈರಿಗಳೊಂದಿಗೆ ಆಡುವುದು ಬೇಡ ಎಂದಿದ್ದ ಫ್ಯಾನ್ಸ್ ಮಾತನ್ನೇ ಪರಿಗಣಿಸದ ಬಿಸಿಸಿಐ ವಿರುದ್ಧ ಕೋಪಗೊಂಡಿರುವ ಭಾರತೀಯ ಕ್ರಿಕೆಟ್ ಪ್ರೇಮಿಗಳು, ಸ್ಟೇಡಿಯಂನಲ್ಲಿ ಪಂದ್ಯ ನೋಡಲು ನಿರಾಕರಿಸಿದ್ದಾರೆ. ಇದು ಟಿಕೆಟ್‌ಗಳು ಖರೀದಿ ಆಗದಿರಲು ಇರುವ ಮತ್ತೊಂದು ಕಾರಣ ಎನ್ನಲಾಗಿದೆ.
“ಪಂದ್ಯಗಳ ಮಾರಾಟದ ಹರಿವು ಬಹಳ ಕಡಿಮೆಯಾಗಿದೆ ಎಂಬ ವಿಚಾರ ತಿಳಿದು ಸ್ವತಃ ನಮಗೆ ಆಶ್ಚರ್ಯವಾಗಿದೆ. ನಾವು ಕಡಿಮೆ ಸ್ಟ್ಯಾಂಡ್‌ಗಳೊಂದಿಗೆ ಮಾತ್ರ ಸೋಲ್ಡ್ ಔಟ್ ಆಗಿದ್ದೇವೆ. ಆದರೆ, ಅದರ ಮೇಲಿನ ದರ್ಜೆಯ ಟಿಕೆಟ್‌ಗಳು ಖರೀದಿಯಾಗದೆ ಇನ್ನೂ ಬಾಕಿ ಉಳಿದಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೇ ದಿನದಲ್ಲಿ ಎರಡು ಬಾರಿ ನಾವು ಟಿಕೆಟ್ ವಿಂಡೋವನ್ನು ಮಧ್ಯಾಹ್ನ 2 ಮತ್ತು ಸಂಜೆ 4 ಗಂಟೆಗೆ ತೆರೆದಿದ್ದೆವು. ಮತ್ತು ಆ ಸಮಯದಲ್ಲಿ ನಮ್ಮ ಟಿಕೆಟ್‌ಗಳು 4 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ತಿ ಸೋಲ್ಡ್ ಔಟ್ ಆಗಿತ್ತು. ಆದರೆ, ಈ ಬಾರಿ ಕ್ರೇಜ್ ಕುಸಿದಿದೆ. ಇದಕ್ಕೆ ರೋಹಿತ್ ಮತ್ತು ವಿರಾಟ್ ಅನುಪಸ್ಥಿತಿಯು ಕಾರಣವಿರಬಹುದು” ಎಂದು ಎಮಿರೇಟ್ಸ್ ಕ್ರಿಕೆಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್).