IND vs PAK: ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಪಾಕಿಸ್ತಾನ, ಭಾರತಕ್ಕೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿದೆ. ಅಂತೆಯೇ ಅಖಾಡಕ್ಕಿಳಿದು ಬ್ಯಾಟಿಂಗ್ ಮಾಡುತ್ತಿದ್ದ ಪಾಕ್ ಆರಂಭಿಕ ಬ್ಯಾಟರ್ಗಳಿಬ್ಬರು ಇದೀಗ ಔಟ್ ಆಗಿ, ಪೆವಿಲಿಯನ್ಗೆ ಮರಳಿರುವುದು ಸದ್ಯ ಅಭಿಮಾನಿಗಳಲ್ಲಿ ಭಾರೀ ಖುಷಿ ತಂದಿದೆ.
10 ಓವರ್ ಅಂತ್ಯಕ್ಕೆ 55 ರನ್ ಗಡಿ ದಾಟಿರುವ ಪಾಕ್ಗೆ ಆರಂಭಿಕ ಆಘಾತ ಎದುರಾಗಿದೆ. ಸ್ಟಾರ್ ಬ್ಯಾಟರ್ಗಳಾದ ಬಾಬರ್ ಆಜಮ್ ಮತ್ತು ಇಮಾಮ್ ಇಬ್ಬರೂ ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಎನ್ನುವಂತೆ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಹಾದಿ ಹಿಡಿದರು. ಮೊದಲ ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ, ಕ್ರೀಸ್ನಲ್ಲಿದ್ದ ಬಾಬರ್ಗೆ ಬಾಯ್, ಬಾಯ್ ಎಂದು ಕೈಸನ್ನೆಯಲ್ಲಿ ಹೇಳಿದ ದೃಶ್ಯ ಸದ್ಯ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡಿದೆ.